ಪ್ರಕಾಶ್​ ರಾಜ್​ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್​ ಮಾತಿದು...

By Suchethana D  |  First Published Aug 14, 2024, 5:43 PM IST

ಪ್ರಕಾಶ್​ ರಾಜ್​ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ ಎಂಬ ಅನುಭವ ಹಂಚಿಕೊಂಡಿದ್ದಾರೆ ನಟಿ ಪ್ರಿಯಾಮಣಿ.
 


 ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರು ಪ್ರತಿ ಚಿತ್ರದಲ್ಲೂ ತಮ್ಮ ಬಹುಮುಖತೆಯನ್ನು ಸಾಬೀತುಪಡಿಸಿದ್ದಾರೆ. ಆದರೆ ವರ್ಷಗಳಲ್ಲಿ ಅವರು ವಿವಾದಾತ್ಮಕ ದಕ್ಷಿಣ ಕಲಾವಿದರಲ್ಲಿ ಒಬ್ಬರೆಂದೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಕಲಾವಿದರು ಯಾವುದೇ ವಿವಾದಕ್ಕೆ ಒಳಗಾಗದೇ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿಯುತ್ತಾರೆ. ಆದರೆ  ನಟ ಪ್ರಕಾಶ್​ ರಾಜ್​ ಈ ಎಲ್ಲಾ ನಟರಿಗಿಂತಲೂ ಭಿನ್ನ ವ್ಯಕ್ತಿತ್ವ ಉಳ್ಳವರು. ಅವರು ಪ್ರಸ್ತುತ ಸನ್ನಿವೇಶದ ಕುರಿತು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಪ್ರತ್ಯಕ್ಷ ಮತ್ತು ಪರೋಕ್ಷ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಸ್ವಲ್ಪ ಜನಪ್ರಿಯತೆ ಕುಗ್ಗಿತು ಎಂದಾಕ್ಷಣ, ಯಾವುದೋ ಕೆಟ್ಟ ಪೋಸ್ಟ್​ ಹಾಕಿ, ಟ್ರೋಲ್​ಗೆ ಒಳಗಾದರೂ ಸರಿ, ಒಟ್ಟಿನಲ್ಲಿ  ಸುದ್ದಿಯಲ್ಲಿ ಇರುವುದು ಇವರಿಗೆ ಇಷ್ಟ ಎಂದು ಹಲವರು ನಟನ ಕಾಲೆಳೆಯುವುದೂ ಇದೆ.  ಇಂಥ ಪೋಸ್ಟ್​ಗಳಿಗಾಗಿ ಒಂದಷ್ಟು ಮಂದಿಯಿಂದ ಹೊಗಳಿಸಿಕೊಳ್ಳುತ್ತಾರೆ. ಆದರೆ ಇದೇ ವೇಳೆ, ಇದೇ ಕಾರಣಕ್ಕೆ ಇವರಷ್ಟು ಕೆಟ್ಟ ಕಮೆಂಟ್​ಗಳನ್ನು ಹಾಗೂ ಟೀಕೆಗಳನ್ನು ಎದುರಿಸುವ ದಕ್ಷಿಣದ ನಟರೂ ಬೇರಾರೂ ಇಲ್ಲ ಎಂದೇ ಹೇಳಬಹುದು. ಕೆಲವು ವೇಳೆ ಕಾನೂನು ಕುಣಿಕೆಯೂ ಇವರ ಮೇಲೆ ಸುತ್ತುತ್ತಿದ್ದುದು ಉಂಟು. 

