
ಬೆಂಗಳೂರು (ಜು. 20): ಮಗಳು ಜಾನಕಿ ಖ್ಯಾತಿಯ ನಟ ಯಲಹಂಕ ಬಾಲಾಜಿ (Yelahanka Balaji) ಸಾವನ್ನಪ್ಪಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಯಲಹಂಕ ಬಾಲಾಜಿ ಕೊನೆಯುಸಿರೆಳಿದ್ದಾರೆ. ಯಲಹಂಕ ಬಾಲಾಜಿ ನಿಧನಕ್ಕೆ ನಿರ್ದೇಶಕ ಟಿ.ಎನ್.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.
ಟಿ.ಎನ್.ಸೀತಾರಾಮ್ ಪೋಸ್ಟ್: "ನನ್ನ ಆತ್ಮೀಯ ಗೆಳೆಯ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯ ದ ನಂತರ ನಿಧನ ಹೊಂದಿದ್ದಾರೆ.ನನ್ನ ಎಲ್ಲಾ ಧಾರಾವಾಹಿ ಗಳಲ್ಲೂ ನಟಿಸಿದ್ದರು.ಮಾಯಾಮೃಗ ದಿಂದ , ಮಗಳು ಜಾನಕಿಯ ವರೆಗೆ. ಅತ್ಯಂತ ಹೃದಯವಂತ ಗೆಳೆಯ.ಎಲ್ಲ ಕಷ್ಟ ಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ.ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ ನಗುತ್ತಾ ಬದುಕಿದ ಗೆಳೆಯ.. ಬಾಲಾಜಿ ಇನ್ನಿಲ್ಲ ಎಂದು ನೆನೆಸಿಕೊಂಡರೆ ಅಪಾರಸಂಕಟವಾಗುತ್ತದೆ ತೀವ್ರ ನೋವಿನ ವಿದಾಯ ಬಾಲಾಜಿ" ಎಂದು ಟಿ.ಎನ್.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.