
ಬಿಗ್ ಬಾಸ್ ಸೀಸನ್ 8ಕ್ಕೆ ನಿನ್ನೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಒಟ್ಟು ಹದಿನೇಳು ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ತಗೊಂಡಿದ್ದಾರೆ. ಕಿಚ್ಚ ಸುದೀಪ್ ತಮ್ಮ ಎಂದಿನ ಸ್ಟೈಲು, ಸ್ಮೈಲಿನೊಂದಿಗೆ ಎಲ್ಲ ಕನ್ನಡಿಗರನ್ನೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮನೆಯಲ್ಲಿ ನೂರು ದಿನ ಪೂರೈಸಿ ವಿಜಯಿಗಳಾಗಿ ಹೊರಬನ್ನಿ ಅಂತ ಹಾರೈಸಿ ಸ್ಪರ್ಧಿಗಳನ್ನು ಬೀಳ್ಕೊಟ್ಟಿದ್ದಾರೆ. ಆದರೆ ಅದಕ್ಕೂ ಮೊದಲು ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಅವರ ಬಗೆಗಿನ ಕೆಲವೊಂದು ಇಂಟೆರೆಸ್ಟಿಂಗ್ ವಿಚಾರಗಳನ್ನು ಹೊರಬಿಟ್ಟಿದ್ದಾರೆ. ಅದ್ರಲ್ಲೊಂದು ಇಂಟೆರೆಸ್ಟಿಂಗ್ ವಿಚಾರ ಅಗ್ನಿಸಾಕ್ಷಿಯ ಸನ್ನಿಧಿ, ಸದಾ ನಗುವ ಬಿಳಿ ಮೊಗದ ಚೆಲುವೆ ವೈಷ್ಣವಿ ಅವರ ಕುರಿತಾದದ್ದು. ಬಿಗ್ ಬಾಸ್ ಸೀಸನ್ 8ನ ಕಂಟೆಸ್ಟೆಂಟ್ ನಂ 5 ಆಗಿ ಎಂಟ್ರಿಕೊಟ್ಟಿದ್ದರು ಸನ್ನಿಧಿ. ರೇಷ್ಮೆ ಸೀರೆಯಲ್ಲಿ ಬೆಳದಿಂಗಳ ಚೆಲುವೆಯಂತೆ ಕಾಣುತ್ತಿದ್ದ ಈಕೆ ಹಲವರ ಮನಸೂರೆಗೊಂಡಿದ್ದು ಸುಳ್ಳಲ್ಲ. ಆದರೆ ಈಕೆಯ ಬಗ್ಗೆ ಸುದೀಪ್ ಹೇಳಿದ ಒಂದು ಗುಟ್ಟು ಎಲ್ಲರ ಮೊಗದಲ್ಲೂ ನಗೆ ತರಿಸಿತ್ತು.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ 17 ಜನರ ಪಟ್ಟಿ.. ಆ 3 ಟ್ವಿಸ್ಟ್ ! ...
'ವೈಷ್ಣವಿ ನೀವು ಅಮ್ಮನ ಸೆರಗಿನ ಹಿಂದೆಯೇ ಬಚ್ಚಿಟ್ಟುಕೊಂಡಿರುವ ಹುಡುಗೀನಾ? ನಿಮಗೆ ಅಮ್ಮನನ್ನು ಕಂಡರೆ ಅಷ್ಟು ಪ್ರೀತಿನಾ?' ಅಂತ ಸುದೀಪ್ ವೈಷ್ಣವಿ ಅವರನ್ನು ಪ್ರಶ್ನಿಸುತ್ತಾರೆ.
'ಅಮ್ಮನನ್ನು ಕಂಡರೆ ಪ್ರೀತಿ ಇದೆ. ಆದರೆ ಅಪ್ಪ ಅಮ್ಮ ಇಬ್ಬರಿಗೆ ಹೋಲಿಸಿದರೆ ಅಮ್ಮನಿಗಿಂತ ಅಪ್ಪನನ್ನು ಕಂಡರೆ ಒಂಚೂರು ಹೆಚ್ಚು ಪ್ರೀತಿ' ಅಂದರು.
