
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಹಾಸಂಗಮ ನಡೆಯುತ್ತಿದೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವೇದಿಕೆಯಲ್ಲಿ ಧಾರಾವಾಹಿ ಕಲಾವಿದರು ಭಾಗಿಯಾಗಿದ್ದರು. ಅದರಲ್ಲೂ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಲಕ್ಷಣ ತಂಡದಿಂದ ಭೂಪತಿ ಉರ್ಫ್ ಜಗನ್, ಲಕ್ಷಣ ಉರ್ಫ್ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ಕಪ್ಪು ಬಣ್ಣ ಎನ್ನುವ ಕಾರಣ ವಿಜಯಲಕ್ಷ್ಮಿ ಎದುರಿಸಿದ ಅವಮಾನಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿ ತಾಯಿ ದೊಡ್ಡ ಪಾತ್ರ ವಹಿಸುತ್ತಾರೆ. ತಾಯಿ ಸಪೋರ್ಟ್ ಇಲ್ಲಿದೆ ಏನೋ ಮಾಡಲಾಗದು. ಸೂಪರ್ ಸ್ಟಾರ್ ವೇದಿಕೆ ಮೇಲೆ ತಾಯಿ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ್ದಾರೆ. 'ಇದು ಬಣ್ಣದ ಜಗತ್ತು. ನಾವು ಹೇಗೆ ಕಾಣಿಸಿಕೊಳ್ಳುತ್ತೀವಿ ಅದರ ಮೇಲೆ ನಮ್ಮನ್ನು ಆಯ್ಕೆ ಮಾಡುತ್ತಾರೆ. ಒಂದು ತಪ್ಪು ಹುಡುಗಿ ಆಡಿಷನ್ ಮಾಡಿ ರಿಜೆಕ್ಟ್ ಆಗಿರುವ ಆ ನೋವನ್ನು ನಾನು ಅನುಭವಿಸಿರುವೆ. ನನ್ನ ತಾಯಿ ಮಧ್ಯೆರಾತ್ರಿ ಎದ್ದು ಅಳುತ್ತಿದ್ದರು. ಅಮ್ಮ ನಿನ್ನ ಮೇಲೆ ಆ ತಪ್ಪನ್ನು ದಯವಿಟ್ಟು ಹಾಕಿಕೊಳ್ಳಬೇಡ. ಏನೋ ಕೆಟ್ಟ ಗಳಿಗೆ ಹಾಗೆ ನಡೆಯಿತು,' ಎಂದಿದ್ದಾರೆ.
ಲಕ್ಷಣ ಮಾತುಗಳನ್ನು ಕೇಳಿ ಭಾವುಕರಾದ ನಟಿ ತಾರಾ ಅನುರಾಧ 'ತಾಯಿ ಅಂದ್ರೆಗೆ ಬೆಲೆ ಕಟ್ಟಲಾಗದ ಜೀವ' ಎನ್ನುತ್ತಾರೆ.
