ಇನ್ನೂ ಒಂದು ವರ್ಷ ಸಂಭಾವನೆ ಕಡಿತ ಒಪ್ಪಬೇಕು, ಅಡ್ವಾನ್ಸ್ ಹಿಂತಿರುಗಿಸಿರುವೆ: ಬಿಗ್ ಬಾಸ್ ಚೈತ್ರಾ ವಾಸುದೇವನ್‌

Suvarna News   | Asianet News
Published : May 01, 2021, 03:55 PM ISTUpdated : May 01, 2021, 04:09 PM IST
ಇನ್ನೂ ಒಂದು ವರ್ಷ ಸಂಭಾವನೆ ಕಡಿತ ಒಪ್ಪಬೇಕು, ಅಡ್ವಾನ್ಸ್ ಹಿಂತಿರುಗಿಸಿರುವೆ: ಬಿಗ್ ಬಾಸ್ ಚೈತ್ರಾ ವಾಸುದೇವನ್‌

ಸಾರಾಂಶ

ಮತ್ತೊಮ್ಮೆ ಕೊರೋನಾ ಲಾಕ್‌ಡೌನ್ ಆಗಿರುವ ಕಾರಣ ಕಲಾವಿದರ ಜೀವನಕ್ಕೆ ಯಾವ ರೀತಿ ಪೆಟ್ಟು ಬೀಳುತ್ತಿದೆ ಎಂದು ಚೈತಾ ವಾಸುದೇವನ್ ಹೇಳಿದ್ದಾರೆ. 

ಕನ್ನಡ ಜನಪ್ರಿಯ ನಿರೂಪಕಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಲಾಕ್‌ಡೌನ್ ಕಾರಣ ತಮ್ಮ ನಿವಾಸ/ಆಫೀಸ್‌ನಿಂದಲೇ  ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಚೈತ್ರಾ ತಮ್ಮ ಕಾರ್ಯಕ್ರಮಗಳ ಬಗ್ಗೆ ಅಪ್ಡೇಟ್‌ ನೀಡುತ್ತಿರುತ್ತಾರೆ. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಚೈತ್ರಾ ಲಾಕ್‌ಡೌನ್‌ನಿಂದ ಆಗುತ್ತಿರುವ ತೊಂದರೆಗಳು ಏನೆಂದು ಹೇಳಿದ್ದಾರೆ.

ಕೊನೆಗೂ ಸ್ಕಿನ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಬಿಗ್‌ಬಾಸ್‌ ಚೈತ್ರಾ ವಾಸುದೇವನ್‌! 

'ಕೊರೋನಾ ಮೊದಲ ಅಲೆ ನಂತರ ನಾನು ನಾರ್ಮಲ್ ಲೈಫ್‌ ಆರಂಭಿಸಿದ್ದೆವು ಅದರಲ್ಲೂ ಈವೆಂಟ್ ಹಾಗೂ ಶೋಗಳು ತುಂಬಾ ಕಷ್ಟದಿಂದ ಆರಂಭವಾಗಿತ್ತು. ಎರಡನೇ ಅಲೆ ಹೆಚ್ಚಾಗುತ್ತದೆ ಎಂಬ ಅರಿವಿಲ್ಲದೆ ದೊಡ್ಡ ಶೋ ಕೂಡ ಆರಂಭಿಸಿದೆವು. ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮಾಡಲಾಗಿತ್ತು. ರಾತ್ರೋರಾತ್ರಿ ಚಿತ್ರೀಕರಣ ಹಾಗೂ ಶೋಗಳು ರದ್ದಾಗಿ ಹೊಟ್ಟೆಪಾಡಿಗೆ ಹೊಡೆತ ಬಿತ್ತು' ಎಂದು ಚೈತ್ರಾ ಹೇಳಿದ್ದಾರೆ. 

'ಕಲಾವಿದರೂ ಜನರ ನಡುವೆ ಹಾಗೂ ವೇದಿಕೆಯ ಮೇಲೆ ಇರಬೇಕು ಆದರೆ ಈ ಪರಿಸ್ಥಿತಿಯಿಂದ ನಾಲ್ಕು ಗೋಡೆಗಳ ನಡುವೆ ಕೂರುವಂತೆ ಆಗಿದೆ.  ಎರಡನೇ ಅಲೆ ನಂತರವೂ ನಮ್ಮ ಸಂಭಾವನೆಗಳ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ಮುಂಬರುವ ದಿನಗಳಲ್ಲಿ ಲೈಮ್‌ಲೈಟ್‌ ನಾರ್ಮಲ್ ಆಗುವುದು ಅನುಮಾನವಿದೆ' ಎಂದಿದ್ದಾರೆ ಚೈತ್ರಾ.

'ನಾನೇ ನೋಡುತ್ತಿರುವೆ, ನಿರ್ಮಾಪಕರು ಹಾಗೂ ವಿತರಕರು ತಮ್ಮ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನನ್ನೊಟ್ಟಿಕೆ ಡೇಟ್ ಬುಕ್ ಮಾಡಿದ್ದರು ಆದರೆ ಈ ಪರಿಸ್ಥಿತಿ ನೋಡಿ ಅವರೇ ಬೇಸತ್ತಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಮಾಡುವುದು ಎಂದೇ ತಿಳಿಯುತ್ತಿಲ್ಲ. ನಿಜಕ್ಕೂ ಬೇಸರವಾಗುತ್ತದೆ. ನಾನು ಪಡೆದಿರುವ ಅಡ್ವಾನ್ಸ್‌ಗಳ್ನು ಹಲವರಿಗೆ ಹಿಂತಿರುಗಿಸಿದೆ' ಎಂದು ಚೈತ್ರನ ಮಾತನಾಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?