
ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ಯೂಟ್ಯೂಬ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಡಯಟ್, ಬ್ಯೂಟಿ ಟಿಪ್ಸ್, ಸ್ಕಿನ್ ಕೇರ್, ಹೇರ್ ಕೇರ್ ಮತ್ತು ಟ್ರ್ಯಾವಲ್ ವಿಡಿಯೋ ಅಪ್ಲೋಡ್ ಮಾಡುತ್ತಿರುವ ಸುಂದರಿ ಇದೀಗ A Night in my Life ಹೇಗಿರುತ್ತದೆ ಎಂದು ತೋರಿಸಿದ್ದಾರೆ. ಒಬ್ಬರೇ ಮನೆಯಲ್ಲಿದ್ದರೆ ಏನೆಲ್ಲಾ ಸಿಂಪಲ್ ಅಡುಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
'ನೈಟ್ ನನಗೆ ನಿದ್ರೆ ಬರೋಲ್ಲ ಅಂತ ನಿಮಗೆ ಗೊತ್ತಿದೆ. ರಾತ್ರಿ ನಾನು ಸರಿಯಾಗಿ ನಿದ್ರೆ ಮಾಡುವುದಿಲ್ಲ ಎಲ್ಲಾ ಸೀರಿಸ್‌ನ ನೋಡಿ ನೋಡಿ ಮುಗಿಸಿರುವೆ. ನನಗೆ ಇಷ್ಟವಾದ ಸೀರಿಸ್‌ನ ಈಗಾಗಲೆ 12-13 ಸಲ ನೋಡಿರುವೆ ಮತ್ತೆ ಅದೇ ನೋಡಿದ್ದರೆ ಚಂದನ್ ನನ್ನನ್ನು ಮನೆಯಿಂದ ಹೊರ ಹಾಕುತ್ತಾರೆ. ಮೊಬೈಲ್‌ನಲ್ಲಿ ಏನಾದರೂ ಹುಡುಕಿ ನೋಡಬೇಕು ಏನೂ ಇಲ್ಲ ಅಂದ್ರೆ ಇನ್‌ಸ್ಟಾಗ್ರಾಂ ನೋಡಬಹುದು' ಎಂದೇಳುವ ಮೂಲಕ ನಿವಿ ವಿಡಿಯೋ ಆರಂಭಿಸಿದ್ದಾರೆ.
'ಇವತ್ತು ಮನೆಯಲ್ಲಿ ಯಾರೂ ಇಲ್ಲ ಒಬ್ಬಳೆ ಇದ್ರೆ ನಾನು ಫುಲ್ ನಿದ್ರೆ ಮಾಡುವುದಿಲ್ಲ ಬೇರೆ ಅವರದ್ದು ದಿನ ಹೇಗಿರುತ್ತೆ ಹಾಗೆ ನನ್ನ ರಾತ್ರಿ ಇರುತ್ತೆ. ಮನೆಯಲ್ಲಿ ಚಂದನ್ ಇದ್ರೆ ನಾನು ಫುಲ್ ಸೇಫ್ ಆಗಿರುತ್ತೀನಿ ನನ್ನವರು ಮನೆಯಲ್ಲಿದ್ದಾರೆ ಅಂತ. ಮನೆಯಲ್ಲಿ ಯಾರೂ ಇಲ್ಲ ಅಂದ್ರೆ ಭಯ ಭಯ ಆಗುತ್ತೆ. ಇಡೀ ಮನೆ ಲೈಟ್ ಹಾಕಿ ಓಡಾಡುತ್ತಿರುತ್ತೀನಿ, ಇಲ್ಲಿ ಸೇಫ್ ಇದೆ ಅಲ್ಲಿ ಸೇಫ್ ಇದೆ ಅಂತ ಇಡೀ ಮನೆನ ಚೆಕ್ ಮಾಡುತ್ತೀನಿ. ಇವತ್ತು ನಾನು ತುಂಬಾ ಬ್ಯುಸಿಯಾಗಿದ್ದೆ ಗಿಚ್ಚಿ ಗಿಲಿಗಿಲಿ ಶೋ ಇತ್ತು. ರಾತ್ರಿ ರೆಸ್ಟ್ ಮಾಡಬೇಕು ಅಂದ್ರು ನಿದ್ರೆ ಬರ್ತಿಲ್ಲ' ಎಂದು ನಿವೇದಿತಾ ಮಾತನಾಡಿದ್ದಾರೆ.