ಇಂತಿಪ್ಪ ಪ್ರಕಾಶ್​ ರಾಜ್​ ಅವರ ಕೆಲಸದ ವಿಷಯಕ್ಕೆ ಬರುವುದಾದರೆ ಇವರು ಬಹುಭಾಷೆಗಳನ್ನು ಬಲ್ಲರು. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲಗು ಚಿತ್ರರಂಗಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಇವರ ಭಾಷಾ ಪ್ರೌಢಿಮೆಯನ್ನು ಹಾಡಿ ಹೊಗಳುತ್ತಲೇ ನಟಿ ಪ್ರಿಯಾಮಣಿ ಚಿತ್ರ ತಾರೆಯರು ಪ್ರಕಾಶ್​ ರಾಜ್​ ಜೊತೆ ಕೆಲಸ ಮಾಡುವಾಗ ಹೇಗೆ ಪೇಚಿಗೆ ಸಿಲುಕುತ್ತಾರೆ ಎನ್ನುವ ಕುರಿತು ತಮಾಷೆಯ ಮಾತನಾಡಿದ್ದಾರೆ. ಪ್ರಕಾಶ್​ ರಾಜ್​ ಸರ್​ ಜೊತೆ ಕೆಲಸ ಮಾಡುವ ಅನುಭವವೇ ಕುತೂಹಲವಾದದ್ದು ಎಂದಿರುವ ಪ್ರಿಯಾಮಣಿ ಅವರು, ಅವರಿಗೆ ಬಹಳ ಭಾಷೆ ಗೊತ್ತಿದೆ. ಅವರಿಗೆ ತಮಿಳು, ತೆಲಗು, ಕನ್ನಡ, ಹಿಂದಿ ಎಲ್ಲವೂ ಗೊತ್ತು. ಮಲಯಾಳಂನಲ್ಲಿ ಮಾತ್ರ ಯಾಕೋ ಕೆಲಸ ಮಾಡಲಿಲ್ಲ. ಅದೇ ರೀತಿ ಅವರಿಗೆ ಎಲ್ಲಾ  ಭಾಷೆಯ ಸಹಾಯಕರು ಇದ್ದು, ಇವರಿಂದಾಗಿಯೇ ನಾವು ಪೇಚಿಗೆ ಸಿಲುಕಿರುವುದು ಇದೆ ಎಂದಿದ್ದಾರೆ.

Latest Videos

undefined

ತಿಂಗಳಿಗೆ 300 ರೂ. ಪಡೀತಿದ್ದ ಪ್ರಕಾಶ್​ ರಾಜ್​ಗೆ ವಿಲನ್ ತಂದ ಅದೃಷ್ಟ! ಮದ್ವೆ ವಿಷ್ಯ ಕೆದಕೋದಾ ನೆಟ್ಟಿಗರು?
 
