
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಅನುಪಮಾ ಗೌಡ , ರಕ್ಷ್ ಹಾಗೂ ನಮ್ರತಾ ಗೌಡ ಪಾಲ್ಗೊಂಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಪ್ರತಿಯೊಬ್ಬರು ತಮ್ಮ ಫ್ರೆಂಡ್‌ಶಿಪ್ , ಮೊದಲ ಕೆಲಸ ಹಾಗೂ ಸಿನಿ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. ಅನುಪಮಾಗೆ ಸರ್ಪ್ರೈಸ್ ಕೊಡಲು ಅವರ ತಾಯಿ ಆಗಮಿಸಿದ್ದರು. ಯಾವ ಒಂದು ಕಾರಣಕ್ಕೆ ನಾನು ಅನುಪಮಾ ಗೌಡ ಚಿತ್ರರಂಗಕ್ಕೆ ಹೋಗಬೇಕು ಎಂದು ಹೇಳಿದೆ ಎಂದು ಅವರ ತಾಯಿ ಹೇಳಿದ್ದಾರೆ.
ಅನುಪಮಾ ಗೌಡ ಅವರ ತಾಯಿ ತುಂಬಾನೇ ಸ್ಟ್ರೀಟ್ ಅಂತೆ. ರಾತ್ರಿ ತಡವಾಗಿ ಮನೆಗೆ ಬರುವಂತಿಲ್ಲ, ಚಿತ್ರೀಕರಣಕ್ಕೆ ಲೇಟ್ ಆದರೆ ನಿರ್ದೇಶಕರಿಗೆ ಅಥವಾ ನಿರ್ಮಾಪಕರಿಗೆ ಕರೆ ಮಾಡುತ್ತಾರಂತೆ. ತಂದೆ ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು ಆದರೆ ಇಂಡಸ್ಟ್ರಿಗೆ ಬರೋದು ಅಂದ್ರೆ ಇಷ್ಟ ಇರಲಿಲ್ಲ. ನನ್ನ ಫ್ರೆಂಡ್ಸ್ ಮತ್ತು ನಮ್ಮ ಟೀಂ ನನ್ನ ತಾಯಿಗೆ ಭಯ ಪಡುತ್ತಾರೆ. ನಾನು ಸುಳ್ಳು ಹೇಳೋಕೆ ಆಗೋಲ್ಲ ಎಂದು ಅನುಪಮಾ ಹೇಳುವಾಗ 'ಏನ್ ಸರಿಯಾಗಿ ಪಿನ್ ಹಾಕಿ ಕೊಡ್ತಿದ್ದಾಳೆ ಇವಾಗಲೇ.' ಎಂದು ಹೇಳುತ್ತಾ ಗೋಲ್ಡನ್ ವೇದಿಕೆಗೆ ಅವರ ತಾಯಿ ಎಂಟ್ರಿ ಕೊಡುತ್ತಾರೆ.
'ಪ್ರಪಂಚ ಈ ರೀತಿ ಇದೆ. ಹೆಣ್ಣು ಮಕ್ಕಳು ಸರಿಯಾಗಿರಬೇಕು ಅಲ್ವಾ. ಬೇರೆಯವರು ಹೇಳುವ ಮುಂಚೆ ನಾವೇ ನಮ್ಮ ಮಕ್ಕಳಿಗೆ ಬೈದು ಬುದ್ಧಿ ಹೇಳುವುದು ಒಳ್ಳೆಯದು. ಅದಕ್ಕಾಗಿ ನಾನು ಅವಳಿಗೆ ಬೈಯ್ಯುತ್ತಿದ್ದೆ. ಈಗ ಅವರು ದೊಡ್ಡವರಾಗಿದ್ದಾರೆ ಅವರಿಗೆ ಎಲ್ಲಾ ಗೊತ್ತಾಗುತ್ತದೆ ನಾವು ಏನೂ ಹೇಳೋದು ಬೇಡ' ಎಂದು ಅವರ ತಾಯಿ ಹೇಳಿದ್ದಾರೆ.
