
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ದೊರೆಸಾನಿ ಸೀರಿಯಲ್ (Doresaani serial) ಕತೆ ಇಂಟರೆಸ್ಟಿಂಗ್ ಆಗುತ್ತಿದೆ. ಮುತ್ತು ಕೊಡೋ ಹುಡುಗ ಬಂದ್ಮೇಲೇ ಎಲ್ಲ ಹುಡುಗೀರು ತುತ್ತು ಕೊಟ್ಟ ಅಪ್ಪನ್ನ ಮರೀತಾರೆ. ಆದರೆ ದೊರೆಸಾನಿ ದೀಪಿಕಾ ಅಪ್ಪನೇ ಮುಖ್ಯ ಅಂತಿದ್ದಾಳೆ. ಮುತ್ತು ಕೊಡೋನು ಬಂದ್ರೂ ತುತ್ತು ಕೊಟ್ಟೋನ ಮರೆಯಲ್ಲ ಅಂತ ಗಟ್ಟಿ ನಿರ್ಧಾರ ಮಾಡಿದ್ದಾಳೆ. ವೀಕ್ಷಕರು ಮುಂದೇನಾಗಬಹುದು ಅಂತ ಕುತೂಹಲದಿಂದ ಕಾಯುತ್ತಿದ್ದಾರೆ. ಇದಕ್ಕೆ ಕಾರಣ ಇದೆ. ದೀಪಿಕಾ ಅಪ್ಪ ಪುರುಷೋತ್ತಮ ಲವ್ ಮ್ಯಾರೇಜ್ (Love marriage) ದ್ವೇಷಿ. ಯಾವ ಕಾರಣಕ್ಕೂ ಪ್ರೀತಿಸಿ ಮದುವೆ ಆಗಲ್ಲ ಅಂತ ದೇವರ ಮುಂದೆ ಮಗಳಿಂದ ಭಾಷೆ ಬೇರೆ ಪಡೆದಿದ್ದಾನೆ. ಆದರೆ ದೀಪಿಕಾ ಅರಿವಿಲ್ಲದಂತೆ ಆನಂದ್ (Anand) ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆದರೆ ಹುಡುಗನ ಪ್ರೀತಿ, ಅಪ್ಪನ ಪ್ರೀತಿ ಮುಂದೆ ಅವಳಿಗೆ ಅಪ್ಪನ ಪ್ರೀತಿಯೇ ಮುಖ್ಯ ಅನಿಸುತ್ತಿದೆ. ಹಿಂಗೆಲ್ಲ ಮಾಡಿದ್ರೆ ಮುಂದೆ ಮದ್ವೆ ಕಥೆ ಹೇಗಮ್ಮಾ ಅಂತ ಆನಂದ್ ಮಾತ್ರ ಅಲ್ಲ ಈ ಸೀರಿಯಲ್ ನೋಡೋ ಪ್ರೇಕ್ಷಕರೂ ಕೇಳ್ತಿದ್ದಾರೆ.
ದೀಪಿಕಾ ಮಧ್ಯಮ ವರ್ಗದ ಹುಡುಗಿ. ಅವಳ ಅಪ್ಪ ಪುರುಷೋತ್ತಮ ಮರ್ಯಾದೆಯೇ ಮುಖ್ಯ ಅಂದುಕೊಂಡಿರುವವರು. ಆಫೀಸ್‌ನಲ್ಲಿ ಅವರ ಬಾಸ್ ವಿಶ್ವನಾಥ್ ಆನಂದ್. ಎಷ್ಟೋ ಸಲ ಸಹೋದ್ಯೋಗಿಗಳ ಮಸಲತ್ತಿನಿಂದ ತನ್ನದಲ್ಲದ ತಪ್ಪಿಗೆ ಪುರುಷೋತ್ತಮ ಬಾಸ್ ಆನಂದ್ ಕೈಯಲ್ಲಿ ಬಯಿಸಿಕೊಂಡಿದ್ದಾರೆ. ಪದೇ ಪದೇ ರೇಗುವ ತನ್ನ ಮಗನ ವಯಸ್ಸಿನ ಆನಂದ್‌ನಿಂದಾಗಿ ಅವರಿಗೆ ಹಾರ್ಟ್ ಸಮಸ್ಯೆಯೂ (Heart problem) ಕಾಣಿಸಿಕೊಳ್ಳುತ್ತದೆ. ಆನಂದ್ ಗೂಬೆ ಬಾಸ್ ಆಗಿ ಪುರುಷೋತ್ತಮ ಮಾತ್ರ ಅಲ್ಲ, ಅವರ ಮನೆಯವರೆಲ್ಲರ ಕೋಪಕ್ಕೆ ತುತ್ತಾಗುತ್ತಾನೆ. ಈ ಆನಂದ್ ತಂದೆ ತಾಯಿ ಇಲ್ಲದ ಅನಾಥ. ಆತನ ಹಣಕ್ಕಾಗಿ ಹುಡುಗಿಯರು ಆತನ ಹಿಂದೆ ಬಿದ್ದರೂ ಈತ ಕೇರ್ ಮಾಡಲ್ಲ. ಇಂಥಾ ಟೈಮಲ್ಲಿ ಸರಳ ಹುಡುಗಿ ದೀಪಿಕಾ ಅವನ ಮನಸ್ಸು ಕದೀತಾಳೆ. ತಾನು ಶ್ರೀಮಂತ ಅಲ್ಲ ಅಂದರೆ ಅವಳು ಒಪ್ಪಿಕೊಳ್ಳುತ್ತಾಳೋ ಇಲ್ಲವೋ ಅಂತ ತಿಳಿಯಲು ತಾನು ಡ್ರೈವರ್ ಅಂತ ಸುಳ್ಳು ಹೇಳಿ ಅವಳ ಸ್ನೇಹ ಸಂಪಾದಿಸುತ್ತಾನೆ ಆನಂದ್. ಇತ್ತ ಮರ್ಯಾದೆಯಿಲ್ಲದ ಬದುಕಿಲ್ಲ ಅಂದುಕೊಂಡಿರುವ ಅಪ್ಪನಿಗೆ ಮಗಳನ್ನು ತಾನೇ ನಿಂತು ತಾನೇ ನೋಡಿದ ಹುಡುಗನ ಜೊತೆ ಮದುವೆ ಮಾಡಬೇಕು ಎಂಬ ಆಸೆ. ಒಂದು ಹಂತದಲ್ಲಿ ವಿಶ್ವನಾಥ ದೊಡ್ಡ ಕಂಪನಿ ಓನರ್ ಅಂತ ದೀಪಿಕಾಗೆ ತಿಳಿಯುತ್ತೆ. ಅವಳ ಸುಳ್ಳಿಗೆ ಸಿಟ್ಟಾದರೂ ಪ್ರೀತಿ ಅವರಿಬ್ಬರನ್ನೂ ಒಂದು ಮಾಡಿಸುತ್ತೆ. ಆದರೆ ಮತ್ತೊಂದು ತಿರುವಲ್ಲಿ ಅಪ್ಪನ ಗೂಬೆ ಬಾಸ್ ಅಂತ ದೀಪಿಕಾಗೆ ತಿಳಿಯುತ್ತದೆ. ಆ ವೇಳೆ ಅವಳು ಆನಂದನನ್ನು ಕ್ಷಮಿಸೋದೇ ಇಲ್ಲ ಅಂದುಕೊಂಡರೂ ಆತ ಹೇಳುವ ಪ್ರಾಮಾಣಿಕ ಮಾತಿಗೆ ಒಳ್ಳೆಯ ಮನಸ್ಸಿನ ರೂಪಿಕಾ ಕ್ಷಮಿಸುತ್ತಾಳೆ.
Jothe Jotheyali serial: ಜೊತೆ ಜೊತೆಯಲಿ ರೋಚಕ ಕತೆ, ರಾಜನಂದಿನಿಯೇ ಅನು ರೂಪದಲ್ಲಿ ಬರ್ತಿದ್ದಾಳಾ?
