'ರಾಮ್ ಯುಗ್' ವೆಬ್‌ ಸೀರಿಸ್‌ ಬಿಡುಗಡೆ; ರಾಮನ ಅವತಾರ ಹೊತ್ತ ದೂದ್ ಪೇಡ!

Published : May 07, 2021, 10:37 AM IST
'ರಾಮ್ ಯುಗ್' ವೆಬ್‌ ಸೀರಿಸ್‌ ಬಿಡುಗಡೆ; ರಾಮನ ಅವತಾರ ಹೊತ್ತ ದೂದ್ ಪೇಡ!

ಸಾರಾಂಶ

ನಟ ದಿಗಂತ್ ಮೊದಲ ಬಾರಿ ವೆಸ್‌ ಸೀರಿಸ್‌ನಲ್ಲಿ ಅಭಿನಯಿಸಿದ್ದು ಮೇ.6ರಂದು ಬಿಡುಗಡೆಯಾಗಿದೆ.   

ಮೇ.6 ಎಂಎಕ್ಸ್‌ ಪ್ಲೇಯರ್‌ನಲ್ಲಿ ಬಿಡುಗಡೆಯಾದ 'ರಾಮ ಯುಗ್' ವೆಬ್ ಸೀರಿಸ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಮೊದಲ ಬಾರಿ ನಟ ದಿಗಂತ್ ವೆಬ್‌ ಸೀರಿಸ್‌ನಲ್ಲಿ ಅಭಿನಯಿಸಿದ್ದು, ರಾಮನ ಅವತಾರದಲ್ಲಿ ಕಾಣಿಸಿ ಕೊಂಡಿದ್ದಾರೆ. 

ಕುನಾಲ್‌ ಕೊಹ್ಲಿ ನಿರ್ದೇಶನ ಮಾಡಿರುವ ಈ ವೆಬ್ ಸೀರಿಸ್‌ನಲ್ಲಿ ನಟ ದಿಗಂತ್, ಐಶ್ವರ್ಯ ಬಜಾ, ವಿವಾನ್ ಭಾತೆನಾ, ಅನೂಪ್ ಸೋನಿ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ಅನೇಕ ನಟ, ನಟಿಯರು ಅಭಿನಯಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಈ ಬೆಸ್ ಸೀರಿಸ್‌ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೊರೋನಾ ತಡೆಗೆ ಕನ್ನಡದಲ್ಲೇ ಸಲಹೆ ಕೊಟ್ಟ ಟಾಲಿವುಡ್ ಸೂಪರ್‌ಸ್ಟಾರ್ 

ನಟ ದಿಗಂತ್ ಪಾತ್ರ ಹೆಚ್ಚಾಗಿ ಹೈಲೈಟ್ ಆಗಿದೆ. ಆದರೆ ಸೀರಿಸ್‌ ಡಿಟ್ಟೋ ಧಾರಾವಾಹಿ ತರ ಇದೆ ಎನ್ನಲಾಗಿದೆ.  ವಿಶೇಷ ಏನೆಂದರೆ ವೆಬ್‌ ಸೀರಿಸ್‌ ಬಹುತೇಕ ಚಿತ್ರೀಕರಣ ನಡೆದದ್ದು, ಮಾರಿಷಸ್‌ನಲ್ಲಿ. 'ರಾಮಯುಗ್' ವೆಬ್‌ ಸೀರಿಸ್‌ನ ಪ್ರತಿಯೊಂದೂ ಟ್ರೈಲರ್‌ ಅನ್ನು ದಿಗಂತ್ ಹಂಚಿ ಕೊಳ್ಳುತ್ತಿದ್ದಾರೆ. 'ದಿಗಂತ್ ಅದ್ಭುತವಾಗಿ ಅಭಿನಯಿಸಿದ್ದಾರೆ. ನೀವು ತುಂಬಾ ಸ್ವೀಟ್ ರಾಮ ಆಗಿದ್ರಿ. ಈ ವೆಬ್‌ ಸೀರಿಸ್‌ ನಮ್ಮ ಮುಂದಿನ ಪೀಳಿಗೆ ನೋಡಬಹುದು,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್‌ಬಾಸ್‌ ಎಂಟ್ರಿಗಾಗಿ ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ, ನಿಮಗೆ ಅರ್ಹತೆಯೇ ಇಲ್ಲ ಎಂದ ಸಂಗೀತಾ ಶೃಂಗೇರಿ!
ಆಪ್ತ ಸ್ನೇಹಿತರ ಜೊತೆ ವಿಶೇಷವಾಗಿ ʻಬ್ರೈಡ್‌ ಟು ಬಿʼ ಪಾರ್ಟಿ ಆಚರಿಸಿಕೊಂಡ ಚಿಕ್ಕಣ್ಣ ಭಾವಿ ಪತ್ನಿ ಪಾವನಾ!