'ನಿಮಗೆ ಪೊರಕೇಲಿ ಹೊಡೆಸ್ಕೊಳ್ಳೋದು ಅಂದ್ರೆ ಇಷ್ಟ ಅಂತೆ' ಅಂತ ನಗು ತಡೆದುಕೊಳ್ಳುತ್ತಾ ಕೇಳ್ತಾರೆ ಸುದೀಪ್.
'ಹೌದು' ಅಂತ ನಗ್ತಾರೆ ವೈಷ್ಣವಿ.
ಅದಕ್ಕೆ ಏನು ಕಾರಣ ಅನ್ನೋದನ್ನೂ ಬಿಚ್ಚಿಡುತ್ತಾರೆ. ವೈಷ್ಣವಿಗೆ ಪೊರಕೇಲಿ ಹೊಡಿಯೋದು ಬೇರೆ ಯಾರೂ ಅಲ್ಲ. ಅವರ ಸ್ವಂತ ಅಮ್ಮನೇ. ಅರೆರೇ, ಅಮ್ಮ ಮಕ್ಕಳಿಗೆ ಪೊರಕೇಲಿ ಹೊಡೀತಾರಾ ಅಂತ ಕೇಳೋ ಹಾಗಿಲ್ಲ. ಯಾಕೆಂದರೆ ಅದನ್ನು ವೈಷ್ಣವಿ ಬಹಳ ಇಷ್ಟಪಡುತ್ತಾರಂತೆ. ಒಂದಿಷ್ಟು ದಿನ ಅಮ್ಮ ಪೊರಕೇಲಿ ಹೊಡೀದಿದ್ರೆ ಅವರಿಗೆ ಏನೋ ಕಳ್ಕೊಂಡ ಫೀಲ್ ಆಗುತ್ತಂತೆ. ಅರೆರೇ, ಅಮ್ಮಂಗೇನಾದ್ರೂ ಬೇಜಾರಾಗಿರಬಹುದಾ, ಯಾಕೆ ಹೊಡೀತಾನೇ ಇಲ್ಲ.. ಅಂತ ಅವರು ಯೋಚಿಸ್ತಾರಂತೆ.
ಚಿಕ್ಕ ವಯಸ್ಸಿಂದಲೂ ಅಮ್ಮನ ಕೈಯಲ್ಲಿ ಪೊರಕೆ ಏಟು ತಿಂದೇ ಅಭ್ಯಾಸ ಇವರಿಗೆ.
'ಹೌದಾ ಅಮ್ಮ?' ಅಂತ ಸುದೀಪ್ ಕಿಲಾಡಿ ನಗೆ ನಗುತ್ತಾ ಕೇಳಿದ್ರೆ, ವೈಷ್ಣವಿ ಅಮ್ಮ ಹೀಗಂತಾರೆ.
ಗಂಡಾಂತರದಿಂದ ಪಾರಾದ ರಿಷಬ್ ಶೆಟ್ಟಿ; ಪೆಟ್ರೋಲ್ ಬಾಂಬ್ ಸಿಡಿಸೋ ವೇಳೆ ರಿಷಬ್‌ಗೆ ಹೊತ್ತಿಕೊಳ್ತು ಬೆಂಕಿ! ...
'ಮಕ್ಕಳನ್ನು ಶಿಸ್ತಲ್ಲಿ ಬೆಳೆಸಬೇಕು ಅಂತ ನಾನು ಚಿಕ್ಕ ವಯಸ್ಸಲ್ಲೇ ಅವರು ತಪ್ಪು ಮಾಡಿದ್ರೆ ಚೆನ್ನಾಗಿ ಏಟು ಹಾಕ್ತಿದ್ದೆ. ಇದರಿಂದ ಅವರಲ್ಲೊಂದು ಶಿಸ್ತು ಬೆಳೀತು. ನನಗೆ ನನ್ನ ಮಕ್ಕಳು ತಪ್ಪು ಮಾಡಿದ್ದು ಕಂಡ ತಕ್ಷಣ ಸಿಟ್ಟು ಬರುತ್ತೆ. ಕೈಗೆ ಸಿಕ್ಕಿದ್ರಲ್ಲಿ ಹೊಡೆಯೋದೆ, ಹಿಂದೆ ಮುಂದೆ ನೋಡಲ್ಲ. ಹೆಚ್ಚಾಗಿ ಆ ಟೈಮ್‌ನಲ್ಲಿ ಕೈಗೆ ಸಿಗೋದು ಪೊರಕೇನೇ' ಅಂತ ನಕ್ಕರು ವೈಷ್ಣವಿ ಅಮ್ಮ.
