ದುಲ್ಖರ್ ಸಲ್ಮಾನ್ ಜೊತೆ ನಟಿಸ್ತಾರಾ ಗಟ್ಟಿಮೇಳದ ನಟಿ ನಿಶಾ ಮಿಲನ?

Published : Jul 29, 2022, 06:35 PM IST
ದುಲ್ಖರ್ ಸಲ್ಮಾನ್ ಜೊತೆ ನಟಿಸ್ತಾರಾ ಗಟ್ಟಿಮೇಳದ ನಟಿ ನಿಶಾ ಮಿಲನ?

ಸಾರಾಂಶ

ಗಟ್ಟಿಮೇಳ ಸೀರಿಯಲ್‌ನ ಅಮೂಲ್ಯ ಅಂತಲೇ ಫೇಮಸ್ ಆಗಿರುವ ನಿಶಾ ಮಿಲನ ಇದೀಗ ಮಲಯಾಳಂ ಸೂಪರ್ ಸ್ಟಾರ್ ದುಲ್ಖರ್ ಸಲ್ಮಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರ ಅಲ್ಲ ತೆಲುಗಲ್ಲೂ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೀತಿರೋ ಈ ನಟಿ ಇದೀಗ ದುಲ್ಖರ್ ಸಲ್ಮಾನ್ ಜೊತೆಗೆ ಯಾಕೆ ಕಾಣಿಸಿಕೊಂಡಿದ್ದಾರೆ? ಅವರ ಸಿನಿಮಾದಲ್ಲೇನಾದ್ರೂ ಆಕ್ಟ್ ಮಾಡ್ತಿದ್ದಾರಾ?

ಗಟ್ಟಿಮೇಳ ಸೀರಿಯಲ್ ನೋಡೋರಿಗೆಲ್ಲ ತರಲೆ, ಚೇಷ್ಟೆಯ ರೌಡಿ ಬೇಬಿ ಅಮೂಲ್ಯ ಗೊತ್ತು. ಚುರುಕು ಮೆಣಿಸಿನ ಕಾಯಿ ಹಾಗೆ ಆಟಿಟ್ಯೂಡ್ ತೋರಿಸುವ ಈ ಪಾತ್ರಕ್ಕೆ ಎಲ್ಲರೂ ಶಹಭಾಸ್ ಅಂದವರೇ. ಈ ಪಾತ್ರವೇ ಹಾಗಿದೆಯಾ ಅಥವಾ ಈ ಪಾತ್ರ ಮಾಡ್ತಿರೋ ನಿಶಾ ಮಿಲನ ಅಮೂಲ್ಯ ಆಗಿ ಅಂಥಾ ಕ್ಯೂಟ್ ನಟನೆ ಮಾಡ್ತಿದ್ದಾರಾ ಗೊತ್ತಿಲ್ಲ. ಆದರೆ ಸೀರಿಯಲ್‌ನಲ್ಲಿ ಈ ಪಾತ್ರವಂತೂ ಸಖತ್ ಲವಲವಿಕೆಯಿಂದ ಬರುತ್ತಿದೆ. ಹೀಗಾಗಿ ಈ ಪಾತ್ರ ಮಾಡ್ತಿರೋ ನಿಶಾ ಮಿಲನ ಅವರಿಗೆ ಸಾಕಷ್ಟು ಫ್ಯಾನ್ ಫಾಲೊವಿಂಗ್ ಸಿಕ್ತಾ ಇದೆ. ಈ ಫ್ಯಾನ್‌ಗಳ ಪೊಸೆಸ್ಸಿವ್‌ನೆಸ್‌ ಬಗ್ಗೆ ಇತ್ತೀಚೆಗೆ ನಿಶಾ ಒಂದು ವೀಡಿಯೋ ಮಾಡಿ ಕ್ಲಾಸ್ ತಗೊಂಡಿದ್ರು. ಕಾರಣ ನಿಶಾ ಕನ್ನಡದ ಜೊತೆಗೆ ತೆಲುಗು ಸೀರಿಯಲ್‌ನಲ್ಲೂ ನಟಿಸುತ್ತಿದ್ದರು. ಅಲ್ಲಿನ ಕಲಾವಿದರ ಜೊತೆಗೆ ರೀಲ್ಸ್ ಮಾಡ್ತಿದ್ರು. ಆದ್ರೆ ಕನ್ನಡದಲ್ಯಾಕೆ ಮಾಡ್ತಿಲ್ಲ ಅನ್ನೋ ಕಂಪ್ಲೇಂಟ್ ಅಭಿಮಾನಿಗಳಿಂದ ಕೇಳಿಬಂತು. ಇದಕ್ಕೆ ನಿಶಾ ತಕ್ಕ ಉತ್ತರವನ್ನೂ ಕೊಟ್ಟರು. ಆದರೆ ಈಗ ಅವರ ಫ್ಯಾನ್ಸ್ ಹುಬ್ಬೇರೋ ಹಾಗೆ ಮಾಡಿರೋದು ಅವರ ಲೇಟೆಸ್ಟ್‌ ಫೋಟೋ. ಅದರಲ್ಲಿ ದುಲ್ಖರ್ ಸಲ್ಮಾನ್ ಜೊತೆಗೆ ನಿಶಾ ಮಿಲನ ಇದ್ದಾರೆ. ಕನ್ನಡ ಕಿರುತೆರೆ ಹುಡುಗಿಗೆ ಮಲಯಾಳಂ ಸೂಪರ್‌ಸ್ಟಾರ್ ಜೊತೆಗೆ ಏನ್ ಕೆಲ್ಸ? ಇಬ್ರೂ ಜೊತೆಯಾಗಿ ಸಿನಿಮಾದಲ್ಲಿ ನಟಿಸ್ತಿದ್ದಾರಾ ಅನ್ನೋ ಪ್ರಶ್ನೆ ಈ ಫೋಟೋ ನೋಡಿದ ಕೂಡಲೇ ಮನಸ್ಸಿಗೆ ಬರುತ್ತೆ.

