ಕಿಚ್ಚ ಸುದೀಪ್ ಮತ್ತು ಅನಿಲ್ ಕುಂಬ್ಳೆ ಮೊದಲು ಭೇಟಿ ಆಗಿದ್ದು ಹೇಗೆ? ಕಿಚ್ಚ ಅವರಿಗೆ ಹಾಡಿದ ಹಾಡು ಯಾವ್ದು ಗೊತ್ತಾ?
ಹೆಮ್ಮೆಯ ಕನ್ನಡಿಗ, ಕ್ರಿಕೆಟರ್ ಅನಿಲ್ ಕುಂಬ್ಳೆ (Anil Kumble) ಮತ್ತು ಪತ್ನಿ ಚೇತನಾ (Chetana Kumble) ಅವರು ಸರಿಗಮಪ ಚಾಂಪಿಯನ್‌ಶಿಪ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕಲಾವಿದರ ಜೊತೆಗಿರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್‌ಕುಮಾರ್ (Shivarajkumar) ಮತ್ತು ಡಾ. ವಿಷ್ಣುವರ್ಧನ್ (Dr.Vishnuvardhan) ಬಗ್ಗೆ ಮಾತನಾಡಿದ ಅನಿಲ್ ಅವರಿಗೆ ವಿಡಿಯೋ ಕಾಲ್ ಮೂಲಕ ಕಿಚ್ಚ ಸುದೀಪ್ (Kiccha Sudeep) ಮಾತನಾಡಿ, ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲದೆ ಅನಿಲ್ ಅವರಿಗಾಗಿಯೇ ಸ್ಪೆಷಲ್ ಹಾಡನ್ನು ಹಾಡಿದ್ದಾರೆ.
ಗಾಯಕ ಶ್ರೀಹರ್ಷ (Sri Harsha) ಮತ್ತು ಗಾಯಕಿ ಅಂಕಿತಾ (Ankitha) ಅವರು ಸುವಿ ಸುವಿ ಹಾಡನ್ನು ಹಾಡಿದಾಗ ಅನಿಲ್ ಮತ್ತು ಸುದೀಪ್ ಅವರು ಮೊದಲು ಭೇಟಿಯಾದ ಕ್ಷಣದ ಬಗ್ಗೆ ನೆನಪಿಸಿಕೊಂಡಿದ್ದಾರೆ. 'ಸುದೀಪ್ ಅವರನ್ನು ನಾನು ಯಾವಾಗ ಮೊದಲು ಭೇಟಿ ಆಗಿದ್ದು ಅಂದ್ರೆ ರಣಜಿ ಟ್ರೋಫಿ (Ranaji trophy) ಸಮಯದಲ್ಲಿ. ಅವರು ನನ್ನನ್ನೇ ಕೇಳಿದರಂತೆ, ಯಾರಿಲ್ಲಿ ಅನಿಲ್ ಕುಂಬ್ಳೆ ಅಂತ. ಅದಿಕ್ಕೆ ನಾನು ಅವರಿಗೆ ನಾನೇ ಅಂತ ಹೇಳಿದೆ,' ಎಂದು ಅನಿಲ್ ಮಾತನಾಡಿದ್ದಾರೆ.
