ಕಾರ್ಯಕ್ರಮದಲ್ಲಿ ಎರಡುವರೆ ಸಾವಿರ ರೂಪಾಯಿ ಊಟ ತಿಂದಿದಕ್ಕೆ ನಿರೂಪಕಿ ಚೈತ್ರಾ ವಾಸುದೇವನ್‌ಗೆ ಅವಮಾನ

Published : Apr 08, 2022, 11:50 AM IST
ಕಾರ್ಯಕ್ರಮದಲ್ಲಿ ಎರಡುವರೆ ಸಾವಿರ ರೂಪಾಯಿ ಊಟ ತಿಂದಿದಕ್ಕೆ ನಿರೂಪಕಿ ಚೈತ್ರಾ ವಾಸುದೇವನ್‌ಗೆ ಅವಮಾನ

ಸಾರಾಂಶ

ನೆಟ್ಟಿಗರು ಕೇಳಿರುವ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಟ್ಟ ನಿರೂಪಕಿ ಚೈತ್ರಾ ವಾಸುದೇವನ್. ಜೀವನದಲ್ಲಿ ಮರೆಯಲಾಗದ ಘಟನೆ ವಿವರಿಸಿದ ಕನ್ನಡತಿ...   

ಬಿಗ್ ಬಾಸ್ ಸ್ಪರ್ಧಿ, ಕನ್ನಡದ ನಿರೂಪಕಿ ಚೈತ್ರಾ ವಾಸುದೇವನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್. ಇತ್ತೀಚಿಗೆ ಯೂಟ್ಯೂಬ್‌ಗೆ ಕಾಲಿಟ್ಟಿರುವ ನಿರೂಪಕಿ ಲೈಫ್‌ಸ್ಟೈಲ್‌, ಕೆಲಸ, ಪತಿ ಮತ್ತು ಸಂಪಾದನ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಚೈತ್ರಾ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ. 

ಯಾವ್ದೂ ಸೀರಿಯಲ್ ಮಾಡಿಲ್ವಾ?
ನಾನು ಎಲ್ಲೇ ಹೋದ್ರೂ ಜನ ನನ್ನ ನೋಡ್ತಾರೆ 50% ಜನ ನಾನು ಚೈತ್ರಾ ವಾಸುದೇವನ್ ಅಂತ ಕಂಡು ಹಿಡಯುತ್ತಾರೆ ಇನ್ನೂ 50% ಜನ ಎಲ್ಲೋ ನೋಡಿದ್ದೀನಿ ಅನ್ನೋ ಕನ್ಫ್ಯೂಷನ್‌ನಲ್ಲಿ ಇರ್ತಾರೆ. ಸಿನಿಮಾ ನಾ ಸೀರಿಯಲಾ ಅಂತ ಪ್ರಶ್ನೆ ಕೇಳ್ತಾರೆ. ಎಲ್ಲರೂ ನನ್ನ ಗುರುತು ಹಿಡಿಯುವುದಕ್ಕೆ ಖುಷಿ ಇದೆ ಆದರೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಪೈಲ್ವಾನ್ ಸಿನಿಮಾದಲ್ಲಿ ಸಣ್ಣ ದೃಶ್ಯ ಮಾಡಿದ್ದೀನಿ. ನಟಿಸುವಷ್ಟು ಟ್ಯಾಲೆಂಟ್‌ ನನಗಿದ್ಯಾ ಇಲ್ವೋ ಗೊತ್ತಿಲ್ಲ ತುಂಬಾ ಆಫರ್‌ ಸಿಕ್ಕಿದೆ ಪ್ರಮುಖ ಪಾತ್ರಕ್ಕೆ ಬಂದಿದೆ ಆದರೆ ಯಾವುದು ಒಪ್ಪಿಕೊಂಡಿಲ್ಲ.

