
ಕಿರುತೆರೆ ಜನಪ್ರಿಯಾ ನಟಿ, ರಾಧಿಕಾ ಪಂಡಿತ್ xerox ಎಂದೇ ಗುರುತಿಸಿಕೊಂಡಿರುವ ಕಾವ್ಯ ಗೌಡ ಮೇ 13ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್ ಜೊತೆ ಮಾಡಿಸಿದ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗುತ್ತಿದೆ.
ಬಾಳ ಸಂಗಾತಿಯನ್ನು ಪರಿಚಯಿಸಿಕೊಟ್ಟ ನಟಿ ಕಾವ್ಯ ಗೌಡ; ದುಬೈನಲ್ಲಿ ಪೋಟೋ ಶೂಟ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಕಾವ್ಯ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದರು. 'ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಪೋಷಕರು ಉತ್ತಮ ಹುಡುಗನನ್ನು ಆಯ್ಕೆ ಮಾಡಿದ್ದಾರೆ. ನನ್ನ ತಂದೆ, ತಾಯಿ ಆಯ್ಕೆಯನ್ನು ನಾನು ಮನಸ್ಸಿನಿಂದ ಒಪ್ಪಿಕೊಂಡಿರುವೆ. ನನಗೆ ಸೋಮಶೇಖರ್ ಜೊತೆ ಮಾತನಾಡಿದಾಗ ಖುಷಿ ಆಯ್ತು. ಅವರು ಒಳ್ಳೆಯವರು, ನನ್ನ ಜೀವನವನ್ನು ಅವರೊಟ್ಟಿಗೆ ಆರಂಭಿಸಲು ಖುಷಿಯಾಗಿರುವೆ,' ಎಂದು ಕಾವ್ಯ ಹೇಳಿದ್ದಾರೆ.
'ರಾಧಾ ರಮಣ', 'ಗಾಂಧಾರಿ', 'ಶುಭ ವಿವಾಹ', 'ಬಕಾಸುರ' ಸೇರಿದಂತೆ ಅನೇಕ ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ ಕಾವ್ಯ ಅಭಿನಯಿಸಿದ್ದಾರೆ. ಮದುವೆ ಆದ ಮೇಲೂ ಸಿನಿಮಾ ರಂಗದಲ್ಲಿ ಇರುತ್ತೀರಾ ಎಂದು ಪ್ರಶ್ನೆ ಮಾಡಿದರೆ, 'ರಾಧಾ ರಮಣ ನಂತರ ನಾನು ಯಾವ ಆಫರ್‌ಗಳನ್ನೂ ಒಪ್ಪಿಕೊಂಡಿಲ್ಲ. ಪ್ರಯಾಣ ಮಾಡುತ್ತಾ ಫ್ಯಾಮಿಲಿ ಜೊತೆ ಸಮಯ ಕಳೆಯಬೇಕಿತ್ತು. ಮದುವೆ ಆದ ಮೇಲೆ ಸಮಯ ಸಿಗುವುದಿಲ್ಲ ಎಂದು ಹೀಗೆ ಮಾಡಿದೆ. ಎಂಟು ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಮಾಡಿದ ಸಾಧನೆ ಬಗ್ಗೆ ನನಗೆ ಖುಷಿ ಇದೆ,' ಎಂದಿದ್ದಾರೆ.
ಕಾವ್ಯ ಗೌಡಂಗೆ ಮದ್ವೆಯಂತೆ!; ಹುಡುಗನನ್ನು ಅವರು ವರ್ಣಿಸಿದ್ದು ಹೀಗೆ!
ಬೆಂಗಳೂರಿನ ಐಷಾರಾಮಿ ಹೊಟೇಲ್‌ನಲ್ಲಿ ಕಾವ್ಯ ಮದುವೆ ನಡೆಯಲಿದೆ. 'ನಮ್ಮ ಮನೆಯಲ್ಲಿ ನಾನು ಕಿರಿಯ ಮಗಳು. ಅವರ ಮನೆಯಲ್ಲಿ ಸೋಮಶೇಖರ್ ಕಿರಿಯವರು. ಹೀಗಾಗಿ ಮದುವೆಯನ್ನು ಎರಡು ಕುಟುಂಬದವರು ಗ್ರ್ಯಾಂಡ್ ಆಗಿ ಮಾಡಬೇಕು ಎಂಬ ಆಸೆ ಇತ್ತು. ಆದರೆ ಕೊರೋನಾ ಸಂದರ್ಭದಲ್ಲಿ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕಾಗಿದೆ. ಸರಳವಾಗಿ ಮದುವೆಯಾಗುತ್ತಿದ್ದೇವೆ,' ಎಂದು ಕಾವ್ಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.