Coming Soon: ಅಪ್ಪನಾಗೋ ವಿಷಯ ಹೇಳಿಕೊಂಡ ವಿಜಯ್ ಚಂದ್ರ!

Suvarna News   | Asianet News
Published : Nov 18, 2021, 01:02 PM IST
Coming Soon: ಅಪ್ಪನಾಗೋ ವಿಷಯ ಹೇಳಿಕೊಂಡ ವಿಜಯ್ ಚಂದ್ರ!

ಸಾರಾಂಶ

ಬ್ರೇಕಿಂಗ್ ನ್ಯೂಸ್ ಮೂಲಕ ಮತ್ತೆ ಲೈಮ್‌ಲೈಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟ ವಿಜಯ್....  

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ್ ಚಂದ್ರ (Vijay Chandra) ಕೆಲವು ವರ್ಷಗಳಿಂದ ಲೈಮ್‌ಲೈನಿಂದ ದೂರವಿದ್ದರು. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದು, ನಟ ವಿಜಯ್ ಗುಡ್‌ ನ್ಯೂಸ್‌ವೊಂದನ್ನು (Good news) ರಿವೀಲ್ ಮಾಡಿದ್ದಾರೆ. ಜೊತೆಗೆ ಮಡದಿಯ ಪ್ರೆಗ್ನೆನ್ಸಿ ಶೂಟ್ (Pregnancy shoot) ಫೋಟೋ ಹಂಚಿಕೊಂಡಿದ್ದಾರೆ. 

'Coming Soon' ಎಂದು ಬರೆಯುವ ಮೂಲಕ ವಿಜಯ್ ಈ ನ್ಯೂಸ್‌ ರಿವೀಲ್ ಮಾಡಿದ್ದಾರೆ. ಇಬ್ಬರೂ ಪಿಂಕ್ (Pink) ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ನಿ ಸೌಜನ್ಯಾ (Soujanya) ಬೇಬಿ ಬಂಪ್ ಫ್ಲಾಂಟ್ ಮಾಡುತ್ತಿದ್ದರೆ, ಅವರ ಹಿಂದಿನಿಂದ ವಿಜಯ್ ಜಿಗಿದು ಸಂಭ್ರಮಿಸುತ್ತಿದ್ದಾರೆ. ಪ್ರತಿಷ್ಠಿತ ಸ್ಕೈ ಬ್ಲೂ (Sky Blue) ಆರ್ಚಿಡ್ ರೆಸಾರ್ಟ್‌ನಲ್ಲಿ ಶೂಟ್ ಮಾಡಿಸಿದ್ದು, ಕಿರಣ್ ರಾಜ್ (Kiran Raj) ಫೋಟೋ ಸೆರೆ ಹಿಡಿದಿದ್ದಾರೆ. 

ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ, ಡಬಲ್ ಸಂಭ್ರಮದಲ್ಲಿ ದಿನೇಶ್ ಕಾರ್ತಿಕ್!

ಕಿರುತೆರೆ ವೀಕ್ಷಕರಿಗೆ ವಿಜಯ್ ತುಂಬಾನೇ ಪರಿಚಯದ ಮುಖ. ಹೀಗಾಗಿ ನಟ ಅನೌನ್ಸ್ ಮಾಡಿದ ಕೂಡಲೇ ಅಭಿಮಾನಿಗಳು ಕಾಮೆಂಟ್‌ಗಳಲ್ಲಿ (Comments) ಶುಭಾಶಯಗಳನ್ನು ತಿಳಿಸಿದ್ದಾರೆ.  ಸಿನಿ ಸ್ನೇಹಿತರು ಕೂಡ ಫೋಟೋ ಲೈಕ್ ಮಾಡಿದ್ದಾರೆ.  ಹಲವು ವರ್ಷಗಳಿಂದ ವಿಜಯ್ ಮತ್ತು ಸೌಜನ್ಯಾ ಪ್ರೀತಿಸುತ್ತಿದ್ದು, (Relationship) ಪೋಷಕರ ಒಪ್ಪಿಗೆ ಪಡೆದುಕೊಂಡು 2018ರಲ್ಲಿ ವೈವಾಹಿಕ ಜೀವನಕ್ಕೆ (Marrigae) ಕಾಲಿಟ್ಟಿದ್ದಾರೆ.

Preity Zinta: ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ಅಮ್ಮನಾದ ಬಾಲಿವುಡ್ ನಟಿ

'ಲಕ್ಷ್ಮಿ ಬಾರಮ್ಮ' (Lakshmi Baramma) ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ವಿಜಯ್, ಆನಂತರ ಎರಡು ಕನಸು (Eradu Kanasu) ಮತ್ತು ಮೌನರಾಗದಲ್ಲಿ (Mounraaga) ಅಭಿನಯಿಸಿದ್ದಾರೆ. ಬಾಲ್ಯದಿಂದಲೂ ನಟನಾಗಬೇಕು ಎಂಬ ಕನಸಿನ ಬಗ್ಗೆ ಟೈಮ್ಸ್ ಜೊತೆ ಹಂಚಿಕೊಂಡಿದ್ದಾರೆ. 'ನಾನು ಬಾಲ್ಯದಿಂದಲೂ ನಟನಾಗಬೇಕು ಎಂದು ಕನಸು (Dream) ಕಂಡಿದ್ದೆ. ವಿದ್ಯಾಭ್ಯಾಸದ (Education) ಕಡೆ ಹೆಚ್ಚಿನ ಗಮನ ನೀಡಬೇಕು ಎಂಬ ಕಾರಣಕ್ಕೆ ನನ್ನ ಕುಟುಂಬ ಕೆಲವೊಮ್ಮೆ ನನಗೆ ಸಪೋರ್ಟ್ (Support) ಮಾಡಲಿಲ್ಲ. ಶಾಲಾ (Shool) ದಿನಗಳಿಂದ ನಾನು ಕಲ್ಚರಲ್ ಆಕ್ಟಿವಿಟಿಯಲ್ಲಿ (Cultural activities) ತೊಡಗಿಕೊಂಡಿದ್ದ ಕಾರಣ ನನಗೆ ಬಾಲ್ಯದಿಂದ ಕೊಂಚ ಕಾನ್ಫಿಡೆನ್ಸ್‌ ಹೆಚ್ಚಾಗಿತ್ತು. ವಿದ್ಯಾಭ್ಯಾಸ ಮುಗಿಸಿದ ನಂತರ ನನ್ನ ಕುಟುಂಬಸ್ಥರ ಜೊತೆ ನನ್ನ ಆಸಕ್ತಿ ಬಗ್ಗೆ ಹಂಚಿಕೊಂಡು ಆನಂತರ ರಂಗಭೂಮಿ (Theater) ಪ್ರವೇಶಿಸಿದೆ. ಅಲ್ಲಿಂದ ನಾನು ಸ್ಟ್ರೀಟ್ ಪ್ಲೇ (Street play) ಮತ್ತು ಇನ್ನಿತರ ನಾಟಕಗಳನ್ನು ಮಾಡಿದೆ,' ಎಂದು ವಿಜಯ್ ಹೇಳಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?