ಪಕ್ಕಾ ಉತ್ತರ ಸದ್ಯಕ್ಕೆ ಸಿಕ್ಕಿಲ್ಲ. ಆದರೆ, ಸದ್ಯಕ್ಕೆ ಸಿಕ್ಕಿರೋದು, ಇದು ಸ್ಟಾರ್ ಸುವರ್ಣ ಅರ್ಪಿಸುತ್ತಿದೆ ಸೆಲೆಬ್ರಿಟಿ ಸಮರ ಎಂಬುದಷ್ಟೇ. ಇನ್ನೇನು ಸದ್ಯದಲ್ಲೇ ಶುರುವಾಗಲಿದೆ ಶೋ. ಇದಕ್ಕಿಂತ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ, ಈ ರಿಯಾಲಿಟಿ ಶೋ ಮಾಸ್ ಅಪೀಲ್ ಹೊಂದಿರುವ ಯುದ್ಧದಂತೆ ಇರುತ್ತದೆ ಎನ್ನಬಹುದು..
ಕನ್ನಡದ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಸದ್ಯದಲ್ಲೇ ಹೊಸ ಶೋ ಶುರುವಾಗಲಿದೆ. ಈ ರಿಯಾಲಿಟಿ ಶೋದ ಪ್ರೊಮೋ ಬಿಡುಗಡೆ ಆಗಿದ್ದು, ಭಾರೀ ಕುತೂಹಲ ಕೆರಳಿಸುತ್ತಿದೆ. 'ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ, ಏನಿರ್ಬಹುದು ಗೆಸ್ ಮಾಡಿ?' ಎಂಬ ಕ್ಯಾಪ್ಶನ್ ನಿಜವಾಗಿಯೂ ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಹಾಗಿದ್ರೆ ಸ್ಟಾರ್ ಸುವರ್ಣಾ ಚಾನೆಲ್‌ನಲ್ಲಿ ಕೆಲವೇ ದಿನಗಳಲ್ಲಿ ಮೂಡಿ ಬರಲಿರುವ ಶೋ ಯಾವುದು? ಏನು ಅದರ ಹೆಸರು? ಉತ್ತರಕ್ಕೆ ಮುಂದೆ ನೋಡಿ..
ಹೌದು, ಹೊಸ ಶೋ ಒಂದಕ್ಕೆ ಸ್ಕೆಚ್ ಹಾಕಿದೆ ಸ್ಟಾರ್ ಸುವರ್ಣ ವಾಹಿನಿ. ಅದರ ಹೆಸರು ಗೊತ್ತಿಲ್ಲ. ಆದರೆ, ಈ ರಿಯಾಲಿಟಿ ಶೋ ಮಾಸ್ ಅಪೀಲ್ ಹೊಂದಿರುವ ಯುದ್ಧದಂತೆ ಇರುತ್ತದೆ ಎನ್ನಬಹುದು.. ಪ್ರೋಮೋ ಸೂಪರ್ ಎನ್ನುವಂತಿದ್ದು, ಪ್ರೋಮೋದಲ್ಲಿ 'ಬಹುದೊಡ್ಡ ಸಮರ' ಎಂಬ ಟೆಕ್ಸ್ಟ್ ಕಾಣಿಸುತ್ತಿದೆ. 20 ಸೆಕೆಂಡ್‌ನ ಈ ಪ್ರೊಮೋ ಭಾರೀ ಕುತೂಹಲ ಕೆರಳಿಸುತ್ತಿದೆ. ಹಾಗಿದ್ದರೆ ಇದೇನು ಶೋ? ಇಲ್ಲಿ ಹಲವು ಸೆಲೆಬ್ರೆಟಿಗಳು ಕಾಣಿಸಿಕೊಳ್ಳಲಿರುವುದಂತೂ ಪಕ್ಕಾ. ಆದರೆ, ಈ ಶೋದಲ್ಲಿ ದರ್ಶನ ನೀಡುವವರು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳೇ? ಅಥವಾ, ಕಿರುತೆರೆ ಸೆಲೆಬ್ರಿಟಿಗಳೇ?