'ನಾನು ಅವರ ಬಗ್ಗೆ ಏನೇ ಹೇಳಿದ್ದರೂ ತುಂಬಾ ಕಡಿಮೆ ಅನಿಸುತ್ತದೆ. ನಾನು ಅವರ ಬಿಗ್ ಫ್ಯಾನ್ (Fan). ಅವರು ನಮ್ಮ ಮನೆಗೆ ಊಟಕ್ಕೆ ಬರುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ಇದು ನನಗೆ ಫ್ಯಾನ್ ಮೊಮೆಂಟ್ ಅಂತ. ಇವತ್ತು ನಾವು ಏನ್ ಆಗಿದ್ದೀನಿ ಅನ್ನೋದು ದೊಡ್ಡದಲ್ಲ. ಇವತ್ತು ಅವರ ಕಾಂಟ್ಯಾಕ್ಟ್‌ನಲ್ಲಿ (Contact list) ನನ್ನ ಹೆಸರಿದೆ, ನನ್ನ ನಂಬರ್ ಇದೆ ಅಂದ್ರೆ ಅದು ನನ್ನ ದೊಡ್ಡ achievement. ಅವ್ರು ನನಗೆ ಪರಿಚಯ ಇದ್ದಾರೋ ಪರಿಚಯ ಇಲ್ಲವೋ ಮುಖ್ಯವಲ್ಲ. ಅವರ ಸಾಧನೆ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತು. ಅವರ ಬಗ್ಗೆ ನನಗೆ ಗೊತ್ತಿರುವ ಮತ್ತೊಂದು ವಿಚಾರ ಏನಂದ್ರೆ ಅವರು ತುಂಬಾನೇ Humours ವ್ಯಕ್ತಿ. ಅವರ ಜೊತೆ ಕುಳಿತು ಮಾತನಾಡುವಾಗ ನಾವು ಒಳ್ಳೆಯ ಸಮಯ ಕಳೆಯುತ್ತೇವೆ. ಅವರು epitomy of humanity, passion, dedication. ಇವತ್ತಿನವರೆಗೂ ಅವರಿಗೆ ಅವರದ್ದೇ ಪ್ರಿನ್ಸಿಪಲ್ಸ್ ಇವೆ. ಹೀಗಾಗಿ ಅವರ ಲೈಫ್ ಬ್ಯೂಟಿಫುಲ್ ಆಗಿದೆ,' ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
Vishnuvardhan ಮತ್ತು ಕ್ರಿಕೆಟರ್ Anil Kumble ಸಂಬಂಧಿಕರು!'ಸರ್ ಥ್ಯಾಂಕ್ಯು ನೀವು ಇದೇ ತರ ನಿಮ್ಮ ಸಿನಿಮಾ ಕೆಲಸಗಳು ಮುಂದೆ ನಡೆಯಲಿ. ನಿಮ್ಮ ವಿಕ್ರಾಂತ್ ರೋಣ (Vikrant Rona) ಚಿತ್ರದ ಸಣ್ಣ ಟ್ರೈಲರ್ ನೋಡಿದೆ. ಅದು ಖಂಡಿತಾ ದೊಡ್ಡ ಯಶಸ್ವಿ ಪಿಚ್ಚರ್ ಆಗುತ್ತೆ ಅನ್ನೋದು ನನ್ನ ಅನಿಸಿಕೆ. ನೀವು ನನ್ನ ಬಗ್ಗೆ ಮಾತನಾಡಿದ್ದಕ್ಕೆ ತುಂಬಾನೇ ಸಂತೋಷ ಆಯ್ತು,' ಎಂದು ಅನಿಲ್ ಹೇಳಿದ್ದಾರೆ.
ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವ ಕಾರಣ ಅವರು ವೇದಿಕೆ ಮೇಲೆ ಮಾಮರ ಎಲ್ಲೋ ಕೋಗಿಲೇ ಎಲ್ಲೋ ..ಎಂದು ಹಾಡು ಕೂಡ ಹಾಡಿದ್ದಾರೆ. ಹೀಗಾಗಿ ನೀವು ಕೂಡ ಅವರಿಗೆ ಒಂದೆರಡು ಸಾಲುಗಳನ್ನು ಹಾಡಬೇಕು ಎಂದು ನಿರೂಪಕಿ ಅನುಶ್ರೀ (Anushree) ಡಿಮ್ಯಾಂಡ್ ಮಾಡಿದ್ದಾರೆ. 'ಅಪ್ಪ ಅಮ್ಮ ಯಾರನ್ನೂ ನೋಡಲೇ ಇಲ್ಲ, ಅಣ್ಣ ತಮ್ಮ ಏನೆಂದು ತಿಳಿಯಲೇ ಇಲ್ಲ. ನನಗೂ ನಿನ್ನಂತೆಯೇ ಗೆಳೆಯರು ಇಲ್ಲ. ನನ್ನ ನಿನ್ನ ಈ ಸ್ನೇಹ ಇಂದಿನದಲ್ಲ, ನನ್ನ ನಿನ್ನ ಸಂಬಂಧ ನಿನ್ನೆಯದಲ್ಲ. ಪರಿಚಯ ಎಂದೆಂದಿಗೂ ಮರೆಯುವುದಲ್ಲ ನೀನು ದೂರಾದರೆ ..' ಎಂದು ಸುದೀಪ್ ಹಾಡಿದ್ದಾರೆ.