ಅಪ್ಪು ವೈರಲ್ ವೀಡಿಯೋ ಕಥೆಯೇನು, ಗುರುಪ್ರಸಾದ್ ಮಾತಿಗೆ ಪುನೀತ್ ಯಾಕೆ ಸುಳ್ಳು ಹೇಳಿದ್ರು?

By Shriram Bhat  |  First Published Oct 20, 2024, 6:42 PM IST

ಬಹಳಷ್ಟು ಜನರು ಬರ್ತಾರೆ, ಮೊದಲ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿರ್ತಾರೆ. ಹಾಟ್ ಸೀಟ್‌ಗೆ ಬಂದು ಕೂತ್ಕೋತಾರೆ, ನಂತ್ರ ಗೊತ್ತಾಗುತ್ತೆ ಅವ್ರ ಕಥೆ ಏನು ಅಂತ.. ಹೀಗೆ ಬರುವವರ ಒಬ್ಬೊಬ್ಬರ ಹಿಂದೆ ಅವರದೇ ಆದ ಬಹಳಷ್ಟು ವೇದನೆಗಳಿವೆ...


ಈ ಸುದ್ದಿ, ಕನ್ನಡದ ಕಂದ, ಅಭಿಮಾನಿಗಳ ಪಾಲಿಗೆ 'ಪರಮಾತ್ಮ'ನಾಗಿರುವ ದಿವಂಗತ ಅಪ್ಪು ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್‌ (Puneeth Rajkumar) ಅವರಿಗೆ ಸಂಬಂಧಪಟ್ಟಿದ್ದು. ಕೋಟ್ಯಧಿಪತಿ ಶೋವನ್ನು ಸ್ಟಾರ್ ಸುವರ್ಣದಲ್ಲಿ ಪುನೀತ್ ರಾಜ್‌ಕುಮಾರ್ ಅವರು ನಡೆಸಿಕೊಡುತ್ತಿದ್ದ ಸಂದರ್ಭವದು. ಆ ಸಮಯದಲ್ಲಿ ಸೆಲೆಬ್ರಟಿ ಅತಿಥಿಯಾಗಿ ವೇದಿಕೆಗೆ ಆಗಮಿಸಿದ್ದ ಕನ್ನಡದ ನಿರ್ದೇಶಕ ಗುರುಪ್ರಸಾದ್ (Guruprasad) ಅವರು ಪುನೀತ್ ಅವರ ಎದುರಲ್ಲೇ ಅವರ ಬಗ್ಗೆ ಮಾತಾಡಿದ್ದಾರೆ. ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಹಾಗಿದ್ದರೆ ಆ ವಿಡಿಯೋದಲ್ಲೇನಿದೆ? ಗುರುಪ್ರಸಾದ್ ಅವರು ಅದೇನು ಹೇಳಿದ್ದಾರೆ? ಅದಕ್ಕೆ ಪುನೀತ್ ರಾಜ್‌ಕುಮಾರ್ ಅವರು ಏನು ಉತ್ತರ ಕೊಟ್ಟಿದ್ದಾರೆ? ಕುತೂಹಲವಿದ್ದರೆ ಮುಂದೆ ನೋಡಿ.. ಹೌದು, 'ಮಠ' ಖ್ಯಾತಿಯ ಗುರುಪ್ರಸಾದ್ ಅವರು ಪುನೀತ್ ಅವರನ್ನು 'ನಾನು ಒಂದ್‌ ಮಾತು ಕೇಳಿದ್ದೇನೆ. ಅದನ್ನ ನೀವು ಒಪ್ಕೋಬೇಕು.. ಅದು ಏನು ಅಂದ್ರೆ 'ಕೋಟ್ಯಧಿಪತಿ ಎಂಬ ಕಾರ್ಯಕ್ರಮವನ್ನು ಸ್ಟಾರ್ ಸುವರ್ಣ ವಾಹಿನಿ ನಡೆಸ್ತಾ ಇದೆ. ಅದು ಬುದ್ಧಿಯ ಆಟ, ಜೂಜಾಟ ಅಲ್ಲ. 

Tap to resize

Latest Videos

ಓಂ ಪ್ರಕಾಶ್ ರಾವ್ ಈಗೇನ್ ಮಾಡ್ತಿದಾರೆ, ಏನ್ ಕಥೆ: ಎಲ್ಲಾನೂ ಹೇಳಿದಾರೆ ನೋಡಿ!

