Latest Videos

ಶೋಕಿ ಮಾಡಲ್ಲ ನಾನು ಜುಗ್ಗ , ಮಿಡಲ್ ಕ್ಲಾಸ್‌ ಬ್ರಾಹ್ಮಣರಾಗಿ 9 to 5 ಕೆಲಸ ಇದ್ರೆನೇ ಬೆಲೆ; ಐಶ್ವರ್ಯ ವಿನಯ್

By Vaishnavi ChandrashekarFirst Published Jun 15, 2024, 10:52 AM IST
Highlights

ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದುಕೊಂಡು ಹೇಗೆ ಹಣ ಸೇವ್ ಮಾಡಬೇಕು, ಹೇಗೆ ಅವಕಾಶಗಳಿಗೆ ಕಾಯಬೇಕು ಎಂದು ಐಶ್ವರ್ಯ ಮತ್ತು ವಿನಯ್ ಮಾತನಾಡಿದ್ದಾರೆ.

ಕನ್ನಡ ಕಿರುತೆರೆಯ ಸೆಲೆಬ್ರಿಟಿ ಜೋಡಿ ಐಶ್ವರ್ಯ ಮತ್ತು ವಿನಯ್ ಮೊದಲ ಸಲ ತಮ್ಮ ಮಿಡಲ್ ಕ್ಲಾಸ್ ಜೀವನ ಹೇಗಿದೆ, ಯಾಕೆ ಶೋಕೆ ಮಾಡಬಾರದು, ಅವಕಾಶಗಳಿಗೆ ಹೇಗೆ ಕಾಯಬೇಕು, ಹಣ ಎಷ್ಟು ಮುಖ್ಯ ಎಂದು ತಿಳಿಸಿಕೊಟ್ಟಿದ್ದಾರೆ. 

'ಸುಮಾರು 6 ವರ್ಷಗಳಿಂದ ದುಡಿಯುತ್ತಿದ್ದೀವಿ ನಮಗೆ ಯಾವುದೇ ಚಟ ಇಲ್ಲ, ಇರುವುದು ಒಂದೇ ಚಟ ಅದು ಸೇವಿಂಗ್ಸ್‌. ಸರ್ಕಲ್‌ನಲ್ಲಿ ಪ್ರತಿಯೊಬ್ಬರನ್ನು ನನ್ನನ್ನು ಜುಗ್ಗ ಎಂದು ಕರೆಯುತ್ತಾರೆ. ಏನೋ ನೀವು ಖರ್ಚು ಮಾಡೋಲ್ಲ ಅಂತಾರೆ. ಇಂಡಸ್ಟ್ರಿ ಹಾಗಿದೆ ಇವತ್ತು ನನ್ನ ಕ್ಯಾರೆಕ್ಟ್‌ ಚೆನ್ನಾಗಿದೆ ಓಡುತ್ತಿದೆ ನಾಳೆಯಿಂದ ಸೀರಿಯಲ್ ಸ್ಟಾಪ್ ಆಯ್ತು ಅಂದ್ರೆ ನನಗೆ ಕೆಲಸ ಇರುವುದಿಲ್ಲ ಹೀಗಾಗಿ ಹಣ ಸೇವ್ ಮಾಡಲೇ ಬೇಕು. ತಮ್ಮ ತಲೆಯಲ್ಲಿ ಇರುವುದು ಹಣವನ್ನು ದುಡಿಯಬೇಕು. ನಮಗೆ ಶೋಕಿ ಇಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚುತ್ತೀವಿ. ನಾನು ಸಿನಿಮಾ ಮಾಡಿದ್ದೀನಿ ಕಾರಿನಲ್ಲಿ ಓಡಾಡಬೇಕು ಕಾರಿನಿಂದ ಇಳಿಯಬಾರದು ಜನ ಏನಂದುಕೊಳ್ಳುತ್ತಾರೆ ಅನ್ನೋ ಯೋಚನೆ ನನಗಿಲ್ಲ' ಎಂದು ಐಶ್ವರ್ಯ ಮತ್ತು ವಿನಯ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬಾಸ್‌ ಲೇಡಿ ರೀತಿ ಪೋಸ್‌ ಕೊಟ್ಟ ಸಾನ್ವಿ ಕಿಚ್ಚ ಸುದೀಪ್‌ ; ಕನ್ನಡದ ದೀಪಿಕಾ ಪಡುಕೋಣೆ ಎಂದ ನೆಟ್ಟಿಗರು!

