ನಾನು ನಡತೆಗೆಟ್ಟವಳು ಅಂತ ನನ್ನ ಕುಟುಂಬಕ್ಕೆ ಮನೆ ಕೊಡುತ್ತಿಲ್ಲ: ಪೂನಂ ಪಾಂಡೆ ಭಾವುಕ

Published : Apr 17, 2022, 10:28 AM IST
ನಾನು ನಡತೆಗೆಟ್ಟವಳು ಅಂತ ನನ್ನ ಕುಟುಂಬಕ್ಕೆ ಮನೆ ಕೊಡುತ್ತಿಲ್ಲ: ಪೂನಂ ಪಾಂಡೆ ಭಾವುಕ

ಸಾರಾಂಶ

ರೆಸಿಡೆನ್ಸಿಯಲ್ ಸೊಸೈಟಿಯಲ್ಲಿ ನಮಗೆ ಜಾಗವಿಲ್ಲ. ಒಂದು ದಿನವೂ ಫೋಷಕರು ನನ್ನನ್ನು ದೂರಿಲ್ಲ ಎಂದ ನಟಿ. 

ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಬಿಕಿನಿ ಧರಿಸುತ್ತಾಳೆ, ವಿಚಿತ್ರವಾಗಿ ವರ್ತಿಸುತ್ತಾಳೆ ಏನ್ ಏನೋ ಚಾಲೆಂಜ್ ಹಾಕುತ್ತಾಳೆ ಅವಳಿಗೆ ಜನರಿಂದ ಅದು ಬೇಕು ಇದು ಬೇಕು ಎಂದೆಲ್ಲಾ ಗಾಸಿಪ್ ಮತ್ತು ಬ್ರೇಕಿಂಗ್ ನ್ಯೂಸ್ ಮಾಡುವ ಜನರಿಗೆ ನನ್ನ ಜೀವನದ ಒಂದು ಸತ್ಯನೂ ಗೊತ್ತಿಲ್ಲ ಎಂದು ಲಾಕಪ್ ರಿಯಾಲಿಟಿ ಶೋನಲ್ಲಿ ಪೂನಂ ಭಾವುಕರಾಗಿದ್ದಾರೆ. ತಮ್ಮ ಜೀವನದ ಕಷ್ಟ ದಿನಗಳನ್ನು ನೆನಪಿಸಿಕೊಳ್ಳುತ್ತಾ ಪೂನಂ ಕಣ್ಣೀರಿಟ್ಟಿದ್ದಾರೆ ಆದರೆ ಕೆಲವರು ಅದನ್ನೂ ಡ್ರಾಮ ಎಂದು ಕರೆದಿದ್ದಾರೆ. 

'ನಾನು ಹೇಳುತ್ತಿರುವ ಘಟನೆ ಸುಮಾರು 3ರಿಂದ 4 ವರ್ಷಗಳ ಹಿಂದೆ ನಡೆದಿರುವುದು. ನನ್ನ ಫ್ಯಾಮಿಲಿ ಜೊತೆ ಇದ್ದೆ, ತಂದೆ ತಾಯಿ ಮತ್ತು ತಂಗಿ ಜೊತೆ...ಒಂದು ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಉಳಿದುಕೊಳ್ಳುತ್ತಿದ್ದೆವು. ಒಂದು ದಿನ ನಮ್ಮನ್ನು ರೆಸಿಡೆನ್ಸಿಯಲ್ ಸೊಸೈಟಿಯಿಂದ ಹೊರ ದಬ್ಬಿದರು ನಾನು ಅವರ ಜೊತೆ ಉಳಿದುಕೊಳ್ಳುತ್ತಿದ್ದೆ ಅನ್ನೋ ಒಂದೇ ಕಾರಣಕ್ಕೆ. ನನ್ನ ತಂದೆ ಮತ್ತು ತಾಯಿ ಏನೂ ಹೇಳಲಿಲ್ಲ ಕಾರಣ ಇಡೀ ಕುಟುಂಬವನ್ನು ಸಾಕುತ್ತಿದ್ದವಳು ನಾನು, ನನ್ನಿಂದ ಜೀವನ ನಡೆಯಬೇಕಿತ್ತು. ನಾನು ಎಂದೂ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಗೂಗಲ್ ಮಾಡಿ ನೋಡಿ ಒಂದೂ ಈ ರೀತಿಯ ಪೋಸ್ಟ್‌ ಸಿಗುತ್ತಾ ಎಂದು. ನಾನು ಏನೇ ಇದ್ದರೂ ನನ್ನ ಬೌಂಡ್ರಿ ನನ್ನ ನನ್ನ ಕಾರ್ನರ್‌ನಲ್ಲಿ ಕೆಲಸ ಮಾಡಿಕೊಳ್ಳುವುದು' ಎಂದು ಪೂನಂ ಪಾಂಡೆ ಕಣ್ಣೀರಿಟ್ಟಿದ್ದಾರೆ. 

ಅಳುತ್ತಿದ್ದ ಪೂನಂ ಪಾಂಡೆ ಪಕ್ಕ ಕುಳಿತುಕೊಂಡಿದ್ದ ಕರಣ್‌ವೀರ್ ಆಕೆಯ ಬೆನ್ನು ತಟ್ಟಿ 'ನೀನು ಅಣ್ಣ ನೀನು ಅಣ್ಣ ಗುರು' ಎಂದು ಹೇಳಿದ್ದಾರೆ. ಆಕೆ ಕೈ ಹಿಡಿದುಕೊಂಡು ಸಮಾಧಾನ ಮಾಡಲು ಪ್ರಯತ್ನ ಪಟ್ಟಿರು. 

