ತಿರುಗುಬಾಣವಾದ ಮಾತು; ಚೈತ್ರಾ ಕುಂದಾಪುರ ಬೆವರಿಳಿಸಿದ ಕಿಚ್ಚ ಸುದೀಪ್

Published : Oct 20, 2024, 03:01 PM ISTUpdated : Oct 20, 2024, 03:02 PM IST
ತಿರುಗುಬಾಣವಾದ ಮಾತು; ಚೈತ್ರಾ ಕುಂದಾಪುರ ಬೆವರಿಳಿಸಿದ ಕಿಚ್ಚ ಸುದೀಪ್

ಸಾರಾಂಶ

ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ಮಾತಿಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುರುಷರನ್ನು ಗೌರವಿಸಬೇಕು ಎಂದು ಹೇಳುವ ಚೈತ್ರಾ, 'ಒಬ್ಬ ಅಪ್ಪನಿಗೆ ಹುಟ್ಟಿದ್ರೆ' ಎಂದು ಬೈಯ್ಯುವುದು ತಾಯಿಗೆ ಬೈದಂತೆ ಎಂದು ಸುದೀಪ್ ಪ್ರಶ್ನಿಸಿದ್ದಾರೆ.

ಬೆಂಗಳೂರು: ಈ ಬಾರಿಯ ಕನ್ನಡ ಬಿಗ್‌ಬಾಸ್ ಮೊದಲ ದಿನಗಳಿಂದ ಸದ್ದು ಗದ್ದಲಗಳಿಂದಲೇ ಶುರುವಾಯ್ತು. ಇದನ್ನು ನೋಡಿದ ವೀಕ್ಷಕರು ಎಲ್ಲರೂ ಜಗಳ ಮಾಡೋದಕ್ಕೆ ರೆಡಿಯಾಗಿ ಬಂದಂತಿದೆ ಎಂದು ಕಮೆಂಟ್ ಮಾಡಲಾರಂಭಿಸಿದರು. ಮೂರನೇ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಇತ್ತ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗಾಯಕ, ಹಳ್ಳಿಹೈದ ಹನುಮಂತನ ಆಗಮನವಾಗಿದೆ. ಲಾಯರ್ ಜಗದೀಶ್ ಮನೆಯಿಂದ ಎಲಿಮಿನೇಟ್ ಆಗಿದ್ದಕ್ಕೆ ಬಿಗ್‌ಬಾಸ್ ಮನೆಯುಲ್ಲಿರುವ ಎಲ್ಲಾ ಸದಸ್ಯರು ಸಂತಸ ವ್ಯಕ್ತಪಡಿಸಿದ್ದರು. ಶನಿವಾರದ ಸಂಚಿಕೆಯಲ್ಲಿಯೂ ಸುದೀಪ್ ಅವರ ಮುಂದೆಯೂ ಜಗದೀಶ್ ಹೊರಗೆ ಹೋಗಿದ್ದರ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದರು. 

ಮಹಿಳೆಯರಿಗೆ ಗೌರವ ಕೊಡಲ್ಲ, ಅವಾಚ್ಯಪದಗಳನ್ನು ಬಳಸಿ ಕಮೆಂಟ್ ಮಾಡುತ್ತಾರೆ ಎಂದು ಮನೆಮಂದಿಯೆಲ್ಲಾ ಒಕ್ಕೊಲರಿನಿಂದ ಜಗದೀಶ್ ವಿರುದ್ಧ ಆರೋಪ ಮಾಡಿದ್ದರು. ಜಗದೀಶ್ ಮತ್ತು ಚೈತ್ರಾ ಕುಂದಾಪುರ ನಡುವೆ ಹಲವು ಬಾರಿ ಜಗಳ ಆಗಿರೋದನ್ನು ಬಿಗ್‌ಬಾಸ್ ವೀಕ್ಷಕರು ಗಮನಿಸಿದ್ದಾರೆ. ಈ ಸಮಯದಲ್ಲಿ ಚೈತ್ರಾ ಕುಂದಾಪುರ ಆಡಿದ ಮಾತುಗಳಿಗೆ ಸುದೀಪ್ ಬೇಸರದ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆಗೊಳಿಸಿದೆ. 

ಹೆಣ್ಮಕ್ಕಳು, ಹೆಣ್ಣು ಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದು ಹೇಳಿದ್ದೀರಿ ಅಲ್ಲವಾ ಮೇಡಮ್ ಎಂದು ಚೈತ್ರಾ ಅವರನ್ನು ಸುದೀಪ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಹೌದು ಎಂಬಂತೆ ಚೈತ್ರಾ ಕುಂದಾಪುರ ತಲೆಯಾಡಿಸುತ್ತಾರೆ. ಮುಂದುವರಿದ ಮಾತನಾಡುವ ಸುದೀಪ್, ನಿಮ್ಮ ಮಾತನ್ನು ನಾನು ಸಹ ಗೌರವಿಸುತ್ತೇನೆ. ಹಾಗೆ ಪುರುಷರನ್ನು ಸಹ ಮಹಿಳೆಯರು ಗೌರವಿಸಬೇಕು ಅಲ್ವೇ? ಓಕೆ, ಹಾಗಾದ್ರೆ, ನೀವು ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ಎಂಬ ಮಾತನ್ನು ನೀವು ಹೇಳುತ್ತೀರಿ ಅಲ್ಲವೆ? ಈಗ ನೀವು ಅವರ ತಾಯಿಗೆ ತಾನೇ ಬೈದಿದ್ದು ಅಲ್ಲವಾ ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಮತ್ತೆ ಚೈತ್ರಾ ತಲೆಯಾಡಿಸುತ್ತಾರೆ. ಇತ್ತ ಹೊರಗೆ ಕುಳಿತಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ. 

ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ್‌ಗೆ ಬರುತ್ತಲೇ ಖುಲಾಯಿಸಿದ ಅದೃಷ್ಟ

ಒಬ್ಬ ಅಪ್ಪನಿಗೆ ಹುಟ್ಟಿದ್ದೀಯಾ ಎಂದು ಯಾರೂ ಪುರುಷರಿಗೆ ಬೈಯ್ಯತ್ತಿಲ್ಲ. ಒಬ್ಬ ಅಪ್ಪಂಗೆ ಹುಟ್ಟಿದ್ರೆ ಅವರ ತಾಯಿಗೆ ಬೈದಂತೆ ಆಗುತ್ತದೆ. ಈ ರೀತಿ ಬೈಯ್ಯುವ ನೀವು ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ಕೇಳುತ್ತೀರಿ. ಇದು ಹೇಗೆ ಸಾಧ್ಯ ಎಂದು ಚೈತ್ರಾ ಕುಂದಾಪುರ ಅವರನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಪ್ರೋಮೋಗೆ ಶೋ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸುದೀಪ್ ಸರ್ ಮುಂದೆ ಮಾತಾಡೋಕೆ ಮೀಟರ್ ಬೇಕು. ಚೈತ್ರಾಗೆ ಚಳಿ ಬಿಡ್ಸೋದು ನೋಡಿ ಪಕ್ಕದವರು ಶಾಕ್ ಅಗಿದ್ದಾರೆ. ಹಾಗೆ ಪಕ್ಕದಲ್ಲಿರುವ ಭವ್ಯಾ ಗೌಡಗೂ ಕ್ಲಾಸ್ ತೆಗೆದುಕೊಳ್ಳಿ. ಚೈತ್ರಾಗೆ ಮಂಗಳಾರತಿ ಆಯ್ತು. ಈಗ ಭವ್ಯಾ ಮತ್ತು ಮಾನಸಾಗೆ ಬಾಕಿ ಇದೆ. ಶನಿವಾರ ಹಂಸಾಗೆ ಕ್ಲಾಸ್ ಆಗಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Breaking: ಲಾಯರ್ ಜಗದೀಶ್ ಎಕ್ಸ್‌ಕ್ಲೂಸಿವ್ ಸಂದರ್ಶನ: ಬಿಗ್ ಬಾಸ್ ಸ್ಪರ್ಧೆ ಬಗ್ಗೆ ಉಲ್ಟಾ ಹೊಡೆದ ವಕೀಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?
BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್