ಒತ್ತಡ ಕಂಟ್ರೋಲ್ ಮಾಡೋದು ಹೇಗೆ?
ಪ್ರತಿ ದಿನ ಸ್ಟ್ರೆಸ್‌ ಮತ್ತು ಟೆನ್ಶನ್ ಇದ್ದೇ ಇರುತ್ತೆ ನಾನು ಎಲ್ಲಾದ್ರೂ ಹೋಗಿ ಏನಾದ್ರೂ ಚೆನ್ನಾಗಿರುವುದನ್ನು ತಿನ್ನುತ್ತೀನಿ. ತಿಂದಿಲ್ಲ ಅಂದ್ರೆ ಚಂದುಗೆ (ಸಹೋದರಿ) ಕಾಲ್ ಮಾಡಿ ಎಲ್ಲಾ ಹೇಳಿಕೊಳ್ಳುತ್ತೀನಿ.

ಯಾಕೆ ಬಟ್ಟೆಗಳು ಅಂದ್ರೆ ಅಷ್ಟೋಂದು ಇಷ್ಟ? ನಿಮ್ಮ ಲೈಫ್‌ಸ್ಟೈಲ್ ಬಗ್ಗೆ ಹೇಳಿ..
ಜನರಿಗೆ ಸ್ವಲ್ಪ ತಪ್ಪು ಕಲ್ಪನೆ ಇದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ.  ನಾನು ಕೆಲಸ ಆರಂಭಿಸಿದಾಗ ನನಗೆ ಬಟ್ಟೆ ಇರ್ತಾ ಇಲಿಲ್ಲ ಆಗ ಮಾಲ್‌ಗಳಲ್ಲಿ ಒಳ್ಳೆ ಬಟ್ಟೆ ಬ್ರ್ಯಾಂಡ್ ಆರಂಭವಾಗಿತ್ತು ಅವರಿಗೆ ಸಂಪರ್ಕ ಮಾಡಿ ಸ್ವಲ್ಪ ಹಣ ಕೊಟ್ಟು ಬಟ್ಟೆ ಖರೀದಿ ಮಾಡುತ್ತಿದ್ದೆ. ಆಗ ನಾನು ಒಂದು ತೀರ್ಮಾನ ಮಾಡಿದೆ, ಜೀವನದಲ್ಲಿ ದುಡಿದರೆ ನನಗೆ ಬೆಲೆ ನೋಡದೆ ನನಗೆ ಇಷ್ಟವಾದ ಬಟ್ಟೆ ತೆಗೆದುಕೊಳ್ಳಬೇಕು ಸಾಕು ಅನ್ನೋಷ್ಟು ಬಟ್ಟೆ ತೆಗೆದುಕೊಳ್ಳಬೇಕು ಅಂತ ಕಷ್ಟ ಪಟ್ಟಿದ್ದೀನಿ. 

Dubaiನ ಅತಿ ದೊಡ್ಡ ಚಿಕನ್ ಶವರ್ಮಾ ಸೇವಿಸಿದ ಚೈತ್ರಾ ವಾಸುದೇವನ್, ವಿಡಿಯೋ ವೈರಲ್!

ಪರ್ಸನಲ್ ಲೈಫ್ ಹೇಗೆ ಮ್ಯಾನೇಜ್ ಮಾಡ್ತೀರಾ, ನಿಮಗೆ ಮದ್ವೆಯಾಗಿದೆ.
ನನಗೆ ಈ ಪ್ರಶ್ನೆ ಕೇಳಿರುವುದು ಹುಡುಗೀರು. ನೀವೇ ಹೇಳಿ ಮದ್ವೆ ಆದ್ಮೇಲೆ ನಮಗೆ ಕೊಂಬು ಬರುತ್ತಾ? ಅಥವಾ ನಾಲ್ಕು ಕೈ ನಾಲ್ಕು ಕಾಲು ಬರುತ್ತಾ? ಮದ್ವೆ ಆದ್ಮೇಲೆ ಜವಾಬ್ದಾರಿ ಹೆಚ್ಚಾಗುತ್ತೆ. ಎಲ್ಲಾದಕ್ಕೂ ಟೈಂ ಕೊಡಬೇಕು. ಫ್ಯಾಮಿಲಿ, ಫ್ರೆಂಡ್ಸ್‌ ಮತ್ತು ಕೆಲಸಕ್ಕೆ ಟೈಂ ಡಿವೈಟ್‌ ಮಾಡಿಕೊಂಡದರೆ ಸಮಸ್ಯೆ ಆಗೋಲ್ಲ. ಮದ್ವೆ ಆದ ಮೇಲೆ ಕೆಲಸ ಮಾಡೋಕೆ ಯಾಕೆ ಬೈತಾರೆ ನಾವು ಏನಾದರೂ ತಪ್ಪು ಕೆಲಸ ಮಾಡ್ತಿದೀವಾ? ಅವರಿಗೆ ನಾವು ಸಪೋರ್ಟ್ ಆಗಬೇಕು ಆಗ ಅವರು ಕೂಡ ನಮಗೆ ಸಪೋರ್ಟ್ ಆಗುತ್ತಾರೆ. 