'ಮಕ್ಕಳು ಬೆಳೆಯಬೇಕು ಅನ್ನೋದು ಎಲ್ಲಾ ತಾಯಂದಿರ ಕನಸು. ನನ್ನ ಮಗಳು ಗ್ರೇಟ್. ಅವಳು ಇಷ್ಟೊಂದು ಹೆಸರು ಮಾಡುತ್ತಾಳೆಂದು ಪ್ರಾಮಿಸ್ ನನಗೆ ಗೊತ್ತಿರಲಿಲ್ಲ. ಬೆಟ್ಟ ಹೊಲಿದು ಸಾಕಿದಕ್ಕೆ ಈ ಲೆವೇಲ್‌ಗೆ ಬಂದು ನಿಂತಿದ್ದಾಳೆ' ಎಂದು ಮಗಳ ಬಗ್ಗೆ ಹೆಮ್ಮೆ ಪಟ್ಟರು. 'ನನ್ನ ತಂದೆ ಕೆಲಸ ಮಾಡುತ್ತಿರಲಿಲ್ಲ ಹೀಗಾಗಿ ನಮಗೆ ಬೇರೆ ಆಯ್ಕೆನೇ ಇರಲಿಲ್ಲ. ಇದೇ ಇಂಡಸ್ಟ್ರಿಯಲ್ಲಿ ಅಪ್ಪ ಕೆಲಸ ಮಾಡುತ್ತಿದ್ದರು ನಯಪೈಸೆ ಬರ್ತಾ ಇರಲಿಲ್ಲ ಬಂದ್ರು ಅಣ್ಣ....ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳಬೇಕು ಅಂತ ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದರು ಅಮ್ಮ ಮನೆಯಲ್ಲಿ ಬಟ್ಟೆ ಹೊಲಿಯುತ್ತಿದ್ದರು ನಮ್ಮನ್ನು ಸೇರಿಸಿಕೊಳ್ಳುತ್ತಿದ್ದರು. ಅವತ್ತು ಅವರು ನಮ್ಮ ಕುಟುಂಬಕ್ಕೆ ಸಪೋರ್ಟ್ ಮಾಡಿರಲಿಲ್ಲ ಅಂದ್ರೆ ನಾನು ಈ ಮಟ್ಟಕ್ಕೆ ಬರಲು ಆಗುತ್ತಿರಲಿಲ್ಲ. ಅವರು ಬೇಡ ಅಂದ್ರೂ ನಾನು ಕೆಲಸ ಮಾಡುವುದಕ್ಕೆ ಶುರು ಮಾಡಿದೆ. ಚಿತ್ರರಂಗಕ್ಕೆ ಬಂದಾಗಲೂ ನನಗೆ ಸಾಕಷ್ಟು ಅವಮಾನಗಳು ಆಗಿದೆ. ನಮ್ಮ ಸ್ವಂತದವರೇ ಮಾತನಾಡುತ್ತಿದ್ದಾರೆ. ನಾವು ಬೆಳೆದ ಮೇಲೆ ಬರುವುದಲ್ಲ ಆಗ ಬರಬೇಕಿತ್ತು' ಎಂದು ಅನುಪಮಾ ಹೇಳಿದ್ದಾರೆ.
'ಒಂದು ನಿಮಿಷನೂ ನಾನು ಕಣ್ಣು ಮುಚ್ಚುತ್ತಿರಲಿಲ್ಲ ಅಷ್ಟು ಪೀಸ್ ವರ್ಕ್ ಮಾಡುತ್ತಿದ್ದೆ.ಆಗ 1 ಶರ್ಟ್‌ಗೆ 1 ರೂಪಾಯಿ ಕೊಡುತ್ತಿದ್ದರು ಆಮೇಲೆ 8 ಗಂಟೆಗಳ ಕಾಲ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಡಾ.ರಾಜ್‌ಕುಮಾರ್ ಸತ್ತಾಗ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ ಬೇರೆಯವರ ಮನೆಗೆ ಹೋದರೆ ತಳ್ಳಿದ್ದಾರೆ ಆಗಲೇ ನನಗೆ ಹಠ ಬಂದಿದ್ದು ನಮ್ಮ ಫೀಲ್ಡ್‌ನಲ್ಲಿ ಇದ್ದರೆ 10 ಸಾವಿರ ಸಂಬಳ ಬರಲಿಲ್ಲ ಆಗ ನೀನು ಹೋಗಿ ನೀನು ಏನಾದರೂ ಮಾಡು ಅಂತ ಮಗಳನ್ನು ತಳ್ಳಿದೆ. ಈಗ ಎಲ್ಲರು ಬರುತ್ತಾರೆ ಅನುಪಮಾ ಅನುಪಮಾ ಅಂತ' ಎಂದು ತಾಯಿ ಹೇಳಿದ್ದಾರೆ.
31 ವರ್ಷ ಅದರೂ ಅನುಪಮಾ ಯಾಕೆ ಮದ್ವೆ ಆಗಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. 'ನನಗೆ ಅಮ್ಮನೇ ಎಲ್ಲಾ ಅಪ್ಪನೂ ಇಲ್ಲ. ಅವರಿಗೋಸ್ಕರ ನಾನು ಇವತ್ತು ಇರೋದು. ನನಗೆ ಜೀವನದಲ್ಲಿ ಏನೂ ಗುರಿ ಇಲ್ಲ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೆ. ಎಷ್ಟೊಂದು ಜನ ಮದ್ವೆ ಆಗೋಲ್ವ ಅಂತ ಕೇಳುತ್ತಾರೆ. ನನಗೆ ಮದ್ವೆ ಆಗಬೇಕು ಅನ್ನೋ ಇಂಟ್ರೆಸ್ಟ್ ಇಲ್ಲ. ನಮಗೆ ಎಲ್ಲಾ ಬಂದಂತ ಸಮಯದಲ್ಲಿ ಏನೂ ಅನುಭವಿಸದೆ ಅಪ್ಪ ಹೋಗ್ಬಿಟ್ರು ಆದರೆ ಅಮ್ಮಂಗೆ ಕೆಲವೊಂದು ಆಸೆ ಇದೆ ಅದನ್ನು ನೆರವೇರಿಸಬೇಕು ಅನ್ನೋದೆ ನನ್ನ ಗುರಿ ಅದು ಬಿಟ್ಟು ಬೇರೆ ಏನೂ ಇಲ್ಲ ಸರ್ ನನ್ನ ಜೀವನದಲ್ಲಿ' ಎಂದು ಅನುಪಮಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.