
ಕನ್ನಡ ಕಿರುತೆರೆಯ ಜನಪ್ರಿಯ ನಟರಲ್ಲಿ ಚಂದು ಗೌಡ ಕೂಡ ಒಬ್ಬರು. ಬಹುಬೇಡಿಕೆಯ ನಟ ಚಂದು ಸದ್ಯ ಕಥೆಯೊಂದು ಶುರುವಾಗಿದೆ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಧಾರಾವಾಹಿ, ಶೂಟಿಂಗ್ ಅಂತ ಎಷ್ಟೇ ಬ್ಯುಸಿ ಇದ್ದರೂ ಚಂದು ಗೌಡ ಕುಟುಂಬದ ಜೊತೆ ಅದರಲ್ಲೂ ಮುದ್ದಾದ ಮಗಳಿಗೆ ಹೆಚ್ಚು ಸಮಯ ಕೊಡುತ್ತಾರೆ. ಮಗಳ ಜೊತೆ ಹೆಚ್ಚಾಗಿ ಇರುತ್ತಾರೆ. ಇದಕ್ಕೆ ಸಾಕ್ಷಿ ಇತ್ತೀಚೆಗಷ್ಟೆ ಶೇರ್ ಮಾಡಿರುವ ಹೊಸ ವಿಡಿಯೋ. ಚಂದು ಗೌಡ ಮತ್ತು ಪತ್ನಿ ಶಾಲಿನಿ ಮಗಳ ಕಿವಿ ಚುಚ್ಚುವ ಶಾಸ್ತ್ರದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಂದು ಗೌಡ ಭಾವುಕರಾಗಿದ್ದಾರೆ.
ಚಂದು ಗೌಡ ಇತ್ತೀಚೆಗಷ್ಟೆ ಮಗಳಿಗೆ ಕಿವಿ ಚುಚ್ಚಿಸಿದ್ದಾರೆ. ಕಿವಿ ಚುಚ್ಚುವ ವೇಳೆ ಚಂದು ಜೊತೆಯಲ್ಲೇ ಇದ್ದಾರೆ. ಮಗಳನ್ನು ಕಾಲ ಮೇಲೆ ಕೂರಿಸಿಕೊಂಡು ಕುಳಿದ್ದಾರೆ ಚಂದು. ಮಗಳಿಗೆ ಕಿವಿ ಚುಚ್ಚುವಾಗ ಕಣ್ಣೀರಾಕಿದ್ದಾರೆ. ಪಕ್ಕಕ್ಕೆ ತಿರುಗಿಕೊಳ್ಳುತ್ತಾರೆ. ಮಗಳ ಅಳು ನೋಡಲಾರದೆ ಭಾವುಕರಾಗಿದ್ದಾರೆ. ಈ ವಿಡಿಯೋವನ್ನು ಚಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚಂದು ಜೊತೆಗೆ ಪತ್ನಿ ಶಾಲಿನಿ ಕೂಡ ಇದ್ದಾರೆ.
ಈ ಬಗ್ಗೆ ಚಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ನನ್ನ ಮಗಳಿಗೆ ಇದು ಕಿವಿ ಚುಚ್ಚುವ ಕ್ಷಣವಾಗಿತ್ತು. ಆದರೆ ಅವಳ ಅಳುವನ್ನು ನೋಡಿ ನನ್ನ ಹೃದಯಕ್ಕೆ ಚುಚ್ಚಿದಂತೆ ಭಾಸವಾಯಿತು' ಎಂದು ಹೇಳಿದ್ದಾರೆ. ಶೂಟಿಂಗ್ ಬ್ಯುಸಿಯ ನಡುವೆ ಮಗಳ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಹೆಚ್ಚು ಸಮಯ ಶೂಟಿಂಗ್ ಮತ್ತು ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಪ್ರಯಾಣದಲ್ಲೇ ಆಗುತ್ತೆ. ನಾನು ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬಹಿರಂಗ ಪಡಿಸಿದ್ದರು.
ಮಗಳ ಫೋಟೋ ರಿವೀಲ್ ಮಾಡಿದ ಕಿರುತೆರೆ ನಟ ಚಂದು ಗೌಡ
ಪತ್ನಿ ಹಾಗೂ ನನ್ನ ತಾಯ ಹೆಚ್ಚು ಸಹಾಯ ಮಾಡುತ್ತಿದ್ದಾರೆ. ಎರಡೂ ಕಡೆ ಬ್ಯಾಲೆನ್ಸ್ ಮಾಡಲು ಅವರು ಬೆಂಬಲ ನೀಡುತ್ತಿದ್ದಾರೆ. ನನ್ನ ಪತ್ನಿ ಸಂಪೂರ್ಣವಾದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ಪತ್ನಿ ತಾಯಿ ಮತ್ತು ತಂದೆ ಎರಡು ಜವಾಬ್ದಾರಿ ನಿಭಾಯಿಸುತ್ತಾಳೆ. ನಾನು ಮಗಳನ್ನು ಮುದ್ದು ಮಾಡುತ್ತೇನೆ. ಆಕೆ ಜೊತೆ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಕಿರುತೆರೆಯ ಸ್ಟಾರ್ ನಟರ ಸುಂದರಿ ಹೆಂಡ್ತೀರು…ಹೀಗಿದ್ದಾರೆ ನೋಡಿ…
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಆಗಿ ಹೊರಹೊಮ್ಮಿರುವ ನಟ ಚಂದು ಗೌಡ, ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡದಲ್ಲಿ ಚಂದು ಕಥೆಯೊಂದು ಶುರುವಾಗಿದೆ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಚಂದು ಕೆಲವು ಸಿನಿಮಾಗಳಲ್ಲೂ ನಟಿಸುವ ಮೂಲಕ ದೊಡ್ಡ ಪರದೆ ಮೇಲು ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.