
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸ್ಸೆಲ್ಲಾ ನೀನೆ' ಧಾರಾವಾಹಿ ನಟ ಸುಜಿತ್ ಗೌಡ ಅವರಿಗೆ ಕೊರೋನಾ ಸೋಂಕು ತಗುಲಿದೆ. ಪಾಸಿಟಿವ್ ಆಗಿಯೇ ಪಾಸಿಟವ್ ಬಂದಿರುವ ವಿಚಾರವನ್ನು ಸ್ವೀಕರಿಸಿರುವ ನಟ ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
'ನನಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ನಿಮಗೆಲ್ಲಾ ತಿಳಿಸಲು ಬಯಸುತ್ತೇನೆ. ನಾನು ಐಸೋಲೇಟ್ ಆಗಿರುವೆ. ಅಗತ್ಯ ಕ್ರಮಗಳನ್ನು ಕೈಗೊಂಡಿರುವೆ. ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಇದರಿಂದ ನರಳುವುದು ತುಂಬಾನೇ ಕಷ್ಟವಿದೆ, ನನ್ನ ನಂಬಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಿ. ಮನೆಯಲ್ಲಿಯೇ ಇರಿ,' ಎಂದು ಸುಜಿತ್ ಬರೆದುಕೊಂಡಿದ್ದಾರೆ.
5 ರೂಪಾಯಿ CT ಸ್ಕ್ಯಾನ್ ನಿಜವೇ?; ನಟ ಸಂಚಾರಿ ವಿಜಯ್ ಸ್ವಂತ ಅನುಭವ!
ಈ ಹಿಂದೆ ಧಾರಾವಾಹಿ ನಟಿ ರಶ್ಮಿಕಾ ಪ್ರಭಾಕರ್ ಹಾಗೂ ಪ್ರಥಮ್ ಪ್ರಸಾದ್‌ಗೂ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಮನಸ್ಸೆಲ್ಲಾ ನೀನೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ನಟಿ ಶ್ವೇತಾ ಚಂಗಪ್ಪ, ಗಾಯಕಿ ರೆಮೋ, ನಯನಾ ನಾಗರಾಜ್, ಶಾಲಿನಿ ಸತ್ಯನಾರಾಯಣ್ ಸೇರಿದಂತೆ ಅನೇಕ ಕಿರುತೆರೆ ಕಲಾವಿದರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮನೆಯಲ್ಲಿ ಅಗತ್ಯ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.