'ಸಾರ್, ನಿಮಗೂ ಪೊರಕೆ ಏಟು ಬಿದ್ದಿಲ್ವಾ?' ಅಂತ ವೈಷ್ಣವಿ ಅಪ್ಪನ್ನ ಕೇಳಿದ್ರೆ, 'ಇಲ್ಲಪ್ಪಾ, ಅವ್ರಿಗೆಲ್ಲ ಹೊಡೆಯಲ್ಲ, ಮಕ್ಕಳಿಗೆ ಮಾತ್ರ' ಅಂತಾರೆ ಅಮ್ಮ.
ಸುದೀಪ್ ಅಷ್ಟಕ್ಕೆ ಸುಮ್ಮನಾಗುವ ಪೈಕಿ ಅಲ್ಲ. 'ಮನೆಗೆ ಬೇಕಾದ ವಸ್ತುಗಳನ್ನೆಲ್ಲ ನೀವೇ ತರ್ತೀರಲ್ಲ ಸಾರ್, ಆಗ ಪೊರಕೆ ಹೆಚ್ಚೆಚ್ಚು ತರಲಿಕ್ಕೆ ಆರ್ಡರ್ ಆಗಿರಬಹುದು ಅಲ್ವಾ' ಅಂತ ಮತ್ತೆ ಕಾಲೆಳೆಯುತ್ತಾರೆ.
'ಸಾರ್, ಶಾಪಿಂಗ್‌ಗೆ ನನ್ನ ಜೊತೆಗೆ ಅವರೂ ಬರ್ತಾರೆ. ಅವರು ಮನೆಗೆ ಬೇಕಾದ್ದೆಲ್ಲ ತಗೊಳ್ತಾರೆ..' ಅಂತ ಮುಗ್ಧವಾಗಿ ಹೇಳ್ತಾರೆ.
' ಅಂದರೇ ಅವರೇ ಒಂದಕ್ಕೆರಡು ಪೊರಕೆ ತಗೊಳ್ತಾರೆ' ಅಂತ ಮತ್ತೆ ನಗಿಸ್ತಾರೆ ಕಿಚ್ಚ.
ಇಲ್ಲಿ ರಿವೀಲ್ ಆಗೋ ಮತ್ತೊಂದು ವಿಚಾರ ಅಂದ್ರೆ ವೈಷ್ಣವಿ ಯಾವುದಕ್ಕೂ ಹೆದರಲ್ಲ. ಆದರೆ ಅಮ್ಮನ್ನ ಕಂಡರೆ ಮಾತ್ರ ಭಯ ಪಡ್ತಾರೆ. ಆದರೆ ಅದರಿಂದ ತನಗೆ ಒಳ್ಳೆಯದೇ ಆಗಿದೆ ಅಂತಾರೆ ವೈಷ್ಣವಿ. 'ನಿಮ್ಮ ಮಗಳಾಗಿರ್ತೀನಿ' ಅಂತ ಹೇಳ್ತಾ ದೊಡ್ಡಮನೆಯೊಳಗೆ ಪ್ರವೇಶಿಸುತ್ತಾರೆ.
ವಾಣಿಜ್ಯ ನಗರಿಯಲ್ಲಿ ರಾಬರ್ಟ್ ಭರ್ಜರಿ ಹವಾ: ದರ್ಶನ್ ಕಂಡು ಪುಳಕಿತರಾದ ಹುಬ್ಳಿ ಮಂದಿ..! ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.