ಇನ್ನೊಂದೆಡೆ ದುಲ್ಖರ್ ಸಲ್ಮಾನ್ 'ಸೀತಾ ರಾಮಂ' ಚಿತ್ರ ಎಲ್ಲೆಲ್ಲೂ ಸದ್ದು ಮಾಡ್ತಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ. ಈ ತೆಲುಗು ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೃಣಾಲ್ ಠಾಕೂರ್ ಅವರಿಗೆ ನಾಯಕಿ. ವಿಶಾಲ್ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾ ಮುಂದಿನ ಶುಕ್ರವಾರ ಅಂದರೆ ಆ.೫ಕ್ಕೆ ತೆರೆ ಕಾಣಲಿದೆ. ಸದ್ಯಕ್ಕೀಗ ದುಲ್ಖರ್ ಸಲ್ಮಾನ್ ಈ ಸಿನಿಮಾದ ಪ್ರಚಾರದ ಓಡಾಟದಲ್ಲಿದ್ದಾರೆ. ಅಲ್ಲಲ್ಲಿ ಅವರು ಆಡುವ ಮಾತು ವೈರಲ್ ಆಗ್ತಿದೆ.

ಅದರಲ್ಲೂ ಬಹಳಷ್ಟು ಮಂದಿ ಹುಡುಗಿಯರ ಹೃದಯ ಚೂರಾಗುವಂಥಾ ಮಾತನ್ನು ಈ ಪ್ರಚಾರದ ಈವೆಂಟ್‌ನಲ್ಲಿ ದುಲ್ಖರ್ ಹೇಳಿದ್ದಾರೆ. 'ಇದೇ ನನ್ನ ಕೊನೆಯ ರೊಮ್ಯಾಂಟಿಕ್(Romantic) ಸಿನಿಮಾ' ಅಂತ. ದುಲ್ಖರ್ ಗೆ ಮದುವೆಯಾಗಿ ಮಗುವಿದ್ದರೂ ಇಂದಿಗೂ ಅವರು ಎಷ್ಟೋ ಜನ ಹುಡುಗಿಯರ ಕನಸಿನ ಹುಡುಗ. ಅವರ ರೊಮ್ಯಾಂಟಿಕ್ ಸಿನಿಮಾ ನೋಡ್ತಾ ಅವರಿಗೆ ಕಾಳು ಹಾಕೋ ಹುಡುಗಿಯರೆಷ್ಟೋ. ಇನ್ಮೇಲೆ ದುಲ್ಖರ್ ಹಿಂದಿನ ಚಿತ್ರಗಳನ್ನಷ್ಟೇ ನೋಡ್ಬೇಕು ಅನ್ನೋದು ಅವರಿಗೆ ಬೇಸರ ತರಿಸಿದೆ.

ಕೆಟ್ನಾಗಿ ಕಮೆಂಟ್ಸ್ ಮಾಡೋರಿಗೆ ಕ್ಲಾಸ್ ತಗೊಂಡ ಗಟ್ಟಿಮೇಳದ ಅಮೂಲ್ಯ

ಇರಲಿ, ಈಗ ಮ್ಯಾಟರಿಗೆ ಬರೋಣ. ದುಲ್ಖರ್ ಎಲ್ಲೆಲ್ಲೂ 'ಸೀತಾ ರಾಮಂ' ಸಿನಿಮಾದ ಪ್ರಚಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗೆ ಪ್ರಚಾರಕ್ಕೆಂದು ತೆಲುಗಿನ ಶೋ(Reality Show) ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಮೃಣಾಲ್ ಸಹ `ಸೀತಾ ರಾಮಂ’ ಚಿತ್ರದ ಪ್ರಚಾರ(Promotion)ಕ್ಕಾಗಿ ಬಂದಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರನ್ನು ನಿಶಾ ಭೇಟಿಯಾಗಿದ್ದಾರೆ. ಈ ಶೋನಲ್ಲಿ ತನ್ನ ತೆಲುಗು ಸೀರಿಯಲ್‌ನ ಸಹ ನಟ ಸಿದ್ದು ಜತೆ ನಿಶಾ ಹೆಜ್ಜೆ ಹಾಕಿದ್ದರು. ನಿಶಾ ಅವರ ಡ್ಯಾನ್ಸ್(Dance) ನೋಡಿ ಎಲ್ರೂ ಚಪ್ಪಾಳೆ ತಟ್ಟಿದ್ರು. ದುಲ್ಕರ್ ಸಲ್ಮಾನ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಮಾತಿಗೆ ನಿಶಾ ಸಖತ್ ಖುಷಿಪಟ್ಟಿದ್ದಾರೆ. ಈ ವೇಳೆ ದುಲ್ಖರ್ ಜೊತೆಗೆ ನಿಶಾ ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನು ಅವರ ಬರ್ತ್ ಡೇ ದಿನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Doresaan ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್ : ಸತ್ಯವತಿ ಮಗನೇ ಆನಂದ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?