ಹೆಂಡ್ತಿ ಹಾಕೋ ಬಟ್ಟೆನ ನೀಟಾಗಿ ನೋಡಿ; ಚಂದನ್‌ ಜೊತೆ ಜಗಳ ಮಾಡ್ಕೊಂಡು ಗಿಫ್ಟ್‌ ತೆಗೆಸಿಕೊಂಡ ನಿವೇದಿತಾ ಗೌಡ

By Vaishnavi Chandrashekar  |  First Published Jan 27, 2023, 6:09 PM IST

ಎರಡು ಬ್ಯಾಗ್‌ಗಳ ತುಂಬಾ ಬಟ್ಟೆ ಕಂಡು ಶಾಕ್ ಆದ ನೆಟ್ಟಿಗರು. ನಿವೇದಿತಾ ಗೌಡ ಪತಿಯಿಂದ ಪಡೆದುಕೊಂಡಿರುವ ಗಿಫ್ಟ್‌ಗಳ ಲಿಸ್ಟ್‌ ನೋಡಿ.... 


ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೊತೆ ಯೂಟ್ಯೂಬ್ ಚಾನೆಲ್‌ನಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ. ಒಂದೇ ರೀತಿ ಕಂಟೆಂಟ್‌ನ ಕೊಟ್ಟರೆ ಜನರು ನೋಡುವುದಿಲ್ಲ ಇಷ್ಟ ಪಡುವುದಿಲ್ಲ ಎಂದು ತಮ್ಮ ಪರ್ಸನಲ್‌ ಲೈಫ್‌ನ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಈಗ ಚಂದನ್ ಶೆಟ್ಟಿ ತಂದುಕೊಟ್ಟಿರುವ ಎರಡು ಬ್ಯಾಗ್ ಗಿಫ್ಟ್‌ಗಳನ್ನು ತಮ್ಮ ಫಾಲೋವರ್ಸ್‌ಗೆ ತೋರಿಸಿದ್ದಾರೆ. 

'ಚಂದನ್‌ ನನಗೆ ಯುಎಸ್‌ನಿಂದ ಏನ್ ಏನು ಗಿಫ್ಟ್ ತಂದಿದ್ದಾರೆಂದು ವಿಡಿಯೋ ಮೂಲಕ ತೋರಿಸುವೆ. ಒಂದು ತಿಂಗಳು 8 ದಿನಗಳ ಕಾಲ ಟ್ರಿಪ್ ಮಾಡಿದ್ದಾರೆ ಚಂದನ್. ದಿನಕ್ಕೊಂದು ಗಿಫ್ಟ್‌ ತರಬೇಕು ಎಂದು ಹೇಳಿದ್ದೆ, ಹೇಗೋ ಮ್ಯಾನೇಜ್ ಮಾಡಿಕೊಂಡು ನಾನು ಇಷ್ಟ ಪಡುವ ವಸ್ತುಗಳನ್ನು ತಂದಿದ್ದಾರೆ. ಅದರಲ್ಲೂ ತುಂಬಾ ಇಷ್ಟವಾಗುವುದು ಜನಪ್ರಿಯ ಬ್ರ್ಯಾಂಡ್‌ನಿಂದ 7 ಚಿಟ್ಟೆಗಳಿರುವ ಬ್ರೇಸ್‌ಲೇಟ್‌ ತಂದಿದ್ದಾರೆ' ಎಂದು ಹೇಳುವ ಮೂಲಕ ನಿವಿ ವಿಡಿಯೋ ಆರಂಭಿಸಿದ್ದಾರೆ.

