ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ಬಿಗ್‌ಬಾಸ್ ಸೀಸನ್ 11 ಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಈಗ ನಿರೂಪಕರು ಯಾರು ಎಂಬ ಬಗ್ಗೆ ಚರ್ಚೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ಬಿಗ್‌ಬಾಸ್ ಸೀಸನ್ 11 ಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಈಗಾಗಲೇ ಹೈದರಾಬಾದ್ ನಲ್ಲಿ ಪ್ರೋಮೋ ಶೂಟ್ ಕೂಡ ನಡೆದಿದೆ ಎಂದು ವರದಿ ತಿಳಿಸಿದೆ. ಇದೆಲ್ಲದರ ನಡುವೆ ಈಗ ನಿರೂಪಕರು ಯಾರು ಎಂಬ ಬಗ್ಗೆ ಚರ್ಚೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.
ಬರೋಬ್ಬರಿ 10 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಟ ಕಿಚ್ಚ ಸುದೀಪ್ ಈ ಶೋ ವನ್ನು ನಡೆಸಿಕೊಟ್ಟಿದ್ದರು. ಕಿಚ್ಚನ ನಿರೂಪಣೆ, ಅವರ ಮಾತನಾಡುವ ಶೈಲಿ, ಡ್ರೆಸ್ಸಿಂಗ್ ಸೆನ್ಸ್ ಗೆ ಎಲ್ಲರೂ ಫಿದಾ ಆಗಿದ್ದರು. ಮಾತ್ರವಲ್ಲ 10 ವರ್ಷಗಳ ಬಿಗ್‌ಬಾಸ್ ಅನ್ನು ಕಿಚ್ಚ ನಡೆಸಿಕೊಟ್ಟಿರುವ ರೀತಿಯಿಂದ ಎಲ್ಲೂ ಕೂಡ ಕಪ್ಪು ಚುಕ್ಕೆಯೂ ಬಂದಿಲ್ಲ. ಕಿಚ್ಚನಿದ್ದರೆ ಮಾತ್ರ ಶೋಗೆ ಕಳೆ ಎಂಬಂತಾಗಿತ್ತು.
ಭಾರತದ ಬಿಗ್‌ಬಾಸ್ ಶೋಗಳನ್ನು ನುಂಗಿ ಹಾಕಿದ್ದ ಕನ್ನಡದ 10ರ ಸೀಸನ್ ನ ಬಳೆ! ಬಿಬಿಕೆ 11ರಲ್ಲಿ ಏನಾಗಲಿದೆಯೋ?
ಇದೆಲ್ಲದರ ನಡುವೆ ಕಿಚ್ಚ ಶೋ ನಿಂದ ಹೊರ ನಡೆಯುತ್ತಾರೆ ಎಂಬ ಮಾತುಗಳು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11 ಕ್ಕೆ ನಿರೂಪಕರು ಬದಲಾವಣೆ ಆಗಲಿದ್ದಾರೆಂದು ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.
ಮಾತ್ರವಲ್ಲ ಕಿಚ್ಚನ ಸ್ಥಾನವನ್ನು ಯಾರು ತುಂಬುತ್ತಾರೆ ಎಂದು ಪ್ರಶ್ನೆ ಬಂದಾಗ ಅಲ್ಲಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅರವಿಂದ್ ಅವರ ಹೆಸರು ಕೇಳಿ ಬರುತ್ತಿದೆ. ರಿಷಭ್ ಶೆಟ್ಟಿ ಕಾಂತಾರ ಮೊದಲ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರು ಬರುವುದು ಅನುಮಾನ. ಚಿತ್ರೀಕರಣಕ್ಕಾಗಿ ತಮ್ಮ ಊರಿನಲ್ಲಿಯೇ ಉಳಿದುಕೊಂಡಿರುವ ರಿಷಭ್ ತಮ್ಮ ಮಕ್ಕಳನ್ನು ಕೂಡ ಅಲ್ಲೇ ಶಾಲೆಗೆ ಸೇರಿಸಿದ್ದಾರೆ. ಜೊತೆಗೆ ಸಿನೆಮಾ ಮಾಡುವ ಕಾರಣಕ್ಕೆ ಸುದೀರ್ಘ ಸಂಶೋಧನೆ ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿಯಾಗಿದೆ.
ಇನ್ನು ರಮೇಶ್ ಅರವಿಂದ್ ಅವರು ನಟ, ನಿರ್ದೇಶಕ ಮಾತ್ರವಲ್ಲ ನಿರೂಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಕಿರುತೆರೆಯಲ್ಲಿ ಹಲವು ಶೋಗಳನ್ನು ನಡೆಸಿಕೊಟ್ಟಿರುವ ಅನುಭವ ರಮೇಶ್ ಅರವಿಂದ್ ಅವರಿಗಿದೆ. ತುಂಬಾ ಕಾಮ್ ಆಗಿರುವ ನಟ, ಉತ್ತಮ ಮಾತುಗಾರ ಕೂಡ ಹೌದು.
ತೆಲುಗು ಬಿಗ್‌ಬಾಸ್ ಸೆಪ್ಟೆಂಬರ್ ನಲ್ಲಿ ಆರಂಭ, ಪ್ರೋಮೋ ರಿಲೀಸ್, ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!
ಆದರೆ ಬಿಗ್‌ಬಾಸ್ ಹೇಳಿ ಕೇಳಿ ವಿವಾದಾತ್ಮಕ ವ್ಯಕ್ತಿಗಳು ಇರುವ ಶೋ, ಈ ಶೋ ನಡೆಸಲು ಖಡಕ್ ಆಗಿರುವ ನಿರೂಪಕರೇ ಸೂಕ್ತ. ಸ್ಪರ್ಧಿಗಳ ತಪ್ಪುಗಳನ್ನು ತಿದ್ದಿ ತೀಡಿ ಬುದ್ಧಿ ಹೇಳುವುದು ಕೂಡ ಅಷ್ಟೇ ಮುಖ್ಯ. ಖಡಕ್ ಉತ್ತರ ಕೊಡುವುದು ಕೂಡ ಅಷ್ಟೇ ಮುಖ್ಯ. ಈ ಎಲ್ಲಾ ಲಕ್ಷಣಗಳು ಸುದೀಪ್ ಅವರಿಗೆ ಇದೆ ಅನ್ನುವುದಕ್ಕಿಂತ ಅವರು ಈ ಶೋ ನಡೆಸಲು ಸೂಕ್ತ ವ್ಯಕ್ತಿ ಎನ್ನುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದ್ದು, ಸುದೀಪ್ ಶೋ ನಡೆಸದಿದ್ದರೆ ಬಿಗ್‌ಬಾಸ್ ನೋಡುವುದಿಲ್ಲ. ಅವರಿಲ್ಲ ಎಂದರೆ ಶೋಗೆ ಕಳೆಯೇ ಇಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕಳೆದ 10 ನೇ ಸೀಸನ್ ತುಂಬಾ ಹಿಟ್ ಆಗಿತ್ತು. ಶೋ ಮಧ್ಯದಲ್ಲಿ ಸ್ಪರ್ಧಿಗಳ ಅತರೇಕದ ವರ್ತನೆಯಿಂದ ಶೋ ಬಿಡುವ ಬಗ್ಗೆ ಸುಳಿವು ನೀಡಿದ್ರಾ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಆದರೆ ಅದ್ಯಾವುದೂ ಆಗಿಲ್ಲ. ಕಲರ್ಸ್ ವಾಹಿನಿ ಮತ್ತು ಶೋ ನಡೆಸುವ ಟೀಂ ಈಗಾಗಲೇ ಎಲ್ಲಾ ತಯಾರಿ ಮಾಡಿದ್ದು, ಕಿಚ್ಚನ ಜೊತೆಗೆ ಹೊಸ ಎಗ್ರಿಮೆಂಟ್ ಕೂಡ ನಡೆದಿದೆ. ಹೈದರಾಬಾದ್ ನಲ್ಲಿ ಪ್ರೋಮೋ ಶೂಟ್ ನಡೆದಿದ್ದು, ಆಗಸ್ಟ್ ಕೊನೆಯ ವಾರದಲ್ಲಿ ಮೊದಲ ಪ್ರೋಮೋ ರಿಲೀಸ್ ಆಗಲಿದೆಯಂತೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಶೋ ಪ್ರಸಾರ ಮಾಡಲು ಎಲ್ಲಾ ತಯಾರಿ ನಡೆದಿದ್ದು, ಕಿಚ್ಚನೇ ನಿರೂಪಕ ಎನ್ನಲಾಗಿದೆ. ಎಲ್ಲಾ ಊಹಾಪೋಹ ಅನುಮಾನಗಳಿಗೆ ಶೋ ಆರಂಭವಾದಾಗಲೇ ಉತ್ತರ ಸಿಗಲಿದೆ.