'ಕಾಲ್‌ ಎಳೆಯೋರು ಇದ್ದೇ ಇರ್ತಾರೆ..' ಸ್ಟೈಲಿಷ್‌ ಫೋಟೋ ಪೋಸ್ಟ್‌ ಮಾಡಿ ಹೀಗೆ ಹೇಳಿದ್ಯಾಕೆ ಆಂಕರ್‌ ಅನುಶ್ರೀ!

Published : Aug 14, 2024, 05:55 PM IST
'ಕಾಲ್‌ ಎಳೆಯೋರು ಇದ್ದೇ ಇರ್ತಾರೆ..' ಸ್ಟೈಲಿಷ್‌ ಫೋಟೋ ಪೋಸ್ಟ್‌ ಮಾಡಿ ಹೀಗೆ ಹೇಳಿದ್ಯಾಕೆ ಆಂಕರ್‌ ಅನುಶ್ರೀ!

ಸಾರಾಂಶ

anushree anchor ಕನ್ನಡ ಕಿರುತೆರೆಯಲ್ಲಿ ತಮ್ಮ ಫಟಾಫಟ್‌ ಮಾತಿನ ಮೂಲಕವೇ ಪ್ರಖ್ಯಾತವಾಗಿರುವ ನಿರೂಪಕಿ ಅನುಶ್ರೀ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಪೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಆದರೆ, ಇವರ ಪೋಸ್ಟ್‌ಗಿಂತ ಹೆಚ್ಚಾಗಿ ಬರೆದಿರುವ ಸಾಲುಗಳು ಕುತೂಹಲ ಹುಟ್ಟಿಸಿದೆ.

ನಿರೂಪಣೆಯಿಂದಲೇ ಕನ್ನಡ ಕಿರುತೆರೆಯಲ್ಲಿ ಸಖತ್‌ ಫೇಮಸ್‌ ಆಗಿರುವ ಆಂಕರ್‌ ಅನುಶ್ರೀ ಸೋಶಿಯಲ್‌ ಮೀಡಿಯಾದಲ್ಲೂ ತುಂಬಾ ಜನಪ್ರಿಯರಾಗಿದ್ದಾರೆ. ಅವರ ಒಂದೊಂದು ಪೋಸ್ಟ್‌ಗಳಿಗೂ ಸಾಕಷ್ಟು ವೀವ್ಸ್‌, ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಬರುತ್ತವೆ. ಅನುಶ್ರೀ ಕೂಡ ಸೋಶಿಯಲ್‌ ಮೀಡಿಯಾ ಜನಪ್ರಿಯತೆಯನ್ನೂ ಅಷ್ಟೇ ಜವಾಬ್ದಾರಿಯಾಗಿ ನಿಭಾಯಿಸುತ್ತಾರೆ. ತಮ್ಮ ಚಟುವಟಿಕಗಳ ಬಗ್ಗೆ ಆಗ್ಗಾಗ್ಗೆ ಅವರು ಪೋಸ್ಟ್‌ ಮೂಲಕ ತಿಳಿಸುತ್ತಲೇ ಇರುತ್ತಾರೆ. ಅನುಶ್ರೀ ಆಂಕರ್‌ ಆಗಿ ಜನಪ್ರಿಯತೆ ಪಡೆಯುವ ಹಾದಿಯಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಟಿಯಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿಸಿದ್ದ ಅನುಶ್ರೀ, ಬಿಗ್‌ ಬಾಸ್‌ನಲ್ಲೂ ಪಾಲ್ಗೊಂಡಿದ್ದರು. ಈಗ ಪೂರ್ಣ ಪ್ರಮಾಣದ ನಿರೂಪಕಿಯಾಗಿ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಾರೆ. ಪಟಪಟನೆ ಅವರು ಆಡುವ ಮಾತುಗಳು, ವೇದಿಕೆಯಲ್ಲಿ ಮಾಡುವ ತಮಾಷೆ ಕಿರುತೆರೆ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗುತ್ತದೆ. ಅದರೊಂದಿಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಪ್ರತಿ ಪೋಸ್ಟ್‌ನಲ್ಲೂ ಅವರಿಗೆ ಎದುರಾಗುವ ಒಂದೇ ಒಂದು ಪ್ರಶ್ನೆ, 'ಮದುವೆ ಯಾವಾಗ..' ಅನ್ನೋದು. ಇಲ್ಲಿಯವರೆಗೂ ಅನುಶ್ರೀ ಈ ವಿಚಾರದಲ್ಲಿ ಹಾರಿಕೆಯ ಉತ್ತರವನ್ನಷ್ಟೇ ನೀಡಿದ್ದಾರೆಯೇ ಹೊರತು, ಮದುವೆಯಾಗುವ ಯಾವುದೇ ಇಚ್ಛೆಯ ಬಗ್ಗೆ ತಿಳಿಸಿಲ್ಲ.


