ಮೊದಲು ಗರ್ಭಪಾತ ಮಾಡಿಸಿಕೊಂಡ್ವಿ, ಆಮೇಲೆ ಹುಟ್ಟಿದ ಎರಡೂ ಮಕ್ಕಳು ಸತ್ತೋಯ್ತು: 'ದೃಷ್ಟಿಬೊಟ್ಟುʼ ನಟ ಅಶೋಕ್‌ ಹೆಗಡೆ

Published : Apr 16, 2025, 01:30 PM ISTUpdated : Apr 16, 2025, 04:19 PM IST
ಮೊದಲು ಗರ್ಭಪಾತ ಮಾಡಿಸಿಕೊಂಡ್ವಿ, ಆಮೇಲೆ ಹುಟ್ಟಿದ ಎರಡೂ ಮಕ್ಕಳು ಸತ್ತೋಯ್ತು:  'ದೃಷ್ಟಿಬೊಟ್ಟುʼ ನಟ ಅಶೋಕ್‌ ಹೆಗಡೆ

ಸಾರಾಂಶ

Kannada Actor Ashok Hegde Real Life Story: ಕನ್ನಡ ನಟ ಅಶೋಕ್‌ ಹೆಗಡೆ ಇನ್ನೂ ಯಾಕೆ ಮಗು ಮಾಡಿಕೊಂಡಿಲ್ಲ ಎಂದು ಕೆಲವರು ಅಂದುಕೊಂಡಿರಬಹುದು. ಇದಕ್ಕೆ ಅಶೋಕ್‌ ಹೆಗಡೆ ಉತ್ತರ ನೀಡಿದ್ದಾರೆ.   

ಕನ್ನಡದ ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಅಶೋಕ್‌ ಹೆಗಡೆಯವರಿಗೆ ಯಾಕೆ ಇನ್ನೂ ಮಕ್ಕಳಾಗಿಲ್ಲ ಎಂದು ಕೆಲವರಿಗೆ ಪ್ರಶ್ನೆ ಇರಬಹುದು. ಇದಕ್ಕೆ ಅವರು ʼಅಶ್ವವೇಗ ನ್ಯೂಸ್‌ʼ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.

ಎರಡು ಮಗು ಸತ್ತೋಯ್ತು! 
“ನನಗೆ ಎರಡು ಮಕ್ಕಳಾದವು. ಆ ಪ್ರಗ್ನೆನ್ಸಿ ಟೈಮ್‌ನಲ್ಲಿ ಶುಗರ್ ಬಂತು. ಮೊದಲು ನನ್ನ ಹೆಂಡತಿಗೆ ಶುಗರ್ ಇರಲಿಲ್ಲ. ಎರಡು ಮಕ್ಕಳು ಹಾಗೆ ಸತ್ತು ಹೋಯ್ತು. ಶುಗರ್ ಮಗುಗೆ ಅಟ್ಯಾಕ್ ಆಗಿ, ಎರಡೂ ಮಕ್ಕಳು ಇಂದು ಹರಿಶ್ಚಂದ್ರ ಘಾಟ್‌ನಲ್ಲಿ ಮಲಗಿವೆ. ಒಂದು ಮಗು ಆಯ್ತು, ಅದು ಹಾಗೆ ಹೋಯ್ತು. ಇನ್ನೊಂದು ಮಗು ಆಯ್ತು, ಅದು ಹಾಗೆ ಹೋಯ್ತು. ನಾನು ಈಗ ಹೊರಗಡೆ ಶೂಟಿಂಗ್ ಎಲ್ಲ ಹೋಗ್ಬಿಡ್ತೀನಿ, ಅವಳು ಒಬ್ಬಳೇ ಮನೆಯಲ್ಲಿ ಇರುವಾಗ ಅವಳಿಗೆ ಒಂಥರ ಮಾನಸಿಕ ಆಗುತ್ತದೆ. ಇನ್ನೊಂದು ಮಗು ಆದ್ರೂ ಹೀಗೆ ಆಗ್ಬಿಡುತ್ತಾ ಎನ್ನೋ ಭಯ ಆವರಿಸುತ್ತದೆ, ಮತ್ತೆ ಮಗು ಬೇಡ ಅಂತ ನಿರ್ಧಾರ ಮಾಡಿದ್ವಿ. ಮಕ್ಕಳು ಬೇಡ ನನಗೆ ನೀನು, ನಿನಗೆ ನಾನು ಅಂತ ಫಿಕ್ಸ್‌ ಆಗಿ ಇಂದಿಗೂ ನಾನು ಅವಳಿಗೆ ದದ್ದ ಅಂತ ಕರೀತೀನಿ, ಅವಳು ನನಗೆ ದದ್ದ ಅಂತ ಕರೆಯುತ್ತಾಳೆ. ನನ್ನನ್ನು ಅವಳು ಯಾವುದೇ ನಿರೀಕ್ಷೆ ಇಲ್ಲದೆ ಪ್ರೀತಿಸಿದಳು. ಇಂದು ಕೂಡ ಅವಳು ನನ್ನ ಜೊತೆಗೆ ಇದ್ದಾಳೆ” ಎಂದು ಅಶೋಕ್‌ ಹೆಗಡೆ ಹೇಳಿದ್ದಾರೆ. 

