ಕಾಡು ಪ್ರಾಣಿ ಲದ್ದಿ ಕಾಫಿ ಕುಡಿಯಲು ಹೆದರಿಕೊಂಡ ನಿವೇದಿತಾ ಗೌಡ; ನೈಟ್‌ಲೈಫ್‌ ವಿಡಿಯೋ ವೈರಲ್

Published : Jan 13, 2023, 12:39 PM IST
ಕಾಡು ಪ್ರಾಣಿ ಲದ್ದಿ ಕಾಫಿ ಕುಡಿಯಲು ಹೆದರಿಕೊಂಡ ನಿವೇದಿತಾ ಗೌಡ; ನೈಟ್‌ಲೈಫ್‌ ವಿಡಿಯೋ ವೈರಲ್

ಸಾರಾಂಶ

ನೈಟ್‌ಲೈಫ್‌ ವ್ಲಾಗ ಮಾಡಿದ ನಿವೇದಿತಾ ಗೌಡ. ಬಾಲಿ ಪ್ರವಾಸ ಹೇಗಿತ್ತು ಎಂದು ಹಂಚಿಕೊಂಡ ಬಾರ್ಬಿ ಡಾಲ್...

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಒಂದು ವಾರಗಳ ಕಾಲ ಒಂಟಿಯಾಗಿ ಬಾಲಿ ಪ್ರವಾಸ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಹಾಟ್ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಯೊಂದು ಜಾಗವನ್ನು ನೆಟ್ಟಿಗರಿಗೆ ಪರಿಚಯಿಸಿಕೊಟ್ಟರು. ಈ ವೇಳೆ ನಿವಿಗೆ ಕಾಫಿ ಪ್ರಸಂಗವನ್ನು ವಿವರಿಸಿದ್ದಾರೆ. 

'ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ನನಗೆ ಬಾಲಿ ಪ್ರವಾಸ ಹೇಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲಿನ ಮರೆಯಲಾಗದ ಅನುಭವವನ್ನು ಹಂಚಿಕೊಳ್ಳುವೆ. ಅಲ್ಲಿದ್ದಷ್ಟು ದಿನ ನಾನು ಬೆಂಗಳೂರಿನಲ್ಲಿ  ಮಿಸ್ ಮಾಡಿಕೊಂಡಿದ್ದು ಕಾಫಿ. ಬೆಂಗಳೂರು ಫಿಲ್ಟರ್ ಕಾಫಿಯನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದೆ. ಬಾಲಿಯಲ್ಲಿ ಸುಮಾರು 50 ರೀತಿಯ ಕಾಫಿಗಳ ರುಚಿ ನೋಡಿರುವೆ. ಅಲ್ಲಿದ್ದ ಸ್ಪೆಷಲ್ ಕಾಫಿ ಏನೆಂದರೆ ಒಂದು ವಿಚಿತ್ರ ಕಾಡು ಪ್ರಾಣಿ ಇದೆ ಅದಕ್ಕೆ ಕಾಫಿಯನ್ನು ತಿನ್ನಿಸಿ ಅದರ ಲದ್ದಿಯಿಂದ ಕಾಫಿ ಮಾಡುತ್ತಾರೆ. ಅದೆಲ್ಲಾ ನೋಡಿ ಆ ಜಾಗದಿಂದ ಓಡಿ ಬಂದೆ ಪ್ರಯತ್ನ ಮಾಡಬೇಕು ಅನಿಸಲಿಲ್ಲ. ಅದೆಲ್ಲಾ ನೆನಪು ಮಾಡಿಕೊಂಡರೆ ಬೆಂಗಳೂರು ಕಾಫಿ ಎಷ್ಟು ಮುಖ್ಯ ಅನ್ನೋದು ಗೊತ್ತಾಗಿತ್ತು.' ಎಂದು ನಿವೇದಿತಾ ವಿಡಿಯೋದಲ್ಲಿ ಮಾತನಾಡಿದ್ದಾರೆ.

'ಟ್ರಿಪ್‌ ಮುಗಿಸಿಕೊಂಡು ನಾನು ಬೆಂಗಳೂರಿಗೆ ಬರುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಕೆಲಸದಲ್ಲಿ ಬ್ಯುಸಿಯಾದೆ. ತುಂಬಾ ಕೆಲಸಗಳನ್ನು ಪೆಂಡಿಂಗ್ ಇಟ್ಟಿದ್ದೆ ಅದನ್ನು ಮುಗಿಸುವ ಭರದಲ್ಲಿ ಡಾರ್ಕ್‌ ಸರ್ಕಲ್ ಮಾಡಿಕೊಂಡಿರುವೆ' ಎಂದು ನಿವಿ ಬೇಸರ ಮಾಡಿಕೊಂಡರು.