ಜೀವನದಲ್ಲಿ ಮರೆಯಲಾಗದ ಕೆಟ್ಟ ಘಟನೆ
ನಾನು ಕೆಲಸ ಆರಂಭಿಸಿದಾಗ ಮ್ಯಾನೇಜರ್‌ಗಳು ಕಾರ್ಯಕ್ರಮ ಸಂಜೆ ಇರುತ್ತೆ ಅಂದ್ರೆ ಬೆಳಗ್ಗೆ ಕರೆಯುತ್ತಿದ್ದರು. ಬೆಳಗ್ಗೆಯಿಂದಲೇ ಬಟ್ಟೆನ ಬಾಡಿಗೆ ತೆಗೆದುಕೊಳ್ಳಬೇಕಿತ್ತು. ಇಡೀ ದಿನ ಸುಮ್ಮನೆ ಕೂರಿಸುತ್ತಿದ್ದರು. ಒಂದು ಸಲ ನಾನು ಇಡೀ ದಿನ ಕಾಯುತ್ತಿದ್ದೆ ಅವರು ದೊಡ್ಡ ಪ್ಲ್ಯಾನರ್ ಅವರು ಹೇಳಿದ ರೀತಿ ಕೇಳಿದೆ.  5 ಸ್ಟಾರ್ ಹೋಟೆಲ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು, ಸಾಮಾನ್ಯವಾಗಿ ಕೆಲಸ ಮಾಡುವಾಗ ನಾನು ಊಟ ಮಾಡುವುದಿಲ್ಲ ಅವತ್ತು ಬೆಳಗ್ಗೆ ಬೇಗ ಹೋಗಿದಕ್ಕೆ ಮಧ್ಯಾಹ್ನ ಊಟ ಮಾಡೋಣ ಅಂತ ಒಂದ ಪ್ಲೇಟ್ ತೆಗೆದುಕೊಂಡು ಅವರು ಅಲ್ಲಿಗೆ ಬಂದು ಬೈದ್ರು ಏನ್ ಮಾಡ್ತಿದ್ಯಾ ನಿನಗೆ ಇಲ್ಲಿ ಒಂದು ಪ್ಲೇಟ್ ಊಟ ಎಷ್ಟು ಅಂತ ಗೊತ್ತಾ ನಿನಗೆ ಕೊಡುವ ದುಡ್ಡಿನಲ್ಲಿ 5 ಸಾವಿರ ಕಡಿಮೆ ಮಾಡಿ ಕೊಡ್ತೀನಿ ಅಂದ್ರು ನಾನು ಜೋರಾಗಿ ಅಳುತ್ತಾ ಬಂದಿದ್ದೆ. ಅವತ್ತೇ ನಿರ್ಧಾರ ಮಾಡಿದೆ ಹೊರಗಡೆ ತಿನ್ನೋದೇ ಬೇಡ ಅಂತ.  ಊಟ ಮಾಡೋದಕ್ಕೂ ಬೈತಾರ ಅಂತ ಅವತ್ತೇ ಗೊತ್ತಾಗಿದ್ದು. ಈಗ ಕೆಲಸ ಮಾಡುವ ರೀತಿ ಬದಲಾಗಿದೆ ಜನರನ್ನು ನೋಡುವ ರೀತಿ ಬದಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ
BBK 12: ಚೆನ್ನಾಗಿ ಆಡದೇ ಇದ್ರೂ ಅವ್ರನ್ನು ಯಾಕೆ ಮನೆಯಲ್ಲಿ ಇನ್ನೂ ಇಟ್ಕೊಂಡಿದ್ದಾರೋ ಗೊತ್ತಿಲ್ಲ: ಎಲಿಮಿನೇಷನ್​ ಬಗ್ಗೆ ಮಾಳು ಬೇಸರ