80 ದಿನಗಳಿಂದ ಒಂದೇ ಸೀರೆ; ಪ್ರೇಕ್ಷಕರ ಒತ್ತಾಯಕ್ಕೆ ಕೊನೆಗೂ ಮಣಿದ ʼನಾ ನಿನ್ನ ಬಿಡಲಾರೆʼ ನಟಿ ನೀತಾ ಅಶೋಕ್

ಮೊದಲು ಗರ್ಭಪಾತ ಮಾಡಿಸಿದ್ದೆವು! 
“ಮದುವೆಯಾಗಿದೆ, ಇನ್ನೂ ಮಕ್ಕಳಿಲ್ವಾ ಅಂತ ಕೆಲವರು ಹೇಳೋದುಂಟು, ಹೆಂಗಸರಿಗೆ ಇದೆಲ್ಲ ಸಹಿಸೋದು ತುಂಬ ಕಷ್ಟ. ಗಂಡು ಮಕ್ಕಳು ಏನೋ ಒಂದು ಹೇಳಿ ಹೊರಡುತ್ತಾರೆ, ಹಾಗೆ ಹೆಣ್ಣು ಮಕ್ಕಳಲ್ಲ. ನಾನು ಮದುವೆ ಆದಾಗ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ, ಅಂದು ಊಟಕ್ಕೆ ಕೂಡ ದುಡ್ಡು ಇರಲಿಲ್ಲ. ಅಂದು ದುಡ್ಡಿಲ್ಲ ಅಂತ ಗರ್ಭಪಾತ ಮಾಡಿಸಿದೆವು, ಅದರ ಎಫೆಕ್ಟ್‌ ಏನೋ ಇಂದು ನಮಗೆ ಮಕ್ಕಳಿಲ್ಲ, ಎರಡು ಮಕ್ಕಳು ಸತ್ತುಹೋಯ್ತು” ಎಂದು ಹೇಳಿದ್ದಾರೆ.

