BB7; ಬಯಲಾಯ್ತು ಮದ್ವೆ ಗುಟ್ಟು, 'ಅಗ್ನಿಸಾಕ್ಷಿ' ಚಂದ್ರಿಕಾಳ ಸಿಂಗಲ್‌ ಲೈಫ್‌ಗೆ ಬ್ರೇಕ್?

By Web Desk  |  First Published Oct 17, 2019, 4:18 PM IST

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಇಂಟರೆಸ್ಟಿಂಗ್ ವಿಚಾರಗಳು ರಿವೀಲ್ ಆಗ್ತಾ ಇರುತ್ತದೆ. ಅದರಲ್ಲೂ ಲವ್, ಗಾಸಿಪ್ ಗಳಿಗೇನೂ ಬರವಿಲ್ಲ. ಬಿಗ್‌ ಬಾಸ್‌ ಮನೆಯ ಕೇಂದ್ರ ಬಿಂದು ಶೈನ್‌ ಶೆಟ್ಟಿ ಹಾಗೂ ಪ್ರಿಯಾಂಕಾ ಮದುವೆ ಗುಟ್ಟು ರಟ್ಟಾಗಿದೆ.


ಕಣ್ಣು ಬಿಟ್ಟು, ಹುಬ್ಬು ಹಾರಿಸುತ್ತಾ ಎದುರಾಳಿಯನ್ನು ಕಟ್ಟಿ ಹಾಕುವ ಶಕ್ತಿ ಹೊಂದಿರುವ ವಿಲನ್‌ ಅಂದ್ರೆ 'ಅಗ್ನಿಸಾಕ್ಷಿ' ಚಂದ್ರಿಕಾ ಅಲಿಯಾಸ್‌ ಪ್ರಿಯಾಂಕಾ. ಆದರೆ, ಬಿಗ್ ಬಾಸ್ ಮನೆಯಲ್ಲಿ ಲವರ್ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದಿನೇ ದಿನೇ ಒಂದಲ್ಲಾ ಒಂದು ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಟ್ರೋಲ್‌ಗೆ ಆಹಾರವಾಗುತ್ತಿರುವ ಪ್ರಿಯಾಂಕಾ ಬಿಗ್ ಬಾಸ್‌ 3ನೇ ಎಪಿಸೋಡ್‌ನಲ್ಲಿ ತಮಗೆ ಮದುವೆಯಾಗಿರುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

ಹೌದು! ಒಂದೆಡೆ ಕುರಿ ಪ್ರತಾಪ್‌ ಜೊತೆ ಮತ್ತೊಂದೆಡೆ ಶೈನ್‌ ಶೆಟ್ಟಿ ಜೊತೆ ಫ್ಲರ್ಟ್ ಮಾಡಿಕೊಂಡು ಕಾಲ ಕಳೆಯುತ್ತಿರುವ ಪ್ರಿಯಾಂಕಾ, ಶೈನ್ ಶೆಟ್ಟಿ ಜೊತೆ ಮಾತನಾಡುವಾಗ 'ನಮ್ಮಿಬ್ಬರಿಗೂ ಮದುವೆ ಆಗಿದೆ. ನಾವು ಪರೋಕ್ಷವಾಗಿ ಇಲ್ಲಿಗೆ ಬಂದಿದ್ದೇವೆ' ಎಂದು ಹೇಳಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ತಕ್ಷಣವೇ 'ನನಗೆ ಮದುವೆ ಆಗಿದೆ ನೀವು ಗಾಸಿಪ್‌ ಹರಡಿಸಬೇಡಿ' ಎಂದು ಪ್ರಿಯಾಂಕ ತೇಪೆ ಹಚ್ಚಿದ್ದಾರೆ.

 

ಆನಂತರ ಮದುವೆ ವಿಚಾರವದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಜೀವನದಲ್ಲಿ ನಾನು ತುಂಬಾ ಕಷ್ಟ ಪಟ್ಟು ಬೆಳೆದಿದ್ದೇನೆ. ನನ್ನ ಬಗ್ಗೆ ಹೀಗೆಲ್ಲಾ ಮಾತನಾಡಿ ನನ್ನ ಕರಿಯರ್ ಡ್ಯಾಮೇಜ್ ಮಾಡಬೇಡಿ' ಎಂದಿದ್ದಾರೆ.

click me!