
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯಿಂದ ನಟ ಚರಿತ್ ಬಾಳಪ್ಪ ಹೊರಬಿದ್ದಿದ್ದಾರೆ.
ಹೌದು.... ನಾಯಕ ನಟ ಧ್ರುವಂತ್ ಪಾತ್ರ ಮಾಡಿದ್ದ ಚರಿತ್ ಬಾಳಪ್ಪ ಕೋವಿಡ್ ಕಾರಣ ನೀಡಿ ಮುದ್ದುಲಕ್ಷ್ಮಿ ಧಾರವಾಹಿಯಿಂದ ಹೊರನಡೆದಿದ್ದಾರೆ.
'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಅಂತ್ಯ; ಭಾವುಕ ಪತ್ರ ಬರೆದ ಮಾನ್ಸಿ
ಈ ಕುರಿತು ಚರಿತ್ ಬಾಳಪ್ಪ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದು,ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ನಿಯಮಗಳನ್ನು ಎದುರಿಸಬೇಕು. ಈ ಕಾರಣದಿಂದ ನಾನು ಮುದ್ದುಲಕ್ಷ್ಮೀ ಧಾರಾವಾಹಿಯಿಂದ ಹೊರಗಡೆ ಬಂದಿದ್ದೇನೆ ಎಂದು ನನ್ನ ಹಿತೈಷಿಗಳಿಗೆ ತಿಳಿಸಲು ದುಃಖವಾಗುತ್ತದೆ. ಬೇಗ ಜಗತ್ತು ಸಹಜಸ್ಥಿತಿಗೆ ಬರುವಂತಾಗಲಿ. ಇಷ್ಟುದಿನ ನನ್ನ ಕಠಿಣ ಶ್ರಮಕ್ಕೆ ಬೆಂಬಲವಾಗಿ ನಿಂತು ಹರಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
Posted by Charith Balappa Poojary on Saturday, May 1, 2021
ಆದ್ರೆ, ಬಲ್ಲ ಮೂಲಗಳ ಪ್ರಕಾರ ಪಾರ್ಟಿವೊಂದರಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚರಿತ್ ಬಾಳಪ್ಪ ಅವರನ್ನು ಮುದ್ದುಲಕ್ಷ್ಮಿ ಧಾರಾವಾಹಿ ಹೊರಹಾಕಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.