'ನನ್ನ ಬಳಿ ಚಿಕ್ಕದಾಗಿ ವ್ಯಾಗನಾರ್‌ ಇದೆ ಅದರಲ್ಲಿ ಓಡಾಡುತ್ತೀನಿ. ದೊಡ್ಡ ಕಾರು ತೆಗೆದುಕೊಳ್ಳುವ ಶಕ್ತಿ ಇಲ್ಲ ಅಂತಲ್ಲ ಶಕ್ತಿ ಇದೆ ಆದರೆ ಶೋಕಿ ಮಾಡಲು ಸುಮ್ಮನೆ ದುಡ್ಡು ಖರ್ಚು ಮಾಡುವುದು ಬೇಡ ಅಂತ. ನನ್ನ ಪ್ರಕಾರ ನೀನು ಒಂದು ಕೋಟಿ ಬೆಲೆ ಬಾಳಿದರೆ ನೀನು 50 ಲಕ್ಷ ರೂಪಾಯಿ ಜೀವನ ಮಾಡಬೇಕು...ನಾನು ಬಾಳುವುದು 10 ಸಾವಿರಕ್ಕೆ ಅಂದ ಮೇಲೆ 1 ಸಾವಿರ ರೂಪಾಯಿ ಜೀವನ ಮಾಡಬೇಕು. ಇಂಡಸ್ಟ್ರಿಯಲ್ಲಿ ಶೋಕಿ ಮಾಡುವುದು ತುಂಬಾನೇ ಅಗತ್ಯ ಅಂದುಕೊಳ್ಳುತ್ತಾರೆ ಜನರು. ನಾವು ಪ್ರಾಮಾಣಿಕವಾಗಿದ್ದರೆ ಸಾಧನೆ ಮಾಡಬಹುದು. ನಮಗೂ ಫ್ಯಾಮಿಲಿ ಸಪೋರ್ಟ್‌ ಇದೆ ಆದರೆ ನಮ್ಮ ಹಣದಿಂದ ಮನೆ ಖರೀದಿ ಮಾಡಬೇಕು ನಮ್ಮ ಕಾರು ಖರೀದಿ ಮಾಡಬೇಕು. ಸೃಜನ್ ಲೋಕೇಶ್‌ ಸರ್‌ಗಳನ್ನು ಭೇಟಿ ಮಾಡಿದಾಗ ಅವರು ಅನೇಕ ರೀತಿಯಲ್ಲಿ ಸಲಹೆ ಕೊಡುತ್ತಿದ್ದಾರೆ ಅದರಿಂದ ನಮಗೆ ಮಾರ್ಗದರ್ಶನ ಸಿಕ್ಕಿದೆ' ಎಂದು ಐಶ್ವರ್ಯ ಮತ್ತು ವಿನಯ್ ಹೇಳಿದ್ದಾರೆ. 

ಕಿರುತೆರೆ ನಟಿ ಜೊತೆ ವರುಣ್ ಆರಾಧ್ಯ ಲವ್ವಿ ಡವ್ವಿ?; ಟ್ರೋಲಿಗರಿಗೆ ಉತ್ತರ ಕೊಟ್ಟ ನಟ!

'ತಂದೆ ತಾಯಿ, ಅತ್ತೆ-ಮಾವ ಸಪೋರ್ಟ್ ಮಾಡಿದ್ದಾರೆ ಯಾವುದೇ ರೀತಿಯಲ್ಲಿ ಒತ್ತಡ ಹಾಕಿಲ್ಲ.9 - 5 ಕೆಲಸ ಇದ್ದರೆ ಎರಡು ವರ್ಷಕ್ಕೊಮ್ಮೆ ಪ್ರಮೋಷನ್ ಸಿಗುತ್ತದೆ ಹಬ್ಬ ಹರಿದಿನದಲ್ಲಿ ಬೋನಸ್ ಕೊಡುತ್ತಾರೆ ಅನ್ನೋ ಆಸೆ ಪೋಷಕರಿಗೆ ಇರುತ್ತದೆ. ಮಿಡಲ್ ಕ್ಲಾಸ್ ಬ್ರಾಹ್ಮಣರ ಮನೆ ಹುಡುಗ ಆಗಿರುವುದರಿಂದ 9-5 ಹೋದರೆನೆ ಕೆಲಸ ಇಲ್ಲ ಅಂದ್ರೆ ಕೆಲಸ ಇಲ್ಲದವನು ಅಂದುಕೊಳ್ಳುತ್ತಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಇದ್ದಾಗ ಮಾಡೋದು ಒಂದು ಕೆಲಸ ಅಂದ್ರೆ ಕೆಲಸ ಇಲ್ಲದ ಸಮಯದಲ್ಲಿ ಕೆಲಸಕ್ಕೆ ಕಾಯುವುದು ಒಂದು ಕೆಲಸನೇ. ಅವಕಾಶ ಕ್ರಿಯೇಟ್ ಮಾಡುವುದು ಒಂದು ಕೆಲಸ. ಪ್ರತಿ ದಿನವೂ ರೆಡಿಯಾಗಿರಬೇಕು ಪಾತ್ರ ಬರುತ್ತಿದ್ದಂತೆ ನಟಿಸಲು ಹೋಗಬೇಕು' ಎಂದಿದ್ದಾರೆ ಐಶ್ವರ್ಯ ಮತ್ತು ವಿನಯ್. 

click me!