ಈ ಬಗ್ಗೆ ಇನ್ನಷ್ಟು ಹೇಳಿರುವ ನಟಿ, ಪ್ರಕಾಶ್​ ರಾಜ್​ ಸರ್​ ಅವರಿಗೆ ಎಲ್ಲಾ ಭಾಷೆಯ ಸಹಾಯಕರು ಇದ್ದಾರೆ. ಯಾರು ಯಾವಾಗ ಬರುತ್ತಾರೋ ಹೇಳಲು ಬರುವುದಿಲ್ಲ. ನನ್ನ ಸ್ಕ್ರಿಪ್ಟ್​ ಏನು ಎಂದು ನಾವು ಕನ್ನಡದಲ್ಲಿ ಕೇಳಿದರೆ ಅವರು ಸಾರಿ ಮೇಡಂ, ಐ ಆ್ಯಮ್​ ತಮಿಳು ಎನ್ನುತ್ತಾರೆ. ತಮಿಳಿನಲ್ಲಿ ಯಾರಾದ್ರೂ ಹೇಳಲು ಹೋದ್ರೆ ಅವರು ಸಾರಿ ಐ ಆ್ಯಮ್ ತೆಲಗು ಅಂತಾರೆ. ಅದಕ್ಕಾಗಿ ಇಷ್ಟೊಂದು ಕನ್​ಫ್ಯೂಷನ್​ ಇದೆ ಎಂದರೆ ಅಬ್ಬಾ! ಯಾರಿಗೆ ಯಾವ ಭಾಷೆಯಲ್ಲಿ ಮಾತನಾಡಿದಬೇಕು ಎನ್ನುವುದೇ ತಿಳಿಯುವುದಿಲ್ಲ ಎಂದಿರುವ ಪ್ರಿಯಾಮಣಿ, ಅದಕ್ಕಾಗಿಯೇ ನಾನು ಎಲ್ಲ ಸಹಾಯಕರಿಗೂ ಹೇಳಿಬಿಟ್ಟಿದ್ದೇನೆ, ಪ್ಲೀಸ್​ ನೀವೆಲ್ಲಾ ಒಂದು ಬೋರ್ಡ್​ ಹಾಕಿಕೊಂಡು ಕುತ್ತಿಗೆಗೆ ನೇತು ಹಾಕಿಕೊಳ್ಳಿ. ಯಾರು ಯಾವ ಭಾಷಿಕರು ಎಂದು ಗೊತ್ತಾಗುತ್ತದೆ ಎಂದಿದ್ದಾರೆ. ಈ ಗೊಂದಲದಲ್ಲಿ ಹೆಚ್ಚಿಗೆ ತಾವು ಸಿಲುಕಿದ್ದು, ಕನ್ನಡದ  ನಮ್ಮೂರ ರಾಮಾಯಣ ಮತ್ತು ತಮಿಳಿನ  ಊರಿ ರಾಮಾಯಣ ಮಾಡುವ ಸಮಯದಲ್ಲಿ ಸಾಕು ಸಾಕಾಗೋಯ್ತು ಎಂದು ನಟಿ ತಮಾಷೆ ಮಾಡಿದ್ದಾರೆ. 

ಪ್ರಿಯಾಮಣಿ ಕುರಿತು ಹೇಳುವುದಾದರೆ, ಇವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. 2017 ಅಗಸ್ಟ್ 23 ರಂದು ಮುಸ್ತಾಫಾ ರಾಜ್ ರನ್ನು ವಿವಾಹವಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಇನ್ನು ಪ್ರಕಾಶ್​ ರಾಜ್​ ಅವರ ಕುರಿತು ಹೇಳುವುದಾದರೆ, ಇವರಿಗೆ  ಕೈ ಹಿಡಿದಿದ್ದು ವಿಲನ್​ ರೋಲ್​ಗಳು. ವಿಲನ್​ ಪಾತ್ರಗಳಿಂದ ಫೇಮಸ್​ ಆದರು. ಕನ್ನಡ ಮಾತ್ರವಲ್ಲದೇ ಹಿಂದಿ ಸೇರಿದಂತೆ ಕೆಲ ಭಾಷೆಗಳಲ್ಲಿಯೂ ವಿಲನ್​ ರೋಲ್​ನಲ್ಲಿ ಮಿಂಚಿದರು. ಸಿಂಘಂ, ಕಲ್ಕಿ, ಅನ್ನಿಯನ್ ಮತ್ತು ದಬಾಂಗ್ 2 ಚಿತ್ರಗಳಲ್ಲಿನ ಅವರ ಪಾತ್ರಗಳನ್ನು ಅಭಿಮಾನಿಗಳು ತಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ. ಅವರ ಖಳನಾಯಕನ ಪಾತ್ರ ಎಷ್ಟರ ಮಟ್ಟಿಗೆ ಫೇಮಸ್ ಆಯಿತು ಎಂದರೆ ಅವರು ಖಳನಾಗಿ ನಟಿಸಿದ ಚಿತ್ರಗಳಲ್ಲಿ ಹೀರೋಗಿಂತಲು ಸಕತ್​ ಫೇಮಸ್​ ಆದರು. ಅದೇ  ಅವರ ಯಶಸ್ಸಿನ ಮಂತ್ರವಾಗಿದೆ. 

ವಿನೇಶ್​ ಫೋಗಟ್​ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್​ ರಾಜ್​ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!

click me!