ಶಂಕರ್ ನಾಗ್-ಅರುಂಧತಿ ನಾಗ್ ಒಮ್ಮೆ ಮದುವೆ ಆಗದಿರಲು ನಿರ್ಧರಿಸಿದ್ದು ಯಾಕೆ? ಕಾರಣ ಏನಾಗಿತ್ತು..?
ಪಕ್ಕಾ ಉತ್ತರ ಸದ್ಯಕ್ಕೆ ಸಿಕ್ಕಿಲ್ಲ. ಆದರೆ, ಇದು ಸ್ಟಾರ್ ಸುವರ್ಣ ಅರ್ಪಿಸುವ ಬಹುದೊಡ್ಡ ಸೆಲೆಬ್ರಿಟಿ ಸಮರ ಎಂಬುದಷ್ಟೇ ಸದ್ಯಕ್ಕೆ ಸಿಕ್ಕಿರೋ ಉತ್ತರ. ಇನ್ನೇನು ಶೀಘ್ರದಲ್ಲೇ ಶುರುವಾಗಲಿದೆ ಶೋ. ಇದಕ್ಕಿಂತ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ, ಸಮರ ಹೆಸರಿನ ಈ ರಿಯಾಲಿಟಿ ಶೋ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ತುಂಬಾ ಗ್ರಾಂಡ್ ಅಗಿ ಮೂಡಿ ಬರಲಿದೆ ಎನ್ನಲಾಗಿದೆ. ಮನರಂಜನಾ ವಾಹಿನಿಯಾಗಿರುವ ಸ್ಟಾರ್ ಸುವರ್ಣ, ಈ ಮೊದಲು ಕೂಡ ಬಹಳಷ್ಟು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಿದೆ.
ಅವೆಲ್ಲವುಗಳ ಹೆಸರು ಹೇಳಲು ಕಷ್ಟಸಾಧ್ಯ ಎನಿಸಿದರೂ ಕೆಲವು ಹೀಗಿವೆ.. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ನೋಡಿ ಸ್ವಾಮಿ ನಾವಿರೋದು ಹೀಗೆ, ಕನ್ನಡದ ಕೋಟ್ಯಧಿಪತಿ, ಬಿಗ್ ಬಾಸ್ ಸೀಸನ್ 2, ಸುವರ್ಣ ಸೂಪರ್ ಜೋಡಿ, ಲಿಟ್ಲ್ ಸ್ಟಾರ್ ಸಿಂಗರ್, ಡಾನ್ಸ್ ಡಾನ್ಸ್, ಗಾನಾ ಬಜಾನಾ, ಜಾಕ್ ಪಾಟ್, ಸುವರ್ಣ ಸೂಪರ್ ಸ್ಟಾರ್, ಸೂಪರ್ ಟ್ವಿನ್ಸ್, ಸೂಪರ್ ಸ್ಟಾರ್ ಆಫ್ ಕರ್ನಾಟಕ, ಹೀಗೆ ಹತ್ತುಹಲವು ಟಿವಿ ಶೋಗಳನ್ನು ನೀಡಿದೆ ಸ್ಟಾರ್ ಸುವರ್ಣ.
ಹೃದಯಗೀತೆ ಚಿತ್ರ ಶುರುವಾಗಿದ್ದು ಯಾಕೆ, ನಟ ವಿಷ್ಣುವರ್ಧನ್ ಸ್ವೀಕರಿಸಿದ್ದ ಚಾಲೆಂಜ್ ಎಂಥದ್ದು?
ಒಟ್ಟಿನಲ್ಲಿ, ಕನ್ನಡದ ಹಲವು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಹೇಳುತ್ತಿರುವ ಈ ಶೋ ಕೆಲವೇ ದಿನಗಳಲ್ಲಿ ಟೆಲಿಕಾಸ್ಟ್ ಆಗಲಿದೆ. ಪ್ರೋಮೋ ಮೂಲಕ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿರುವ ಮುಂಬರುವ ಸಮರ ಶೋ, ಪ್ರಸಾರದ ಬಳಿಕ ಅದೆಷ್ಟು ಕ್ರೇಜ್ ಹುಟ್ಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಸ್ಟಾರ್ ಸುವರ್ಣ ವಾಹಿನಿಯ ಅಭಿಮಾನಿ ವೀಕ್ಷಕರು ಈ ಶೋಗೆ ಕಾಯುತ್ತಿದ್ದಾರೆ.