
ಕನ್ನಡ ಕಿರುತೆರೆ ಜನಪ್ರಿಯ ನಟಿ ಅಶಿತಾ ಚಂದ್ರಪ್ಪ ಮತ್ತು ರೋಹನ್ ಮಾರ್ಚ್ 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪರ್ಸನಲ್ ಲೈಫ್‌ನ ತುಂಬಾನೇ ಪ್ರೈವೇಟ್ ಆಗಿಟ್ಟಿರುವ ಆಶಿತಾ ಕೆಲವು ದಿನಗಳಿಂದ ಮದುವೆ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಸಮಯದಲ್ಲಿ ಆಶಿತಾ ಅವರಿಗೆ ಕೊರೋನಾ ಪಾಸಿಟಿವ್ ಆಗಿತ್ತಂತೆ, ಈ ಸಮಯವನ್ನು ಹೇಗೆ ಎದುರಿಸಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
'ಈವರೆಗೂ ಲೈಫ್ ಸೂಪರ್ ಆಗಿದೆ. ಮದುವೆ ಜೀವನ ಈಗ ಸಿಂಕ್ ಆಗುತ್ತಿದೆ. ನಾನು ಚಿಕ್ಕಮಗಳೂರಿಗೆ ಶಿಫ್ಟ್ ಆಗಿರುವೆ. ಇಲ್ಲಿ ನನ್ನ ಅತ್ತೆ-ಮಾವ ವಾಸವಿದ್ದಾರೆ. ಆಗಾಗ ಬೆಂಗಳೂರಿಗೂ ಪ್ರಯಾಣ ಮಾಡುವೆ. ತಿಂಗಳಿನಲ್ಲಿ 15 ದಿನಗಳ ಕಾಲ ಬೆಂಗಳೂರಿನಲ್ಲಿ ಇರುವೆ ಇನ್ನುಳಿದ ದಿನಗಳು ಚಿಕ್ಕಮಗಳೂರಿನಲ್ಲಿ. ನನಗೆ ಎರಡು ಊರಲ್ಲಿ ಹೆಚ್ಚಿನ ವ್ಯತ್ಯಾಸ ಅನಿಸುತ್ತಿಲ್ಲ. ಇಲ್ಲಿನ ಜನರಿಗೆ ಚಿಕ್ಕಮಗಳೂರು ಮತ್ತು ಬೆಂಗಳೂರಿಗೆ ಪ್ರಯಾಣ ಮಾಡುವುದು ದೊಡ್ಡ ವಿಚಾರವಲ್ಲ. ಜೀವನದ ಬೇಸಿಕ್ ವಸ್ತುಗಳನ್ನು ಖರೀದಿಸುವುದಕ್ಕೆ ಇಲ್ಲಿಂದ ಬೆಂಗಳೂರಿಗೆ ಪ್ರಯಾಣ ಮಾಡುವೆ,' ಎಂದು ಇಟೈಮ್ಸ್ ಜೊತೆ ಮಾತನಾಡಿದ್ದಾರೆ.
'ನನ್ನ ತಂದೆನ ನಾನು ಮಿಸ್ ಮಾಡಿಕೊಳ್ಳುವೆ. ಮದುವೆಯಾದ ಆರಂಭದ ದಿನಗಳಲ್ಲಿ ಅವರ ಬಗ್ಗೆ ತುಂಬಾನೇ ಚಿಂತಿಸುತ್ತಿದೆ. ಈ ಹೊಸ ಫೇಸ್ ನನಗೆ ಹೆಚ್ಚಿನ ಸಮಯ ಹಿಡಿಯಿತು. ಕೆಲವು ದಿನಗಳ ಕಾಲ ನನ್ನ ತಂದೆ ನನ್ನ ಜೊತೆ ಮಾತನಾಡುತ್ತಿರಲಿಲ್ಲ ನಾನು ಆಗ ಅಳುತ್ತಿದ್ದೆ. ಈಗ ಎಲ್ಲೂ ಟ್ರ್ಯಾಕ್‌ನಲ್ಲಿದೆ. ಸಿಂಗಲ್ ಪೇರೆಂಟ್ ಇರುವ ಸಮಯದಲ್ಲಿ ಅವರೊಬ್ಬರನ್ನೇ ಬಿಟ್ಟು ಪ್ರಯಾಣ ಮಾಡುವುದು, ಪತಿಯೇ ಮನೆ ಶಿಫ್ಟ್ ಆಗುವುದು its hard,' ಎಂದು ಹೇಳಿದ್ದಾರೆ.
'ನನ್ನ ಮದುವೆ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಅಂದ್ರೆ ತಾಯಿಯನ್ನು ಕಳೆದುಕೊಂಡಿದ್ದು. ನನಗೆ ಈ ರೀತಿ ಮದುವೆ ಮಾಡಿಸುವುದು ಅವರ ಕನಸಾಗಿತ್ತು. ಅವರ ಕನಸು ನನಸು ಮಾಡುವುದು ನನ್ನ ಬವಾಬ್ದಾರಿ ಎಂದು ಗೊತ್ತಿತ್ತು. ನನ್ನ ಮದುವೆ ಪ್ಲಾನ್‌ನ ಮುಂದೂಡುವುದಕ್ಕೆ ನನಗೆ ಇಷ್ಟವಿರಲಿಲ್ಲ. ಗಂಡು ಹುಡುಕುವುದಕ್ಕೆ ನನ್ನ ತಂದೆಗೆ ಹೇಳಿದೆ. ಆಗ ನನಗೆ ರೋಹನ್ ಪರಿಚಯವಾಯ್ತು. ಇದು ಅರೇಂಜ್ ಮ್ಯಾರೇಜ್. Yes! I am married woman now,' ಎಂದು ಮಾತನಾಡಿದ್ದಾರೆ.