Tap to resize

Latest Videos

ಕಾಡು ಪ್ರಾಣಿ ಲದ್ದಿ ಕಾಫಿ ಕುಡಿಯಲು ಹೆದರಿಕೊಂಡ ನಿವೇದಿತಾ ಗೌಡ; ನೈಟ್‌ಲೈಫ್‌ ವಿಡಿಯೋ ವೈರಲ್

'ಹಲವು ದಿನಗಳಿಂದ ನನಗೆ ಐ-ವಾಚ್ ಬೇಕು ಬೇಕು ಎನ್ನುತ್ತಿದ್ದೆ. ವಾಚ್‌ನ ಕೂಡ ಚಂದನ್ ಅಲ್ಲಿಂದ ತಂದುಕೊಟ್ಟಿದ್ದಾರೆ. ನಾನೇ ಇದನ್ನು ಖರೀದಿ ಮಾಡಬೇಕು ಎನ್ನುತ್ತಿದ್ದೆ, ಮಧ್ಯದಲ್ಲಿ ನಾವಿಬ್ಬರೂ ಸ್ವಲ್ಪ ಜಗಳ ಮಾಡಿದ್ವಿ ಅದಿಕ್ಕೆ ಚಂದನ್ ಸರಿ ನೀನು ಏನೂ ಖರೀದಿ ಮಾಡಬೇಡ ನಾನು ಗಿಫ್ಟ್‌ ಆಗಿ ಕೊಡಿಸುವೆ ಎಂದಿದ್ದರು. ಅದರಂತೆ ತಂದು ಪಿಂಕ್ ಬಣ್ಣದ ವಾಚ್ ತಂದುಕೊಟ್ಟಿದ್ದಾರೆ' ಎಂದು ನಿವಿ ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಚಂದನ್ ತಂದಿರುವ ಪ್ರತಿಯೊಂದು ಬಟ್ಟೆಯನ ಕವರ್ ತೆಗೆದು ತೋರಿಸಿದ್ದಾರೆ. ಎರಡು ಬ್ಯಾಗ್‌ ಗಿಫ್ಟ್‌ಗಳಲ್ಲಿ ಯಾವುದು ಇಷ್ಟ ಯಾವುದು ಇಷ್ಟವಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಅದರಲ್ಲೂ ನಿವಿ ಬಳಿ ಈಗಾಗಲೆ ಇರುವ ಸ್ಕರ್ಟ್‌ನ ಚಂದನ್ ಮತ್ತೆ ತಂದಿದ್ದಾರೆ 'ಹೆಂಡ್ತಿ ಏನು ಹಾಕೋತ್ತಾರೆಂದು ಗಂಡ ನೋಡಬೇಕು' ಎಂದು ಟಾಂಗ್ ಕೊಟ್ಟಿದ್ದಾರೆ. 

ನಾನಿನ್ನೂ ಅಪ್ಪ ಆಗ್ತಿಲ್ಲ ಕಣ್ರೋ, ಮಗು ಮಾಡ್ಕೊಳಕ್ಕೆ ರೆಡಿಯೇ ಆಗಿಲ್ಲ: ಚಂದನ್ ಶೆಟ್ಟಿ ಕ್ಲಾರಿಟಿ

'ಚಂದನ್ ಪ್ಯಾರಿಸ್‌ಗೆ ಹೋದ್ರೆ ಅಲ್ಲಿಂದ ಕೀ ಚೈನ್ ಗಳನ್ನು ತರಬೇಕು ಎಂದು 100 ಸಲ ಹೇಳಿರುವೆ. ತಂದಿದ್ದಾರೆ ಈಗ ಅದನ್ನು ಎಲ್ಲಿ ಇಟ್ಟಿರುವೆ ಎಂದು ನೆನಪಿಲ್ಲ ಆದರೆ ಮನೆಯಲ್ಲಿದೆ. ಚಂದನ್ ಇದು ಬೇಕು ಅದು ಬೇಕು ಎಂದು ಏನೂ ಹೆಚ್ಚಿಗೆ ಕೇಳಿಕೊಂಡಿಲ್ಲ ಆದರೆ ಕೀ ಚೈನ್ ನ ಮಾತ್ರ ಹೋಗುವ ದಿನದಿಂದ ಬರುವ ದಿನವರೆಗೂ ಕೀ ಚೈನ್ ತಂದ್ರಾ ಎಂದು ಮಾತ್ರ ಕೇಳುತ್ತಿದ್ದೆ. ವಿಕ್ರಂ ಬೇತಾಳ ಸಿನಿಮಾ ರೀತಿ ನಾನು ಬೇತಾಳ ತರ ಹಿಂದೆ ಬಿದ್ದು ಕೇಳುತ್ತಿದ್ದೆ. ಚಂದನ್ ಇಷ್ಟೊಂದು ಗಿಫ್ಟ್‌ ತಂದು ಕೊಟ್ಟಿರುವುದಕ್ಕೆ ತುಂಬಾನೇ ಖುಷಿಯಾಗಿರುವೆ. ಮುಂದಿನ ಸಲ ನಾನು ಚಂದನ್ ಜೊತೆ ಟ್ರಿಪ್ ಹೋದ್ರೆ ಇಷ್ಟೊಂದು ಗಿಫ್ಟ್‌ ಸಿಗುವುದಿಲ್ಲ. ನೀನು ಶಾಪ್ ಮಾಡುವೆ ನಿನಗೆ ಏನು ಬೇಕೋ ತಗೋ ಎನ್ನುತ್ತಾರೆ. ಹೀಗಾಗಿ ಮುಂದಿನ ಸಲ ನಾನು ಹೋಗಬೇಕಾ ಬೇಡ್ವಾ ಎಂದು ಯೋಚಿಸುತ್ತಿರುವೆ' ಎನ್ನುತ್ತಾರೆ ನಿವೇದಿತಾ ಗೌಡ. 

 

click me!