ಉದ್ದ ಕೂದಲಿದ್ದರೂ ಎಷ್ಟು ಸಿಂಪಲ್ ನೋಡಿ ನಿವೇದಿತಾ ಗೌಡ ಹೇರ್‌ಸ್ಟೈಲ್!
ಹೆಲ್ತಿ ಜ್ಯೂಸ್:
ಬೆಚ್ಚಗಿರುವ ನೀರಿಗೆ ನಾನು ಒಂದು ಸ್ವಲ್ಪ ಶುಂಠಿ ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಕುಡಿಯುತ್ತೀನಿ. ನಾನು ಸಕ್ಕರೆ ಬಳಸುವುದಿಲ್ಲ ನೀವು ದಿನ ಕುಡಿಯುವವರಾದರೆ ಶುಂಠಿ ಕಡಿಮೆ ಬಳಸಬೇಕು, ಬೇಕಿದ್ದರೆ ಸಕ್ಕರೆ ಹಾಕಿಕೊಳ್ಳಿ ಎಂದಿದ್ದಾರೆ ನಿವಿ.
'ಪೇಜೆಂಟ್ ಗೋಸ್ಕರ ನಾನು ಹೊಸ ಸೂಟ್‌ಕೇಸ್ ಖರೀದಿಸಿರುವೆ. ಬಟ್ಟೆ ತುಂಬಿಸಿರುವುದಕ್ಕೆ ನಾನು ಅದರ ಮೇಲೆ ಕುಳಿತುಕೊಂಡು ಲಾಕ್ ಮಾಡಿರುವೆ. ಇಷ್ಟೆ ನನಗೆ ಸಾಕಾಗುವುದಿಲ್ಲ ಹೀಗಾಗಿ 7 ಕೆಜಿಯ ಹ್ಯಾಂಡ್‌ಬ್ಯಾಗ್ ಕ್ಯಾರಿ ಮಾಡುತ್ತೀನಿ. ಈಗ ದಿನ ಏನು ಧರಿಸಬೇಕು ಅಂತ ನಾನು ಮೊದಲೇ ನಿರ್ಧರ ಮಾಡಿ ಪ್ಯಾಕ್ ಮಾಡಿಕೊಂಡಿರುವೆ' ಎಂದು ನಿವಿ ಹೇಳಿದ್ದಾರೆ.
ಪ್ರಾಕ್ಟೀಸ್ ಮಾಡಿದ್ದರೂ ನಿವೇದಿತಾ ಕೈ ಮೇಲೆ ಡೈಲಾಗ್ ಬರ್ಕೋಳೋದು ಈ ಕಾರಣಕ್ಕಂತೆ!