ಎರಡು ಬಟ್ಟೆ ಹಾಕಿ ಮಗುವನ್ನು ಕಳಿಸಿಕೊಟ್ಟೆ! 
“ನನ್ನ ಹೆಂಡತಿಗೆ ನಾನು ಹೀರೋ ಆಗಿಲ್ಲ ಎನ್ನುವ ಬೇಸರ ಇಲ್ಲ, ನನ್ನನ್ನು ಅವಳು ಇಂದಿಗೂ ಬಿಟ್ಟು ಹೋಗಿಲ್ಲ. ನನ್ನ ಜೊತೆ ಅವಳು ನಿಂತ್ಕೊಂಡಳು, ಸಾಥ್‌ ಕೊಟ್ಟಳು. ಕುಂಕುಮ ಭಾಗ್ಯ ಧಾರಾವಾಹಿ ಶೂಟಿಂಗ್‌ ಮಾಡುತ್ತಿರುವಾಗ ನನ್ನ ಮಗು ಸತ್ತು ಹೋಯ್ತು. ಲೀಲಾ ಪ್ಯಾಲೆಸ್ ಎದುರುಗಡೆ ಇರೋ ಆಸ್ಪತ್ರೆಯಲ್ಲಿ ಜೀವ ಬಿಟ್ಟಿತು. ನನ್ನ ಮಗು ನರಕಕ್ಕೆ ಹೋಗಿರಲ್ಲ, ಸ್ವರ್ಗಕ್ಕೆ ಹೋಗಿರತ್ತೆ ಎನ್ನುವ ನಂಬಿಕೆ ಇದೆ, ಆ ಮಗು ಯಾವುದೇ ತಪ್ಪು ಮಾಡಿಲ್ಲ. ಸ್ವರ್ಗದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು, ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳೆಲ್ಲ ಬಂದಿರುತ್ತವೆ. ನಾನು ಆ ಮಗುನ ಬೆತ್ತಲೆ ಮಾಡಿ ಕಳಿಸಬಾರದು ಅಂತ ಎರಡು ಬಟ್ಟೆ ಹಾಕಿದ್ದೆ. ಉಪನಯನ ಆದಮೇಲೆ ನಮ್ಮಲ್ಲಿ ಸುಡ್ತಾರೆ, ಅದಕ್ಕೂ ಮುಂಚೆ ಹೂಳುತ್ತಾರೆ. ಹರಿಶ್ಚಂದ್ರ ಘಾಟ್‌ನಲ್ಲಿ ಹ್ಯಾಪಿ ಬರ್ತ್‌ಡೇ ಎನ್ನೋ ಬಟ್ಟೆ ಸಿಗತ್ತೆ. ಎರಡು ಬಟ್ಟೆ ತಗೊಂಡು ಒಂದು ಕೆಳಗಡೆ ಹಾಕಿ, ಇನ್ನೊಂದು ಮಗುವಿನ ಮೇಲೆ ಹಾಕಿದೆ. ಅಶೋಕ್‌ ಹೆಗಡೆ ಆರ್ಟಿಸ್ಟ್ ಮಗ ಅಂತ ಅಲ್ಲೂ ಕೂಡ ಆರ್ಟಿಸ್ಟ್‌ಗಳ ಮರ್ಯಾದೆ ತೆಗೆಯಬಾರದು ಅಂತ ಹಾಗೆ ಮಾಡಿದ್ದೆ. ನನ್ನ ಮಗ ಒಂದೇ ಬಟ್ಟೆಯಲ್ಲಿ ಹೋದರೆ, ತೊಳೆದು ಒಣಗಿಸುವಾಗ ಇನ್ನೊಂದು ಬಟ್ಟೆ ಬೇಕು ಅಂತ ಎರಡು ಬಟ್ಟೆ ಹಾಕಿದೆ” ಎಂದು ಅಶೋಕ್‌ ಹೆಗಡೆ ಹೇಳಿದ್ದಾರೆ.  

ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾದ ಕನ್ನಡ ಕಿರುತೆರೆ ನಟ -ನಟಿಯರು

ಹೋರಾಟ ನಡೆಯುತ್ತಲೇ ಇದೆ! 
“ನನ್ನ ಮಗು ಸತ್ತಿರಬಹುದು, ಜೀವ ಇಲ್ಲದೆ ಇರಬಹುದು. ಆದರೆ ನನ್ನ ಹಾಗೂ ನನ್ನ ಹೆಂಡತಿಯ ಮನಸ್ಸಿನಲ್ಲಿ ಆ ಮಗುಗೆ ಜೀವ ಇದೆ. ಇಂದಿಗೂ ನಾನು, ನನ್ನ ಹೆಂಡತಿ ಕಷ್ಟಪಡ್ತಿದ್ದೀವಿ, ಹೋರಾಟ ಮಾಡ್ತಿದ್ದೀವಿ. ಒಳ್ಳೆಯ ಬದುಕಿಗೋಸ್ಕರ ಅಂದಿನಿಂದ ಇವತ್ತಿನವರೆಗೂ ಹೋರಾಡುತ್ತಿದ್ದೇವೆ, ಹೌದು, ನಮಗೆ ವಯಸ್ಸು ಆಗ್ತಿದೆ. ಆದರೆ ಒಂದಲ್ಲ ಒಂದು ದಿನ ಆದರೂ ನನ್ನ ಹೆಂಡತಿ ನಾನು ತುಂಬಾ ಖುಷಿಯಾಗಿರಬೇಕು ಜೀವನ ಮಾಡುತ್ತಿದ್ದೇವೆ, ನನ್ನ ಈ ಟಿವಿ ಇಂಡಸ್ಟ್ರಿ ಆಗಿರಬಹುದು ಅಥವಾ ನನ್ನ ಸಿನಿಮಾ ಇಂಡಸ್ಟ್ರಿ ಒಂದಲ್ಲ ಒಂದು ದಿನ ಈ ಒಳ್ಳೆಯ ದಿನ ಕೊಡುತ್ತೆ ಅನ್ನೋ ಒಂದು ನಂಬಿಕೆ, ವಿಶ್ವಾಸದ ಮೇಲೆ ಇವತ್ತಿನವರೆಗೂ ಈ ಇಂಡಸ್ಟ್ರಿಯಲ್ಲಿ ಬದುಕಿದ್ದೀನಿ, ಬದುಕ್ತಿದ್ದೀನಿ” ಎಂದು ಅಶೋಕ್‌ ಹೆಗಡೆ ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?