ಸದಾ ಶಾಂತತೆಯಿಂದ ಇರುವ ವೈಷ್ಣವಿ, ತಮ್ಮ ಮದುವೆ ವಿಚಾರ ಪ್ರಸ್ತಾಪ ಆದ ತಕ್ಷಣ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಶುಭಾ ಪೂಂಜಾ ಹೇಳಿದ ರೀತಿ ಇರ್ತಾರಾ ವೈಷ್ಣವಿ ಗಂಡ?
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದ ಸನ್ನಿಧಿ ಅಲಿಯಾಸ್ ಅಗ್ನಿಸಾಕ್ಷಿ ವೈಷ್ಣವಿ ತುಂಬಾನೇ ಕೂಲ್ ವ್ಯಕ್ತಿತ್ವದ ಹುಡುಗಿ. ಧಾರಾವಾಹಿ ಪ್ರಸಾರದ ಸಮಯದಲ್ಲಿ ವೈಷ್ಣವಿಗೆ ಮದುವೆ ಪ್ರಪೋಸಲ್‌ಗಳು ಹರಿದು ಬರುತ್ತಿದ್ದವು. ಇದೀಗ ಬಿಗ್ ಬಾಸ್‌ನಲ್ಲಿ ನೋಡಿ ನೋಡಿ ಈಕೆಯೇ ನನ್ನ ಗರ್ಲ್‌ಫ್ರೆಂಡ್ ಆಗಿದ್ದರೆ ಹೇಗೆ, ಎಂದು ಅಭಿಮಾನಿಗಳು ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ದಿವ್ಯಾ ಸುರೇಶ್ ಹಾಗೂ ವೈಷ್ಣವಿ ಮದುವೆ ಬಗ್ಗೆ ಮಾತನಾಡುತ್ತಾರೆ. 'ಇವಾಗ ಮದುವೆ ಅಗಲ್ವಾ? ಮದುವೆ ಅಂದಾಗ ಎಕ್ಸೈಟ್ ನಿಮಗೆ? ನಿಮ್ಮ ಕಣ್ಣ ಮುಂದೆ ಬರುವ ಒಂದು ವಿಷಯ ಯಾವುದು? ನೀವು ಯಾರ ಜೊತೆಗೂ ಯಾಕೆ ಜಾಸ್ತಿ ಮಾತನಾಡೋಲ್ಲ?' ಎಂದು ದಿವ್ಯಾ ಸುರೇಶ್ ವೈಷ್ಣವಿಗೆ ಪ್ರಶ್ನೆ ಮಾಡುತ್ತಾರೆ.
ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್ ಬಾಸ್' ನೋಡ್ತಿದ್ದಾರೆ ಹೆಣ್ಣುಮಕ್ಕಳು?
'ನನ್ನ ಜೀವನದಲ್ಲಿ ಸ್ನೇಹಿತರು ತುಂಬಾ ಕಡಿಮೆ. ನಾನು ಜಾಸ್ತಿ ಯಾರೊಂದಿಗೂ ಮಾತನಾಡುವುದಿಲ್ಲ. ನಾನು ಒಬ್ಬರನ್ನು ತುಂಬಾ ನಂಬುತ್ತೀನಿ. ದೊಡ್ಡ ಗ್ಯಾಂಗ್ ಇಲ್ಲ. ಜಸ್ಟ್ 2-3 ಜನ ಅಷ್ಟೆ ನನಗೆ ಫ್ರೆಂಡ್ಸ್. ನನಗೆ ಸರಿಯಾದ ವ್ಯಕ್ತಿ ಸಿಗಬೇಕು. ಎಲ್ಲಾನೂ ಅಪ್ಪ-ಅಮ್ಮ ಜೊತೆ ಹಂಚಿಕೊಳ್ಳಲು ಅಗುವುದಿಲ್ಲ, ಎಲ್ಲವೂ ಅಣ್ಣನ ಹತ್ತಿರ ಹೇಳಿಕೊಳ್ಳಲೂ ಆಗೋಲ್ಲ. ಸಂಗಾತಿಯಾಗಿ ಒಬ್ಬರು ಇದ್ದಾರೆ ನನಗೆ ಅನ್ನೋ ಫೀಲಿಂಗ್ ಬೆಸ್ಟ್. ಎಲ್ಲಾ ಹಂಚಿಕೊಳ್ಳಬಹುದು,' ಎಂದು ವೈಷ್ಣವಿ ಹೇಳಿದ್ದಾರೆ.
ಲಿವಿಂಗ್ ಏರಿಯಾದಲ್ಲಿ ಶುಭಾ, ರಘು ಹಾಗೂ ಅರವಿಂದ್ ಮಾತುಕತೆ ಮಾಡುವಾಗ ವೈಷ್ಣವಿ ಮಾತಿನ ಮಧ್ಯೆ ಜೀವನವೂ ಹಾಗೇ ಅಲ್ವಾ ಎಂದು ಹೇಳುತ್ತಾರೆ. 'ನಂಗೆ ಅನ್ಸುತ್ತೆ ವೈಷ್ಣವಿ ಗಂಡ ಎರಡೇ ವಾರಕ್ಕೆ ಮನೆ ಬಿಟ್ಟು ಹೊರಗೆ ಹೋಗ್ಬಿಡ್ತಾನೆ ಅಂತ. ಜೀವನ ಶೂನ್ಯ ಶೂನ್ಯ ಅಂದ್ಕೊಂಡು. ಅವನು ನಿನ್ನ ಜೊತೆ ಇರ್ತಾನೆ ಅಂದ್ರೆ ಅದು ಭ್ರಮೆ,' ಎಂದು ಶುಭಾ ಪೂಂಜಾ ಹೇಳುತ್ತಾರೆ.
#BBK8: ಯೋಗ, ಡ್ರೆಸ್ ಮಾಡ್ಕೊಂಡೇ ವೈಷ್ಣವಿ ಸೈಲೆಂಟ್ ಆಗಿದ್ರೆ ಬೇಗ ಎಲಿಮಿನೇಟ್ ಆಗ್ತಾರಾ?
' ಜೀವನಪೂರ್ತಿ ನನ್ನ ಜೊತೆಗೇ ಇರ್ತಾನೆ, ಮುಂದಿನ ಜನ್ಮದಲ್ಲೂ ನಿನ್ನ ಜೊತೆಗೇ ಇರ್ತಿನಿ ಅಂತ ಬರ್ತಾನೆ,' ಎಂದು ವೈಷ್ಣವಿ ಉತ್ತರಿಸುತ್ತಾರೆ. ಅಷ್ಟರಲ್ಲಿ ರಘು 'ಈ ಜನ್ಮಕ್ಕೆಕ್ಕೆ ಬೇಡ, ಮುಂದಿನ ಜನ್ಮದಲ್ಲಿ ಬರ್ತಿನಿ ಅಂತ ಹೇಳಿ ಹೋಗ್ತಾನೆ,' ಎಂದು ತಮಾಷೆ ಮಾಡಿದ್ದಾರೆ.