ಲಕ್ಷಣ ಧಾರಾವಾಹಿಯ ಕೇಡಿ ಭಾರ್ಗವಿ ರಿಯಲ್ ಲೈಫಲ್ಲಿ ಯಾರೆಂದು ತಿಳಿದರೆ ಶಾಕ್ ಆಗ್ತೀರಾ
'ಟ್ರೋಲಿಗರು ಆರಂಭದಲ್ಲಿ ನಾನು ಫೇರ್ ಆಗಿರುವ ಅಂದುಕೊಂಡಿದ್ದರು ಆದರೆ ನಾನು ಡಸ್ಕಿ ಕಾಂಪ್ಲೆಕ್ಷನ್ ಎಂದು ಗೊತ್ತಾದ ಮೇಲೆ ಸುಮ್ಮನಾದರು. ಟ್ರೋಗಳನ್ನು ಅಷ್ಟಾಗಿ ಎದುರಿಸಿಲ್ಲ. ನನ್ನಲ್ಲೂ inferiority complex ಇತ್ತು. ಎದುರಿಸಿಕೊಂಡು ಬಂದಿರುವೆ. ಆಡಿಷನ್‌ಗಳಲ್ಲಿ ಭಾಗಿಯಾಗುತ್ತಿದ್ದೆ ತುಂಬಾ ಹೆದರಿಕೊಳ್ಳುತ್ತಿದ್ದೆ, ಕಪ್ಪಿರುವೆ ಸೆಲೆಕ್ಟ್ ಆಗ್ತೀನೋ ಇಲ್ವೋ ಅನ್ನೋ ಭಯ ಚಳಿಯಿಂದ ಹೊರ ಬಂದ್ರೆ ಸಾಧನೆ ಮಾಡುತ್ತೀವಿ. ಕಪ್ಪಾಗಿದ್ದೀವಿ ಅನ್ನೋ ಕಾರಣ ಅಲ್ಲಿ ಕೀಳರಿಮೆ ಇರುವುದಿಲ್ಲ. ಯಾವುದೋ ಒಂದು ರೂಪದಲ್ಲಿ ಅದು ನಮಗೆ ಸಹಾಯ ಮಾಡುತ್ತದೆ' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ವಿಜಯ ಲಕ್ಷ್ಮಿ ಹೇಳಿದ್ದಾರೆ.
ವಿಜಯಲಕ್ಷ್ಮಿ ಮೂಲತಃ ಕೋಲಾರದವರು. ಪಕ್ಕಾ ಮಿಡಲ್ ಕ್ಲಾಸ್ ಕುಟುಂಬಕ್ಕೆ ಸೇರಿದ ಹುಡುಗಿ. 10ನೇ ತರಗತಿವರೆಗೂ ಡಮ್ ಸ್ಟುಡೆಂಟ್ ಆಗಿದ್ದರಂತೆ. ಪಿಯುಸಿಗೆ ಕಾಲಿಟ್ಟ ಮೇಲೆ ಇಡೀ ಜೀವನವೇ ಬದಲಾಗಿತ್ತಂತೆ. ಕಾಲೇಜ್‌ನಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಾಂಸ್ಕ್ರೃತಿಕ ಕಾರ್ಯಕ್ರಮಗಳಲ್ಲಿ ವಿಜಯ ಲಕ್ಷ್ಮಿ ತಪ್ಪದೇ ಭಾಗಿಯಾಗುತ್ತಿದ್ದರಂತೆ. ಸಿನಿಮಾ ಮತ್ತು ಸೀರಿಯಲ್‌ಗೆ ನಾನು ಪದವಿ ಓದುವಾಗಲೇ ಸಮಯ ಕೊಡುತ್ತಿದ್ದೆ ಸುಮಾರು 5 ವರ್ಷಗಳು ಅಂತಾನೇ ಹೇಳಬಹುದು. ಕಪ್ಪಾಗಿರುವ ಕಾರಣ ಅವಕಾಶಗಳು ಸಿಗುತ್ತಿರಲಿಲ್ಲ. ಕೊನೆ ವರ್ಷದ ಎಕ್ಸಾಂನಲ್ಲಿ ನನಗೆ ಲಕ್ಷಣ ಧಾರಾವಾಹಿ ಆಡಿಷನ್ ಬಗ್ಗೆ ತಿಳಿಯಿತು. ಕೊರೋನಾ ಸಮಯ ಆಗಿದ್ದ ಕಾರಣ ಮೊಬೈಲ್‌ನಲ್ಲಿ ಅಡಿಷನ್ ಕೊಡುತ್ತಿದ್ದೆ. ಆ ಸಮಯದಲ್ಲಿ ನನಗೆ ಕರೆ ಮಾಡಿ ಅವಕಾಶ ಕೊಟ್ಟರು. 6 ತಿಂಗಳು ನಂತರ ಮೇಕಪ್ ಟೆಸ್ಟ್ ಲುಕ್ ಟೆಸ್ಟ್ ಮಾಡಿದ್ದರು. ನನ್ನ ಕನಸು ನನಸಾಗಿತ್ತು,' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.