'ನನ್ನ ಮದುವೆ ಮಾರ್ಚ್ 15ರಂದು ನಡೆಯಬೇಕಿತ್ತು. ಆಗ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಇತ್ತು. ಮದುವೆಗೂ ಒಂದು ವಾರ ಮುನ್ನ ನನ್ನ ತಂದೆ ಹುಷಾರು ತಪ್ಪಿದ್ದರು. ಔಷಧಿ ತೆಗೆದುಕೊಂಡರೂ ಅದು ವೈರಲ್ ಫೀವರ್ ರೀತಿ ಕಾಣಲಿಲ್ಲ. ನನ್ನ ಅರಿಶಿಣ ಶಾಸ್ತ್ರದ ದಿನ ಅವರಿಗೆ ತುಂಬಾನೇ ಹುಷಾರು ತಪ್ಪಿದ ಕಾರಣ ಅವರು ಮನೆಯಲ್ಲಿಯೇ ಉಳಿದುಕೊಂಡರು. ನನ್ನ ಅಂಕಲ್ ಮನೆಯಲ್ಲಿ ಮದುವೆ ಶಾಸ್ತ್ರ ನಡೆಯಿತು. ನಾವು ಅಲ್ಲಿ ಹೋಗಿ ಶಾಸ್ತ್ರ ಮುಗಿಸಿಕೊಂಡು, ಮನೆಗೆ ಬರಬೇಕಿತ್ತು. ನನಗೆ ಸಂಪೂರ್ಣ ಎನರ್ಜಿ ಮಿಸ್ ಅಯ್ತು,' ಎಂದು ಆಶಿಕಾ ಹಂಚಿಕೊಂಡಿದ್ದಾರೆ.
'ಹಳದಿ ನೀರು ನನ್ನ ಮೇಲೆ ಹಾಕಿದ ತಕ್ಷಣ ನನಗೆ ಚಳಿ ಶುರುವಾಗಿತ್ತು. ಆಗ ನನಗೆ ಲೈಟ್ ಆಗಿ ಮೈ ಬಿಸಿ ಅಗಿತ್ತು. ಶಾಸ್ತ್ರ ನಡೆದ ನಂತರ ನಾವು ಕೋವಿಡ್ ಟೆಸ್ಟ್ ಮಾಡಿಸಿದ್ದೆವು. ಆಗ ತಂದೆಗೆ ಮತ್ತು ನನಗೆ ಕೋವಿಡ್ ಇರುವುದಾಗಿ ತಿಳಿದು ಬಂತು. ಆಗ ನಾವು ಮದುವೆ ಮುಂದೂಡುವ ಪ್ಲಾನ್ ಮಾಡಿದೆವು. ನಮ್ಮ ಅತ್ತೆ ಮಾವ ಅವರಿಗೆ ಕರೆ ಮಾಡಿ ತಿಳಿಸಿದೆವು. ಆಗ ಅವರು ಇನ್ನೂ ಚಿಕ್ಕಮಗಳೂರಿನಲ್ಲಿದ್ದರು. 9 ದಿನಗಳ ನಂತರ ನನಗೆ ಕೋವಿಡ್ ನೆಗೆಟಿವ್ ಎಂದು ತಿಳಿದು ಬಂತು. ನಮ್ಮ ಮದುವೆಗೂ ಬೇಗ ಸಿಕ್ಕಿದ ದಿನಾಂಕ ಅಂದ್ರೆ ಮಾರ್ಚ್ 31. ಕೊರೋನಾದಿಂದ ವೀಕ್ ಆಗಿದ್ದ ಕಾರಣ ಮದುವೆಯನ್ನು ಸರಿಯಾಗಿ ಎಂಜಾಯ್ ಮಾಡಲು ಆಗಲಿಲ್ಲ,' ಎಂದಿದ್ದಾರೆ.
'ಈ ಸಮಯದಲ್ಲಿ ನನ್ನ ಪ್ಯಾಮಿಲಿ ನನ್ನ ಪರವಿತ್ತು. ನನ್ನ ಗಂಡ ತುಂಬಾನೇ understanding ಮಾಡಿಕೊಳ್ಳುವ ವ್ಯಕ್ತಿ. ನಾನು ಚೇತರಿಸಿಕೊಂಡು ನನ್ನ ಆರೋಗ್ಯದ ಕಡೆ ಗಮನ ಕೊಡುವಂತೆ ಹೇಳಿದ್ದರು. ಮೆಂಟಲಿ ನಾನು ತಯಾರಿ ಆಗುವುದಕ್ಕೂ ಸಮಯ ತೆಗೆದುಕೊಳ್ಳಲು ಹೇಳಿದ್ದರು. ನಾವು ಒಂದು ನಿಮಿಷ ಕರೆ ಮಾಡಿದ್ದೆವು ಅಷ್ಟೆ ನನ್ನ ಅತ್ತೆ ಮಾವ ಅರ್ಥ ಮಾಡಿಕೊಂಡು, ನಮಗೆ ಮಾರಲ್ ಸಪೋರ್ಟ್ ಕೊಟ್ಟರು,' ಎಂದು ಮಾತು ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.