ಬಾಲಿ ಟ್ರಿಪ್‌ ಬಗ್ಗೆ ಮಾತನಾಡಿದ ನಂತರ ಬೆಂಗಳೂರಿನ ಮೋಸ್ಟ್‌ ಪಾಪ್ಯೂಲರ್ ರಸ್ತೆ ಚರ್ಚ್‌ ಸ್ಟ್ರೀಟ್‌ಗೆ ಭೇಟಿ ಕೊಟ್ಟು ಬಿಸ್ಕೆಟ್‌ ಕಾಫಿ ರುಚಿ ನೋಡಿ ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ.

ಬಿರಿಯಾನಿಗೆ ಕಾಫಿ ಮಿಕ್ಸ್‌, ರಸ್ತೆಯಲ್ಲಿ 500 ರೂಪಾಯಿಗೆ ಜಗಳ: ನಿವೇದಿತಾ ಗೌಡ ವಿಡಿಯೋ ವೈರಲ್

'ಬೆಂಗಳೂರಿನ ಪ್ರಸಿದ್ಧ ರಸ್ತೆ ಚರ್ಚ್‌ ಸ್ಟ್ರೀಟ್‌ನಲ್ಲಿ ನಾನು ಪ್ರತಿಸಲವೂ ಬೆಳಗ್ಗೆ ಬಂದಿರುವ ಕಾರಣ ರಾತ್ರಿ ಹೇಗಿರುತ್ತದೆ ಎಂದು ನೋಡಿಲ್ಲ. ನೈಟ್‌ ಲೈಫ್‌ನ ಅನುಭವಿಸಬೇಕು ಎಂದು ಇಲ್ಲಿದೆ ಬಂದಿರುವೆ.  ಸಾಮಾಜಿಕ ಜಾಲತಾಣದಲ್ಲಿ ಚರ್ಚ್ ಸ್ಟ್ರೀಟ್‌ ಹೀಗಿರುತ್ತೆ ಹಾಗಿರುತ್ತೆ ಅಂತ ಹೇಳಿರುವುದು ಕೇಳಿದ್ದೀನಿ ಈಗ ಎಂಜಾಯ್ ಮಾಡಬೇಕು' ಎಂದು ರಸ್ತೆಯಲ್ಲಿ ನಡೆದುಕೊಂಡು ಮಾತನಾಡುತ್ತಿದ್ದ ನಿವಿನ ಅನೇಕರು ಕರೆದು ಕರೆದು ಮಾತನಾಡಿಸುತ್ತಾರೆ.  ಬೋರ್ ಆಗಬಾರದು ಎಂದು ಕಾಟನ್ ಕ್ಯಾಂಡಿಯನ್ನು ಪಿಕ್ ಮಾಡಿಕೊಂಡು ವಾಕ್ ಶುರು ಮಾಡುತ್ತಾರೆ. ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಟೋಪಿಗಳನ್ನು ಧರಿಸಿ ಹೇಗೆ ಕಾಣಿಸುತ್ತೀನಿ ಎಂದು ಟ್ರೈ ಮಾಡಿದ್ದಾರೆ. 

ಈ ರಸ್ತೆಯಲ್ಲಿ ಬಿಸ್ಕೆಟ್‌ ಕಾಫಿ ಸಿಗುತ್ತದೆ. ಕಾಪಿ ಕುಡಿದ ನಂತರ ಬಿಸ್ಕೆಟ್‌ನಿಂದ ಮಾಡಿರುವ ಲೋಟವನ್ನು ತಿನ್ನಬಹುದು. ಇದನ್ನು ನಿವಿ ಟ್ರೈ ಮಾಡಿದ್ದಾರೆ. ಕಾಫಿ ಕೈ ಸೇರುತ್ತಿದ್ದಂತೆ ಅಯ್ಯೋ ನಾನು ಪಿಂಕ್‌ ಬಣ್ಣದ ಕಾಫಿ ಇರತ್ತೆ ಅಂದುಕೊಂಡೆ ಎಂದು ಹಾಸ್ಯ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಕೆಲವರು ನಿವಿ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡು ಈ ರಸ್ತೆಯಲ್ಲಿ ಇವತ್ತು ನೋಡಿದ ಬ್ಯೂಟಿ ನೀವೇ ಎಂದು ಕಾಲೆಳೆದಿದ್ದಾರೆ ಇನ್ನೂ ಕೆಲವರು ನಿಮಗಿಂತ ನಿಮ್ಮ ತಾಯಿ ನನಗೆ ಗೊತ್ತು ನೀವು ನಮ್ಮ ಸಂಬಂಧಿಕರು ಎಂದು ಚರ್ಚೆ ಮಾಡಿದ್ದಾರೆ. ಒಟ್ಟಿಲ್ಲಿ ನಿವಿ ನೈಟ್‌ಲೈಫ್‌ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?