ಕೊರೋನಾ ಪಾಸಿಟಿವ್‌ ಎಂದು ಧಾರಾವಾಹಿಯಿಂದ ಹೊರ ನಡೆದ ನಟ ವಿನಯ್ ಗೌಡ!

Suvarna News   | Asianet News
Published : May 07, 2021, 01:43 PM ISTUpdated : May 07, 2021, 02:17 PM IST
ಕೊರೋನಾ ಪಾಸಿಟಿವ್‌ ಎಂದು ಧಾರಾವಾಹಿಯಿಂದ ಹೊರ ನಡೆದ ನಟ ವಿನಯ್ ಗೌಡ!

ಸಾರಾಂಶ

ಕಿರುತೆರೆ ಜನಪ್ರಿಯಾ ನಟ ವಿನಯ್ ಗೌಡ ಕುಟುಂಬದ ಆರೋಗ್ಯದ ಕಾಳಜಿಯಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ರಿಯಾಲಿಟಿ ಶೋ, ಧಾರಾವಾಹಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿರುವ ನಟ ವಿನಯ್ ಗೌಡ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ, ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.  ವಿನಯ್‌ ಮತ್ತು ಪತ್ನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಪುತ್ರನಿಗೆ ನೆಗೆಟಿವ್ ಬಂದಿದೆ. 

ಈ ವಿಚಾರದ ಬಗ್ಗೆ ವಿನಯ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ದಯವಿಟ್ಟು ಕ್ಷಮಿಸಿ ನನಗೆ ತುಂಬ ಹತ್ತಿರವಾಗಿರುವ, ನಿಮಗೂ ಇಷ್ಟವಾಗಿರುವ ಮಹಾದೇವನ ಪಾತ್ರವನ್ನು ಮಾಡಲು ಆಗುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನಾನು ಶಿವನ ಪಾತ್ರಕ್ಕೆ ನ್ಯಾಯ ಬದಗಿಸಲು ಸಾಧ್ಯವಿಲ್ಲ. ಕಲಾವಿದ ಮೇಕಪ್ ಮಾಡಿ ಕೊಳ್ಳದೇ ನಟಿಸಲು ಆಗೋದಿಲ್ಲ. ಸಹ ಕಲಾವಿದರ ಜೊತೆ ಜೊತೆಯೂ ಮಾತನಾಡದೇ ನಾನು ನಟಿಸಲು ಆಗೋದಿಲ್ಲ. ಮಾಸ್ಕ್ ಹಾಕಿಕೊಂಡು ಪಾತ್ರ ಮಾಡುವುದು ಕಷ್ಟ. ಇವರೆಲ್ಲರ ಆರೋಗ್ಯ, ನನ್ನ ಮನೆಯವರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಾನು ಹೊರ ಬರುವ ನಿರ್ಧಾರ ಬಂದಿದ್ದೇನೆ,' ಎಂದು ವಿನಯ್ ಮಾತನಾಡಿದ್ದಾರೆ. 

ಖ್ಯಾತ ಗಾಯಕಿ ಆ್ಯಂಡ್ರಿಯಾ ಜೆರಮಿಯಾಗೆ ಕೊರೋನಾ ಪಾಸಿಟಿವ್! 

ವಿನಯ್ ನಿಜಕ್ಕೂ ಶಿವನ ಪಾತ್ರ ಅದ್ಭುತವಾಗಿ ನಟಿಸುತ್ತಿದ್ದರು. ಪಾತ್ರಕ್ಕಾಗಿ ಮಾಂಸಾಹಾರ ತ್ಯಜಿಸಿದ್ದರು. ಹಾಗೂ ಮೂರು ಬಾರಿ ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡಿಸಿಕೊಂಡಿದ್ದರು. ಇದರಿಂದ ತಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳು ಕೂಡ ಆಗಿವೆ ಎನ್ನುತ್ತಾರೆ ವಿನಯ್.  ಇನ್ನು ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸುವ ಮನಸ್ಸು ಮಾಡಿದ್ದಾರೆ ವಿನಯ್. ಅಲ್ಲದೇ ಕೆಲವೊಂದು ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ಅಭಿನಯಿಸುವ ಆಸೆ ವ್ಯಕ್ತ ಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!