'ನಾನು ಆಸ್ಪತ್ರೆಯಿಂದ ಹೊರ ಬಂದ ನಂತರ ನನಗೆ ನಮ್ಮ ಮನೆಯಲ್ಲಿ ಜಾಗ ಕೊಡಲಿಲ್ಲ. ಎಲ್ಲರೂ ನನ್ನನ್ನು ಕೆಟ್ಟವಳು ಎಂದು ಹೇಳುತ್ತಾರೆ. ಜನರು ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಸುಮ್ಮನೆ ಜಡ್ಜ್ ಮಾಡುತ್ತಾರೆ. ಒಂದು ಸಲ ನೀವು ನನ್ನನ್ನು ಭೇಟಿ ಮಾಡಿ ನನ್ನ ಜೊತೆ ಮಾತನಾಡಿ ಅರ್ಥ ಮಾಡಿಕೊಂಡ ನಂತರ ನನ್ನ ಕ್ಯಾರೆಕ್ಟರ್ ಬಗ್ಗೆ ಜಡ್ಜ್‌ ಮಾಡಬೇಕು ಅಲ್ವಾ' ಎಂದು ಪೂನಂ ಹೇಳಿದ್ದಾರೆ. 

ಗೆಲ್ಲಬೇಕು ಅಂದ್ರೆ ನೀನು ಬೇರೆಯವರ *** ನೆಕ್ಕುತ್ತೀಯಾ; ಲಾಕಪ್‌ ಶೋನಲ್ಲಿ ಫುಲ್ ಬೀಪ್ ಪದಗಳು!

ಏಕ್ತಾ ಕಪೂರ್ ನಿರ್ದೇಶನ, ಕಂಗನಾ ರಣಾವತ್ ನಿರೂಪಣೆ ಮತ್ತು ಕರಣ್ ಕುಂದ್ರಾ ಜೈಲರ್ ಆಗಿ ನಡೆಯುತ್ತಿರುವ ಲಾಕಪ್ ಶೋ ವೀಕ್ಷಕರ ಗಮನ ಸೆಳೆದಿದೆ. ಎಲ್ಲರೂ ಸೈಲೆಂಟ್ ಆಗಿದ್ದಾರೆ ಚೆನ್ನಾಗಿರುತ್ತಾರೆ ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಜಗಳ ಶುರು ಮಾಡುತ್ತಾರೆ. ಮಂದನಾ ಕರೀಮಿ ಮತ್ತು ಅಂಜಲಿ ಅರೋರಾ ಸಣ್ಣ ವಿಚಾರಕ್ಕೆ ಜಗಳ ಮಾಡುವಾಗ ಬೀಪ್ ಪದಗಳನ್ನು ಬಳಸಿದ್ದಾರೆ. 'ನಿನ್ನು ಲಿಟಲ್ S*** ನೀನು ಲಿಟಲ್ B****' ಎಂದು ಮಂದನಾ ಅಂಜಲಿಗೆ ಹೇಳಿದ್ದಾರೆ. 'ನೀನು ಈ ಲಿಟಲ್  B**** ಮುಖ ನೋಡಿಲ್ಲ, ಆಕೆಯ ರಿಯಲ್ ಮುಖ ತೋರಿಸಿದಾಗ ದೊಡ್ಡ  B**** ಬಂದು ಕಾಪಾಡುತ್ತಾಳೆ ಆಗ ನಿನಗೆ ತಡೆದುಕೊಳ್ಳುವುದಕ್ಕೆ ಆಗೋಲ್ಲ' ಎಂದು ಅಂಜಲಿ ಹೇಳಿದ್ದಾರೆ. 

ಇವರಿಬ್ಬರ ಜಗಳ ನಡುವೆ ಪಾಯಲ್ ಮತ್ತು ಸೈಶಾ ಶಿಂಧೆ ಜಗಳ ಆಡಿದ್ದಾರೆ. 'ನಾನು ಏನೇ ಮಾತನಾಡಿದ್ದರೂ ಅದಕ್ಕೆ ಒಂದು ಇರಲಿ ಅಂತ ಹೇಳಕ್ಕೆ ಬರಬೇಡ ನೀನು ನನ್ನ ತಾಯಿ ಅಲ್ಲ'  ಎಂದು ಪಾಯಲ್ ಸೈಶಾ ಶಿಂಧೆಗೆ ಹೇಳಿದ್ದಾರೆ. ಆಗ ಕ್ಯಾಮೆರಾ ಮುಂದೆ ಬಂದು 'ಅವಳು ಈ ರೀತಿ ಆಡುತ್ತಿರುವುದಕ್ಕೆ ಯಾರೂ ಸಿನಿಮಾ ಅಥವಾ ಸೀರಿಯಲ್‌ನಲ್ಲಿ ಚಾನ್ಸ್ ಕೊಡುತ್ತಿಲ್ಲ ಯಾರಿಗೂ ಅವಳ ಜತೆ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ' ಎಂದಿದ್ದಾರೆ ಸೈಶಾ ಶಿಂಧೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ?
BBK 12: ಎಲ್ಲರ ಥರ ಕಾವ್ಯ ನಾಮಿನೇಟ್‌ ಮಾಡಿದ್ರೂ, ಗಿಲ್ಲಿ ನಟ ಮಾನವೀಯತೆ ಬಿಡ್ಲಿಲ್ಲ; ಕರುಳು ಚುರುಕ್‌ ಎನ್ನುತ್ತೆ ಕಣ್ರೀ