18 ವಯಸ್ಸಿಗಿಂತ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತ ದಾನ ಮಾಡಿ ಎಂದು ಕಿರುತೆರೆ ನಟಿ ರಕ್ಷಾ ಮನವಿ ಮಾಡಿಕೊಂಡಿದ್ದಾರೆ.
'ಬಯಸದೆ ಬಳಿ ಬಂದೆ' ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾಗಿ ಮಿಂಚುತ್ತಿದ್ದ ನಟಿ ರಕ್ಷಾ ಹೊಳ್ಳೆ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಬಣ್ಣದ ಪರದೆ ಮೇಲೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.
ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ!
undefined
ಎಲ್ಲೆಡೆ ಕೊರೋನಾ ವೈರಸ್‌ನ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿರುವುದರಿಂದ, ಕೊವಿಡ್ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಇನ್ನೂ ವ್ಯಾಕ್ಸಿನ್ ಪಡೆದರೆ ಸೋಂಕು ತಗಲುವುದರಿಂದ ಅಥವಾ ತಗುಲಿದರೂ ವೈರಸ್‌ನ ಗೆದ್ದು ಬರುವ ಶಕ್ತಿ ನೀಡುತ್ತದೆ. ಕೆಲವು ದಿನಗಳಿಂದ ಆಕ್ಸಿಜನ್ ಕೊರತೆ, ಬೆಡ್ ಕೊರತೆ ಎದ್ದು ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಬ್ಲಡ್ ಬ್ಯಾಂಕ್‌ಗಳಲ್ಲೂ ಸಿಗದಂತೆ ರಕ್ತದ ಕೊರತೆ ಶುರುವಾಗುವ ಮುನ್ನ ಎಲ್ಲರೂ ರಕ್ತ ದಾನ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ವ್ಯಾಕ್ಸಿನ್ ಪಡೆದು 60 ದಿನಗಳ ಕಾಲ ಯಾರೂ ರಕ್ತ ದಾನ ಮಾಡುವಂತಿಲ್ಲ. ಹೀಗಾಗಿ ವ್ಯಾಕ್ಸಿನ್ ಪಡೆಯುವ ಮುನ್ನವೇ ದಾನ ಮಾಡಿಬೇಕಾಗಿ ವಿನಂತಿಸಿಕೊಂಡಿದ್ದಾರೆ.
ರಕ್ಷಾ ಮಾತು:
'ಕೊರೋನಾದಿಂದ ಇದೀಗ ಮತ್ತೊಂದು ಬಿಕ್ಕಟ್ಟಿಗೆ ಸಿಲುಕಿದ್ದೀವಿ. ಯಾವ ಬ್ಲಾಡ್ ಬ್ಯಾಂಕ್‌ಗಳಲ್ಲೂ ಬ್ಲಡ್ ಸಿಗದಂತೆ ಆಗುವ ಪರಿಸ್ಥಿತಿ ಎದುರಿದೆ. 18 ವರ್ಷಕ್ಕೂ ಮೇಲ್ಪಟ್ಟವರು ಮೊದಲ ಡೋಸ್ ವ್ಯಾಕ್ಸಿನ್ ಪಡೆಯುವ ಮುನ್ನ ದಯವಿಟ್ಟು ರಕ್ತ ದಾನ ಮಾಡಿ. ವ್ಯಾಕ್ಸಿನ್ ಪಡೆದು 60 ದಿನಗಳ ಕಾಲ ರಕ್ತ ದಾನ ಮಾಡುವಂತಿಲ್ಲ' ಎಂದಿದ್ದಾರೆ ರಕ್ಷಾ.