
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ನಮ್ಮನೆ ಯುವರಾಣಿಯಿಂದ (Nammane Yuvarani) ಆನ್‌ಸ್ಕ್ರೀನ್ ಸೂಪರ್ ಕಪಲ್ ಆಗಿ ಗುರುತಿಸಿಕೊಂಡಿದ್ದ ಅನಿಕೇತ್ (Aniketh) ಮತ್ತು ಮೀರಾ (Meera) ಪಾತ್ರ ಮುಕ್ತಾಯವಾಗಿದೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಇಬ್ಬರು ಕೂಡ ಅಭಿಮಾನಿಗಳಿಗೆ ಧನ್ಯವಾಗಳನ್ನು ತಿಳಿಸಿ ವಿದಾಯ ಹೇಳುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮೀರಾ ಪೋಸ್ಟ್:
'ಅನೀರಾ (Anira). ಈ ಪೋಸ್ಟ್ ಅನೀರಾ ಅಭಿಮಾನಿಗಳಿಗೆ. ಅನೀರಾ ಜೋಡಿ ಜೀವನದಲ್ಲಿ ಸಾಕಷ್ಟು ಏರು ಪೇರುಗಳನ್ನು ನೋಡಿದ್ದಾರೆ. ಸಮಯ ಮತ್ತು ಸಂದರ್ಭ ಏನೇ ಇರಲಿ ಅವರು ಎಂದೂ ದೂರವಾಗಿಲ್ಲ (Apart). ಇದೆಲ್ಲಾ ಸಾಧ್ಯವಾಗಿದ್ದು ನಿಮ್ಮಿಂದ ಮಾತ್ರ, ನೀವು ತೋರಿಸಿದ ಅಪಾರ ಪ್ರೀತಿಯಿಂದ (Love). ಪ್ರತಿ ಹಂತದಲ್ಲೂ ನೀವು ನಮಗೆ inspire ಮಾಡಿದ್ದೀರಿ. ಮುಂದಕ್ಕೂ ಹೀಗೇ ಮಾಡುತ್ತೀರಾ ಎಂದು ನಂಬಿರುವೆ. ಜೀವನದಲ್ಲಿ ನಮಗೆಂದೂ ಸದಾ ಒಂದು ದಾರಿ ಇದ್ದೇ ಇರುತ್ತದೆ, ಈ ದೊಡ್ಡ ಬಾಗಿಲು ಈಗ ತೆರೆದಿದೆ. ನಮ್ಮನ್ನು ನೀವು ಹೀಗೆ ಪ್ರೋತ್ಸಾಹಿಸಿ (Support)' ಎಂದು ಮೀರಾ ಬರೆದುಕೊಂಡಿದ್ದಾರೆ.
'ಕಣ್ಮಣಿಗೆ ಕೊನೇವರೆಗೂ ವಿಡಿಯೋ ನೋಡಿ. ಸ್ಪೆಷಲ್ ಪೋಸ್ಟ್ (Special Post). ನನ್ನ 100ನೇ ಪೋಸ್ಟ್. 2021ರ ಕೊನೆ ಪೋಸ್ಟ್. ಯಾರೆಲ್ಲಾ ನನ್ನ ಕೆಲಸ, ಕಲಾಸೇವೆಯನ್ನು ಗುರುತಿಸಿ, ನಂಬಿ, ಆಶೀರ್ವಾದ ಮಾಡಿದ್ದಿರೋ ಈ ಪೋಸ್ಟ್ ನಿಮಗೆ. ನನ್ನ ಕಷ್ಟದಲ್ಲಿ ಸುಖದಲ್ಲಿ ಎಲ್ಲಿದ್ದರೂ ಹೇಗಿದ್ದರೂ ನೀವೊಬ್ಬರು ಸಾಕು ಅಂತ ನೆಮ್ಮದಿ ಕೊಟ್ಟೊರೋ ನಿಮ್ಗೆ ಈ ಪೋಸ್ಟ್. ನನ್ನ 100ನೇ ಪೋಸ್ಟ್ ನಿಮಗೆ ಹಾಕಬೇಕು ಅಂತ ಎಷ್ಟೋ ದಿನದಿಂದ ಕಾಯುತ್ತಿದ್ದೆ. ಮಕ್ಕಳಿಂದ (kids) ಹಿರಿಯರವರೆಗೂ ಸಿಕ್ಕಾಗ ಪ್ರೀತಿಯಿಂದ ಮಾತನಾಡಿಸಿ ಸೆಲ್ಫಿ (Selfie) ಬೇಕು ಅನ್ನೋರ್ಗೆ. ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡ್ತಾ ಕಾಮೆಂಟ್ (Comment), ಸ್ಟೋರಿ ಪೋಸ್ಟ್ ಹಾಕಿ ಸಪೋರ್ಟ್ ಮಾಡೋರಿಗೆ. ಎಷ್ಟೋ ಮೀಮ್ಸ್ (mems) ಮೂಲಕ ಸಪೂರ್ಟ್ ಮಾಡಿರೋರಿಗೆ. ಪತ್ರ ಹಾಗೂ ಚಿತ್ರಕಲೆಯ ಮೂಲಕ ಪ್ರೀತಿ ಕೊಡೋರಿಗೆ. ಎಲ್ಲದಕ್ಕಿಂತ ಹೆಚ್ಚಾಗಿ ಕಣ್ಮಣಿ ಫ್ಯಾನ್ ಫೇಜ್‌ಗೆ ಈ ಪೋಸ್ಟ್. ಆದಷ್ಟು ಟ್ರೈ ಮಾಡಿದೀನಿ ಎಲ್ಲರನ್ನು mention ಮಾಡೋಕೆ. ಮಿಸ್ ಆಗಿದ್ದರೆ ಕ್ಷಮೆ ಇರಲಿ. ಮನದಿಂದ ನಿಮಗೂ ಥ್ಯಾಂಕ್ಸ್' ಎಂದಿದ್ದಾರೆ ಅಕಿಂತಾ (Ankita Amar).
ರಾಘವೇಂದ್ರ ಮಾತು:
'ನಮಸ್ಕಾರ. ನಮ್ಮನೆ ಯುವರಾಣಿ ನೋಡುವ ಎಲ್ಲರಿಗೂ ಈಗಾಗಲೇ ಬೇಜಾರ್ ಆಗಿದ್ದೀರಿ ಅಂತ ಗೊತ್ತು. ನಿಮಗೆ ಹಾಗೆ ಸಾಕೇತ್ (Sakath) ಕೂಡ ತನ್ನ ಕೊಳಿಮರಿ, ಕತ್ತೇಮರಿನ ತುಂಬಾ ಮಿಸ್ ಮಾಡ್ತಾನೆ ಅನಿ ಮೀರಾ ಕಥೆಯಲ್ಲಿ ಕೊನೆವರೆಗೂ ಜೀವಂತ. ಕೆಲವು ಕಾರಣಗಳಿಂದ ಕಥೆಯಲ್ಲಿ ಬದಲಾವಣೆ ಮಾಡಲೇಬೇಕಿತ್ತು. ಧಾರಾವಾಹಿ ನಿಲ್ಲಿಸುವುದು ಸುಲಭ ಆದರೆ ಅದರ ದುಡಿಮೆಯನ್ನೇ (Money) ನಂಬಿರುವ 40-50 ಜನರ ಬದುಕು ಕಷ್ಟ ಪಡಬೇಕಾಗುತ್ತದೆ. ನಾನು ಒಂದೊಳ್ಳೆ ಪಾತ್ರಕ್ಕೆ ಕಾಯುತ್ತಾ (Opportunity) ಇದ್ದಾಗ ನನ್ನ ಕೈ ಹಿಡಿದಿದ್ದು ನಮ್ಮನೆ ಯುವರಾಣಿ, ಸಾವಿರಾರು ಜನರ ಪ್ರೀತಿ ಕೊಟ್ಟಿದೆ. ಈಗ ನಾನು ಅದರ ಜೊತೆ ನಿಲ್ಲುವ ಸಮಯ ಬಂದಿದೆ. ಹೀಗಾಗಿ ಕೊನೆವರೆಗೂ ನಮ್ಮನೆ ಯುವರಾಣಿಯಲ್ಲಿ ಇದ್ದು ನಿಮ್ಮ ಪ್ರೀತಿಯನ್ನು ಆನಂದಿಸುತ್ತೇನೆ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಮ್ಮನೆ ಯುವರಾಣಿ ಈಗ ಹೊಸ ರೂಪದಲ್ಲಿ ಬರುತ್ತಿದೆ' ಎಂದು ನಟ ರಾಘವೇಂದ್ರ (Raghavendra Raghu) ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.