ಬಿಗ್‌ಬಾಸ್ 8 ಪ್ರೋಮೋ ನೋಡಿದ್ರಾ..? ಏನಂತಾರೆ ಸುದೀಪ್, ಇಲ್ನೋಡಿ ವಿಡಿಯೋ

Suvarna News   | Asianet News
Published : Jan 28, 2021, 05:29 PM ISTUpdated : Jan 28, 2021, 06:04 PM IST
ಬಿಗ್‌ಬಾಸ್ 8 ಪ್ರೋಮೋ ನೋಡಿದ್ರಾ..? ಏನಂತಾರೆ ಸುದೀಪ್, ಇಲ್ನೋಡಿ ವಿಡಿಯೋ

ಸಾರಾಂಶ

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಎಲ್ಲೋ ಹೊರಟಿದ್ರು. ಆದ್ರೆ ಹಿರಡೋಕಾಗ್ಲಿಲ್ಲ, ಪಾಸ್‌ಪೋರ್ಟ್ ಫೋಟೋ ಕಾಪಿನೇ ಬರ್ತಿಲ್ಲ, ಎಲ್ ನೋಡಿದ್ರೂ 8. ಏನಪ್ಪಾ ಇದು

ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಕನ್ನಡ ಬಿಗ್‌ಬಾಸ್ ಸೀಸನ್ 8ಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸ್ಕೊಡೋಕೆ ರೆಡಿಯಾಗಿದ್ದಾರೆ. ಹೊಸ ಪ್ರೊಮೋ ವೈರಲ್ ಆಗಿದೆ.

ಸುದೀಪ್ ಎಲ್ಲೋ ಹೊರಟು ಪಾಸ್‌ಪೋರ್ಟ್ ಕಾಪಿ ಮಾಡೋಕೆ ಹೇಳ್ತಾರೆ. ಆದ್ರೆ ಟವರ ಪಾಸ್‌ಪೋಟ್‌ ಮಾತ್ರ ಫೋಟೋ ಕಾಪಿ ತೆಗೆಯೋಕೆ ಆಗಲ್ಲ. ಏನ್ ಕೊಟ್ರೂ ಬರೀ ಎಂಟು ಅಂತ ಮಾತ್ರ ಐಎರಾಕ್ಸ್ ಮೆಷಿನ್‌ನಲ್ಲಿ ಔಟ್‌ಪುಟ್ ಬರ್ತಿದೆ.

ಬಿಗ್ ಬಾಸ್‌ ಪ್ರೋಮೋ ಶೂಟ್‌; ಇವರೇ ಸ್ಪರ್ಧಿಗಳು, ನಿಮಗೆ ಗೊತ್ತಿರುವವರು ಇದ್ದಾರಾ ನೋಡಿ!

ಏನಪ್ಪಾ ಇದು, ಅಪರೂಪಕ್ಕೆ ಎಲ್ಲಾದ್ರೂ ಹೋಗಿ ರಿಲ್ಯಾಕ್ಸ್ ಆಗಿ ಬರೋಣ ಅಂದ್ರೆ ಹೀಗಾಗ್ತಿದೆ, ಬಿಗ್‌ಬಾಸ್ ಸಿಂಬಲ್ ಕಾಪಿ ಬರ್ತಿದೆ ಎಂದು ಕಿಚ್ಚ ತಲೆ ತುರಿಸ್ಕೊಳೋವಾಗ್ಲೇ ಬಿಗ್‌ಬಾಸ್ ಧ್ವನಿ ಕೇಳಿಸುತ್ತದೆ. ಈ ಮೂಲಕ ಶೀಘ್ರದಲ್ಲಿ ಬಿಗ್‌ಬಾಸ್ ಸೀಸನ್ 8 ಆರಂಭವಾಗಲಿದೆ ಎಂಬ ಹಿಂಟ್ ಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?