ಬುಧವಾರ ಇನ್ಸ್‌ಟಾಗ್ರಾಮ್‌ನಲ್ಲಿ ಕಪ್ಪು ಬಣ್ಣದ ಸೂಟ್‌ನಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹುಶಃ ಯಾವುದೋ ಕಾರ್ಯಕ್ರಮದ ಶೂಟಿಂಗ್‌ನ ಕಾರ್ಯಕ್ರಮ ಇದ್ದಹಾಗೆ ಕಂಡಿದೆ. ಈ ಪೋಟೋಗೆ ಅವರು ಬರೆದಿರುವ ಸಾಲುಗಳು ಕುತೂಹಲಕ್ಕೆ ಕಾರಣವಾಗಿದೆ. 'ಏನೇ ಹೇಳಿ ... ಏನೇ ಮಾಡಿ. ಕಾಲ್ ಎಳೆಯೋರು ಇದ್ದೇ ಇರ್ತಾರೆ !!! ಕಾಲ ಉತ್ತರ ಕೊಡುತ್ತೆ ... ಅದಕ್ಕೆ ನಾವ್ ಯಾಕ್ ಮಾಡೋಣ ಚಿಂತೆ !!! Just smile… stay happy' ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಜೀವನದ ಹಾದಿಯಲ್ಲಿ ಕಾಲು ಎಳೆದವರು ಯಾರು, ಯಾರಿಗೆ ಕಾಲವೇ ಉತ್ತರ ಕೊಡುತ್ತೆ ಅನ್ನೋದರ ಬಗ್ಗೆ ಎಲ್ಲಿಯೂ ಅವರು ರಹಸ್ಯ ಬಿಟ್ಟುಕೊಟ್ಟಿಲ್ಲ. ಆದರೆ, ನಗುಮೊಗದ ಚಿತ್ರಗಳೊಂದಿಗೆ ಅಂಥ ವ್ಯಕ್ತಿಗಳಿಗೆ ಆಂಕರ್‌ ಅನುಶ್ರೀ ಖಡಕ್‌ ಉತ್ತರ ನೀಡಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ವ್ಯಕ್ತಿಗಳೂ ಕೂಡ, ಅದರ ಬಗ್ಗೆ ಜಾಸ್ತಿ ಯೋಚನೆ ಮಾಡೋಕೆ ಹೋಗ್ಬೇಡಿ ಎಂದು ಸಲಹೆ ನೀಡಿದ್ದಾರೆ. ಕಾಲು ಎಳೆಯೋರೆ ಈಗ ನಿಮ್ಮ ಕಾಲ ಕೆಳಗೆ ಇದ್ದಾರೆ ಅನ್ನೋದನ್ನ ನೀವು ನೋಡಿ ಎಂದು ತಿಳಿಸಿದ್ದಾರೆ. 'ಹೌದ ಅಕ್ಕಾ ಆದ್ರೆ ನಿಮಗೆ ಯಾರ ಕಾಲ ಎಳೆಯೋರಿಲ್ಲ ಬಿಡಿ ಯಾಕಂದ್ರೆ ನೀವು ಅಜಾತ ಶತ್ರು ನಿರೂಪಕಿ..' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಪ್ರೀತಿ ದೇವತೆ ನಿನ್ನಾಣೆ... ದರ್ಶನ್​ ಚಿತ್ರದ ಹಾಡಿಗೆ ಅನುಶ್ರೀ-ಅಕುಲ್​ ರೊಮಾನ್ಸ್​: ನೆಟ್ಟಿಗರಿಗೆ ಇನ್ನೇನೋ ಚಿಂತೆ!

ನಿಮ್ಮ ಪಾಪ್ಯುಲಾರಿಟಿ ನೋಡಿ ಕೆಲವರಿಗೆ ಹೊಟ್ಟೆಕಿಚ್ಚು ಇರೋದು ಕಾಣುತ್ತಿದೆ ಮೇಡಮ್‌. ಅದಕ್ಕೆ ಅವರಿಗೆ ಏನೇನೊ ಮಾತನಾಡುತ್ತಾರೆ. ನಾಯಿ ಬೊಗಳದರೆ ದೇವಲೋಕ ಹಾಳಾಗುತ್ತಾ? ನೀವು ಏನು ಅಂತಾ ನಮ್ಮಂಥ ಅಭಿಮಾನಿಗಳಿಗೆ ಗೊತ್ತು ಎಂದು ಕಾಮೆಂಟ್‌ ಮಾಡಿದ್ದಾರೆ. ಎಷ್ಟು ವರ್ಷ ಅಂತಾ ಆಂಕರಿಂಗ್‌ ಮಾಡ್ತೀರಾ? ಈಗಲಾದರೂ ಸಿನಿಮಾ ಕಡೆ ಮುಖ ಮಾಡಿ ಎಂದು ಅನುಶ್ರೀಗೆ ಸಲಹೆ ನೀಡಿದ್ದಾರೆ. ಹೆಚ್ಚಿನವರು ಅನುಶ್ರೀ ಫೋಟೋಗಳು ಬಹಳ ಅದ್ಭುತವಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

ನ್ಯಾಷನಲ್ ಇಶ್ಯೂ ಆಗ್ತಿದ್ಯಾ ಆ್ಯಂಕರ್​ ಅನುಶ್ರೀ ಮದುವೆ..? ಹುಡುಗನ ಹುಡುಕ್ತಿದಾರೆ ಕರುನಾಡು ಚಕ್ರವರ್ತಿ ಶಿವಣ್ಣ..!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!