ಮುಂದೆ ದೀಪಿಕಾ ತಂದೆ ಪುರುಷೋತ್ತಮ ಬಳಿಯೂ ಆನಂದ್ ಕ್ಷಮೆ ಕೇಳುತ್ತಾನೆ. ತನ್ನ ಪರಿಸ್ಥಿತಿ ಹೇಳುತ್ತಾನೆ. ಪುರುಷೋತ್ತಮ ಅವರಲ್ಲಿ ಮಗಳನ್ನು ತನಗೆ ಮದುವೆ ಮಾಡುವಂತೆ ಕೇಳುತ್ತಾನೆ. ಆದರೆ ಈ ನಡುವೆ ದೀಪಿಕಾ ಆಗಲಿ, ಆನಂದ್ ಆಗಲಿ ತಾವು ಪ್ರೀತಿಸುತ್ತಿದ್ದವರು ಅನ್ನೋ ವಿಷಯವನ್ನು ಪುರುಷೋತ್ತಮ ಮುಂದೆ ಹೇಳಿಲ್ಲ. ಲವ್ ಮ್ಯಾರೇಜ್ ದ್ವೇಷಿ ಪುರುಷೋತ್ತಮ ಇವರಿಬ್ಬರೂ ಲವ್ ಮಾಡುತ್ತಿದ್ದಾರೆ ಅಂತ ಗೊತ್ತಾದರೆ ಮದುವೆಗೆ ಒಪ್ಪುವ ಸಾಧ್ಯತೆ ಕಡಿಮೆ. ಇಲ್ಲೀವರೆಗೆ ಪುರುಷೋತ್ತಮ ಕುಟುಂಬವನ್ನು ದ್ವೇಷಿಸುತ್ತಿದ್ದ ಸತ್ಯವತಿ ಹಾಗೂ ಅವಳ ಮಗಳಿಗೆ ದೀಪಿಕಾ ಬಡ ಡ್ರೈವರ್‌ನ ಪ್ರೀತಿಸುತ್ತಿದ್ದಾಳೆ ಅಂತಲೇ ಗೊತ್ತು. ಇದೀಗ ಆನಂದನೇ ಬಾಸ್ ಅಂತ ಗೊತ್ತಾಗಿದೆ. ದೊಡ್ಡ ಶ್ರೀಮಂತನನ್ನು ದೀಪಿಕಾ ಮದುವೆ ಆಗೋದಕ್ಕೆ ಖಂಡಿತಾ ಸತ್ಯವತಿ ಅಡ್ಡಗಾಲು ಹಾಕುತ್ತಾಳೆ, ಪುರುಷೋತ್ತಮನ ಮನಸ್ಸು ಕೆಡಿಸುತ್ತಾಳೆ. ಈ ಎಲ್ಲ ಅಡೆತಡೆಗಳ ನಡುವೆಯೂ ಒಳ್ಳೆಯ ಹುಡುಗಿ ದೀಪಿಕಾ ದೊರೆಯಂಥಾ ಹುಡುಗ ಆನಂದ ದೊರೆಸಾನಿ ಹೇಗಾಗ್ತಾಳೆ ಅನ್ನೋದೇ ಇಂಟರೆಸ್ಟಿಂಗ್ ಕಥೆ.
Ramachari serial: ಅಯ್ಯಯ್ಯೋ, ರಾಮಾಚಾರಿ ಪಕ್ಕದಲ್ಲೇ ಮಲ್ಕೊಂಬಿಟ್ಲು ಚಾರು, ಮುಂದೇನು?
ದೀಪಿಕಾ ಪಾತ್ರದಲ್ಲಿ ರೂಪಿಕಾ (Roopika) ನಟಿಸಿದರೆ, ವಿಶ್ವನಾಥ್ ಆನಂದ್ ಆಗಿ ಪೃಥ್ವಿರಾಜ್(Pruthviraj) ನಟಿಸುತ್ತಿದ್ದಾರೆ. ಜೈದೇವ್ ಮೋಹನ್(Jaidev Mohan) ಪುರುಷೋತ್ತಮ ಪಾತ್ರದಲ್ಲಿ ಪಳಗಿದ ಅಭಿನಯ ನೀಡುತ್ತಿದ್ದಾರೆ. ವಿಲನ್ ಸತ್ಯವತಿಯಾಗಿ ಭವಾನಿ ಪ್ರಕಾಶ್(Bhavani Prakash) ಕಾಣಿಸಿಕೊಂಡಿದ್ದಾರೆ.
Kannadathi Serial: ಮದ್ವೆ ಆಗಿದ್ದೇ ಹರ್ಷನ್ನ ಕಪಿ ಮುಷ್ಠಿ ಅಲ್ಲಲ್ಲ, ಬಿಗಿ ಮುಷ್ಠಿಲಿ ಹಿಡ್ಕೊತಾಳಂತೆ ಭುವಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.