‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’

By Web Desk  |  First Published Oct 17, 2019, 11:38 PM IST

ಗುರುವಾರದ ಬಿಗ್ ಬಾಸ್ ಮನೆಯಲ್ಲಿ  ಭಾವನೆಗಳ ಹೊಯ್ದಾಟ/ ತಂದೆ-ತಾಯಿ ಬಾಂಧವ್ಯ ತೆರೆದಿರಿಸಿದ ಸ್ಪರ್ಧಿಗಳು/ ತಮ್ಮ ತಾಯಿಯೊಡಗಿನ ಜೀವನದ ಘಟನಾವಳಿಗಳನ್ನು ತೆರೆದಿರಿಸಿದ ರವಿ ಬೆಳಗೆರೆ


ಚಂದನಾ ಅಪ್ಪ ಮತ್ತು ಅಮ್ಮನ ಬಗ್ಗೆ ಹಾಡಿದ ಹಾಡು ಮೊದಲೇ ಬಿಗ್ ಬಾಸ್ ಮನೆಯಲ್ಲಿ ಕಣ್ಣಿರು ತರಿಸಿತ್ತು. ಇದಾದ ಮೇಲೆ ಒಬ್ಬೊಬ್ಬರಾಗಿ ತನ್ನ ಕತೆಯನ್ನು ಹೇಳಿಕೊಂಡರು. ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ತಾಯಿಯೊಂದಿಗಿನ ಜೀವನ ಅನುಭವ ಬಿಚ್ಚಿಟ್ಟರು.

ನಾನು ತಾಯಿಯ ಮಗ, ತಂದೆ ಎಂಬುವನ್ನು ನಾನು ಒಂದು ಕಾನೂನು ಎಂದಷ್ಟೇ ಹೇಳಬಲ್ಲೆ. ನಾನು ತಾಯಿಯ ಮಗ, ಆಕೆ ನನ್ನನ್ನು ಎತ್ತಿಕೊಂಡು ತೆಗೆಸಿಕೊಂಡ ಪೋಟೋ ನನ್ನ ಕಚೇರಿಯಲ್ಲಿದೆ.

Tap to resize

Latest Videos

ಯಾಯಿ ಪಾರ್ಶ್ವವಾಯುಗೆ  ತುತ್ತಾಗಿದ್ದರು. ನಾನು ನನ್ನ ತಾಯಿ ರಾಯಚೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೇವು. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಳು. ಪಾರ್ಶ್ವವಾಯುಗೆ ತುತ್ತಾಗಿದ್ದ ಕೈ ಮುರಿದು ಹೋಯಿತು.

ಒಂದೇ ದಿನದಲ್ಲಿ ಬದಲಾದ ರವಿ ಸ್ಥಾನ

ಇದಾದ ಮೇಲೆ ರವಿ ಬಾತ್ ರೂಂಗೆ ಹೋಗಬೇಕು ಎಂದಳು. ನಾನು ಆಕೆಯ ಕೈ ಹಿಡಿದು ಕರೆದುಕೊಂಡು ಹೋದೆ. ನೀನು ಹೊರಗೆ ಹೋಗು ಎಂದಳು ಆದರೆ ನಾನು ಹೊರಗೆ ಬರಲಿಲ್ಲ.. ಆಕೆಯನ್ನು ಕಾಯಬೇಕು.. ಆಕೆಗೆ ಏನು ಆಗಬಾರದು ಎಂದು ಕಾದೆ.. ನನ್ನ ಜೀವನಕ್ಕೆ ಇದೊಂದು ಬಾಕಿ ಇತ್ತು ಎಂದು ತನ್ನನ್ನೇ ತಾನು ಶಪಿಸಿಕೊಂಡಳು.

ನಾನು 21ನೇ ವರ್ಷಕ್ಕೆ ಮದುವೆಯಾದೆ. ನನಗಾಗಿ ಅಲ್ಲ...ನನ್ನ ತಾಯಿಗಾಗಿ.. ಆಕೆಗೆ ಒಂದು ಹೆಣ್ಣು ಜೀವ ನೆರವಾಗಲಿ ಎಂದು. ಇದೇ ಸಂದರ್ಭದಲ್ಲಿ ಕೆಲ ಕೆಟ್ಟ ಗುಣಗಳನ್ನು ಕಲಿತುಬಿಟ್ಟೆ. ಆದರೆ ಈಗ ಕುಡಿಯುವುದನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದೇನೆ.

ಒಂದು ದಿನ ನಾನು ಕುಡಿದು ಬಂದು ಮಲಗಿದ್ದೆ. ಬೆಳಗ್ಗೆ ಲಲಿತಾ[ಹೆಂಡತಿ] ಬಂದು ತಟ್ಟಿ ತಟ್ಟಿ ಎಬ್ಬಿಸಿದಳು. ಏಳಿ ರವಿ..ಅಮ್ಮ ಬಿದ್ದು ಹೋಗಿದ್ದಾರೆ ಎಂದರು. ಅದು ಏನು ಆಗಿತ್ತೋ ಗೊತ್ತಿಲ್ಲ... ಬೆಳಗೆ ದೇವರ ಪೂಜೆ ಮಾಡುತ್ತಿದ್ದವು ಧುತ್ತೆಂದು ಕೆಳಕ್ಕೆ ಬಿದ್ದಿದ್ದರು.

ಸೀದಾ ಸ್ನೇಹಿತನಿಗೆ ಕರೆ ಮಾಡಿ ಕಾರು ತರಲು ಹೇಳಿದೆ. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಡಾಕ್ಟರ್ ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿ ಎಂದೆ.. ಅಮ್ಮನ ಬೆನ್ನು ಮೂಳಗೆ ದಬ್ಬಣ ಚುಚ್ಚಿದರು. ಅಲ್ಲಿಂದ ಅಮ್ಮ ಕೋಮಾಕ್ಕೆ ಹೋದವರು ಹಿಂದೆ ಬಾರಲೇ ಇಲ್ಲ.  ಪ್ರತಿದಿನ ರಾತ್ರಿ ಹಗಲು ಎನ್ನದೇ ಅಮ್ಮನ ಕಾದೆ. ಅಂತಿಮವಾಗಿ ಮನೆಗೆ ಬಂದಾಗ ಕೆಲಸದ ಆಳು ಬಂದು ಅಮ್ಮ ಹೋದರು  ಎಂದಳು’

ಹೀಗೆ ರವಿ ಬೆಳಗೆರೆ ತಮ್ಮ ತಾಯಿ ಮತ್ತು ತಮ್ಮ ನಡುವಿನ ಬಾಂಧವ್ಯ ಜೀವನದ ಕತೆ ತೆರೆದಿಟ್ಟರು. 

 

 

 

 

click me!