ಬಹಳಷ್ಟು ಜನರು ಬರ್ತಾರೆ, ಮೊದಲ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿರ್ತಾರೆ. ಹಾಟ್ ಸೀಟ್‌ಗೆ ಬಂದು ಕೂತ್ಕೋತಾರೆ, ನಂತ್ರ ಗೊತ್ತಾಗುತ್ತೆ ಅವ್ರ ಕಥೆ ಏನು ಅಂತ.. ಹೀಗೆ ಬರುವವರ ಒಬ್ಬೊಬ್ಬರ ಹಿಂದೆ ಅವರದೇ ಆದ ಬಹಳಷ್ಟು ವೇದನೆಗಳಿವೆ. ಬಹಳಷ್ಟು ಜನರು ಒಂದೆರಡು ಪ್ರಶ್ನೆಗಳಿಗೆ ಔಟ್ ಆಗ್ತಾರೆ, ಹೋಗ್ತಾರೆ. ಕೆಲವರು ಹಾಟ್ ಸೀಟ್‌ಗೆ ಬರೋಕೆ ಆಗಲ್ಲ. ಅವ್ರಿಗೆ ಅವರದೇ ಆದ ಏನೇನೋ ಸಣ್ಣಸಣ್ಣ ಸಮಸ್ಯೆಗಳು ಇರ್ತವೆ. ಅವ್ರಿಗೆ ಒಳ್ಳೇ ಮನಸ್ಸಿನಿಂದ ಪುನೀತ್ ರಾಜ್‌ಕುಮಾರ್ ಅವ್ರು ಸಹಾಯ ಮಾಡ್ತಾ ಇದ್ದಾರೆ. ಅಂತ ಒಂದು ಸುದ್ದಿ ಬಂದಿದೆ. ಸತ್ಯನಾ ಸುಳ್ಳಾ?' ಅಂತ ಗುರುಪ್ರಸಾದ್ ಕೇಳಿದ್ದಾರೆ. 

undefined

ಅದಕ್ಕೆ ತುಂಬಾ ಸಂಕೋಚಪಟ್ಟು ಉತ್ತರಿಸಿದ ನಟ ಪುನೀತ್ ರಾಜ್‌ಕುಮಾರ್‌ ಅವರು 'ಸುಳ್ಳು, ಸತ್ಯ.. ಸತ್ಯ, ಸುಳ್ಳು..' ಅಂತ ಹೇಳಿ ಪುನೀತ್ ಅವರು ಅದನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಆದರೆ, ಅಲ್ಲಿದ್ದವರಿಗೆ ಗುರುಪ್ರಸಾದ್ ಹೇಳಿರುವ ಮಾತು ನಿಜ ಎಂದು ಪುನೀತ್ ಅವರ ಹಾವಭಾವದಲ್ಲಿಯೇ ಅರ್ಥವಾಗಿದೆ. ಬಳಿಕ, ಗುರುಪ್ರಸಾದ್ ಅವರು 'ಆತನ ಮಾನವೀಯತೆಗೆ ಒಂದು ಚಪ್ಪಾಳೆ ಇರ್ಲಿ..' ಅಂತ ಹೇಳಿ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಅಲ್ಲಿದ್ದವರೆಲ್ಲರೂ ಚಪ್ಪಳೆಯ ಸುರಿಮಳೆ ಸುರಿಸಿದ್ದಾರೆ. ಇದು ರಿಯಲ್ ಘಟನೆ!

ಏಷ್ಯಾನೆಟ್‌ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಮಾತು: ನನಗಾದ ನಷ್ಟ ಯಾರು ಕೊಡ್ತಾರೆ?

ಹೌದು, ಹಲವರು ಹೇಳಿಕೊಂಡಿರುವಂತೆ, ನಟ ಪುನೀತ್ ರಾಜ್‌ಕುಮಾರ್ ಅವರು, ಕಷ್ಟದಲ್ಲಿರುವ ಹಲವರಿಗೆ ತಮ್ಮಿಂದಾದ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೇ ಈಗ ಅವರು ಇಲ್ಲದಿದ್ದರೂ ಜನರು ಅವರನ್ನು 'ಪರಮಾತ್ಮ ' ಎಂದು ಕರೆಯುತ್ತಾರೆ. ಸಮಾಜದಿಂದ ಪ್ರೀತಿ-ಗೌರವ-ಹಣ- ಎಲ್ಲವನ್ನೂ ಸಂಪಾದಿಸಿ, ಅದರಲ್ಲಿ ಸಾಕಷ್ಟು ಭಾಗವನ್ನು ವಾಪಸ್ ಸಮಾಜಕ್ಕೇ ಕೊಟ್ಟು ಹೋಗಿಬಿಟ್ಟರು ನಟ ಪುನೀತ್ ರಾಜ್‌ಕುಮಾರ್ ಎನ್ನಲಾಗುತ್ತದೆ. 

 

 
 
 
 
 
 
 
 
 
 
 
 
 
 
 

A post shared by Sagar Manasu (@sagar_manasu)

 

click me!