Mrs India ಸತ್ಯ ಬಯಲು ಮಾಡಿದ ನಿವೇದಿತಾ ಗೌಡ:
'ಬೇರೆ ಬೇರೆ ರಾಜ್ಯಗಳಿಂದ ಸ್ಪರ್ಧಿಗಳು ಬರುತ್ತಾರೆ. 7 ದಿನಗಳ ಕಾಲ ಮುಂಬೈನಲ್ಲಿ ವಾಸವಿರಬೇಕು. ಎಷ್ಟು ಪ್ಯಾಕಿಂಗ್ ಮಾಡಬೇಕು ಅಂದ್ರೆ ದಿನಕ್ಕೆ ಮೂರು ಸಲ ಬಟ್ಟೆ ಬದಲಾಯಿಸಬೇಕು ಅಂದ್ರೆ 7 ದಿನಕ್ಕೆ 21 ಬಟ್ಟೆ ಆಗುತ್ತದೆ ಜೊತೆಗೆ ನಾನು ಬೇರೆ ಬಟ್ಟೆನೂ ತೆಗೆದುಕೊಂಡು ಹೋಗಬೇಕು ಒಟ್ಟು 30 ಜೊತೆ ಬೇಕೆ ಬೇಕು. ಇದಕ್ಕೆ ಮ್ಯಾಚ್ ಆಗುವ ರೀತಿಯಲ್ಲಿ ಹೀಲ್ಸ್ ಮತ್ತು ಚಪ್ಪಲಿ ತೆಗೆದುಕೊಂಡು ಹೋಗಬೇಕು. ಎಲ್ಲಾ ಬಟ್ಟೆಗಳಿಗೂ ಹೊಂದಿಕೊಳ್ಳುವಂತೆ ಆಭರಣ ಮ್ಯಾಚ್ ಮಾಡಿಕೊಳ್ಳಬೇಕು. ಡಿಸೈನರ್ ಹ್ಯಾಂಡ್ ಬ್ಯಾಗ್ ಕೂಡ ಬೇಕೆ ಬೇಕೆ. ಪ್ಯಾಕಿಂಗ್ ಮಾಡುವುದು ಸಖತ್ ಟ್ರಿಕಿಯಾಗಿರುತ್ತದೆ ಏಕೆಂದರೆ ಪ್ರಯಾಣ ಮಾಡುವಾಗ ಎಲ್ಲನೂ ಮ್ಯಾನೇಜ್ ಮಾಡುವುದು ಕಷ್ಟ ಆಗುತ್ತದೆ. ಇಷ್ಟೆಲ್ಲಾ ಫಿಟ್ ಆಗಬೇಕು ಅಂದ್ರೆ ದೊಡ್ಡ ಬ್ಯಾಗ್ ಬೇಕು. ಆರಂಭದಲ್ಲಿ ಇಂಡಕ್ಷನ್ ರೌಂಡ್ ಇರುತ್ತದೆ ರ್ಯಾಂಪ್ ವಾಕ್ ಅಭ್ಯಾಸ ಮಾಡಿಸುತ್ತಾರೆ. ಒಟ್ಟು 60 ಜನ ಮಹಿಳೆಯರು ಬರುತ್ತಾರೆ ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತೀವಿ ಎಷ್ಟು ಸ್ನೇಹಿತರನ್ನು ಸಂಪಾದಿಸುತ್ತೀನಿ ನೋಡಬೇಕು' ಎಂದು ನಿವೇದಿತಾ ಗೌಡ ಹೇಳಿದ್ದಾರೆ.
'ನಾನು ಮೂರು ವರ್ಷದ ಮಗುವಿದ್ದಾಗಲೇ ನಾನು ಫ್ಯಾಷನ್ ಶೋ ಮತ್ತು ರ್ಯಾಂಪ್ ವಾಕ್ ಮಾಡಿರುವೆ. ನನ್ನ ತಾಯಿ ಆಗ ಸೇರಿಸಿದ್ದು, ಆಗ ನಾನು ತುಂಬಾ ಎಂಜಾಯ್ ಮಾಡಿದೆ ಪ್ರತಿ ಕ್ಷಣವೂ ನೆನಪು ಇದೆ. ಸ್ಪರ್ಧೆಗಳಿಂದ ನಾನು ದೂರ ಉಳಿದುಕೊಂಡಿದ್ದೆ ಆದರೆ ಒಂದು ದಿನ ಇನ್‌ಸ್ಟಾಗ್ರಾಂನಲ್ಲಿ ಈ ಸ್ಪರ್ಧಿ ಬಗ್ಗೆ ನೋಡಿದೆ. ಒಂದು ಪ್ರಯತ್ನ ಮಾಡೋಣ ಅಂದುಕೊಂಡು ಇದಕ್ಕೆ ಅಪ್ಲೈ ಮಾಡಿದೆ. ಪ್ರಯತ್ನ ಮಾಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಿದೆ. 60 ಮಹಿಳೆಯರನ್ನು ನಾನು ಭೇಟಿ ಮಾಡಿ ಅವರಿಂದ ಅನೇಕ ವಿಚಾರಗಳನ್ನು ಕಲಿಯುವೆ' ಎಂದು ನಿವೇದಿತಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.