80 ದಿನಗಳಿಂದ ಒಂದೇ ಸೀರೆ; ಪ್ರೇಕ್ಷಕರ ಒತ್ತಾಯಕ್ಕೆ ಕೊನೆಗೂ ಮಣಿದ ʼನಾ ನಿನ್ನ ಬಿಡಲಾರೆʼ ನಟಿ ನೀತಾ ಅಶೋಕ್

Published : Apr 16, 2025, 11:19 AM ISTUpdated : Apr 16, 2025, 11:23 AM IST
80 ದಿನಗಳಿಂದ ಒಂದೇ ಸೀರೆ; ಪ್ರೇಕ್ಷಕರ ಒತ್ತಾಯಕ್ಕೆ ಕೊನೆಗೂ ಮಣಿದ ʼನಾ ನಿನ್ನ ಬಿಡಲಾರೆʼ ನಟಿ ನೀತಾ ಅಶೋಕ್

ಸಾರಾಂಶ

Naa Ninna Bidalaare Kannada serial: 'ನಾ ನಿನ್ನ ಬಿಡಲಾರೆʼ ಧಾರಾವಾಹಿಯಲ್ಲಿ ನಟಿ ನೀತಾ ಅಶೋಕ್‌ ಅವರು ಕಳೆದ ಎಂಭತ್ತು ದಿನಗಳಿಂದ ಒಂದೇ ಸೀರೆಯಲ್ಲಿದ್ದರು. ಈಗ ಅವರು ಈ ಸೀರೆಗೆ ಗುಡ್‌ಬೈ ಹೇಳಿದ್ದಾರೆ. 

ಧಾರಾವಾಹಿ, ಸಿನಿಮಾದಲ್ಲಿ ಒಂದೇ ದೃಶ್ಯವನ್ನು ಬೆಳಗ್ಗೆಯಿಂದ ಸಂಜೆವರೆಗೂ ಶೂಟ್‌ ಮಾಡಬಹುದು.  ಇನ್ನು ಕೆಲವೊಮ್ಮೆ ಕಂಟಿನ್ಯೂಯಿಟಿ ಇರಬೇಕು ಅಂತ ಎಷ್ಟೋ ಕಲಾವಿದರು ವಾರಗಟ್ಟಲೇ ಒಂದೇ ಡ್ರೆಸ್‌ ಹಾಕೋಳುದುಂಟು. ಬಾಲಿವುಡ್‌  ನಟಿ ಶಿಲ್ಪಾ ಶೆಟ್ಟಿ ಈ ಹಿಂದೆ ಸಿನಿಮಾವೊಂದಕ್ಕಾಗಿ, ಕಂಟಿನ್ಯೂಯಿಟಿ ಇರಬೇಕು ಅಂತ ಯಾವ ಕಲರ್‌ ನೇಲ್‌ ಪಾಲಿಶ್‌ ಹಚ್ಕೊಂಡಿದ್ದೆ ಎನ್ನೋದನ್ನು ಕೂಡ ಬರೆದಿಟ್ಟುಕೊಂಡಿದ್ದರಂತೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ʼನಾ ನಿನ್ನ ಬಿಡಲಾರೆʼ ಸಿನಿಮಾ ನಟಿ ನೀತಾ ಅಶೋಕ್‌ ಅವರು ಎಂಭತ್ತು ದಿನಗಳಿಂದ ಒಂದೇ ಸೀರೆ ಉಟ್ಟಿದ್ದು, ಈಗ ಸೀರೆ ಬದಲಿಸಿದ್ದಾರೆ.

ಆ ಸೀರೆಗೆ ಗುಡ್‌ಬೈ ಹೇಳಿದ ನೀತಾ! 
ನೀತಾ ಅಶೋಕ್‌ ಅವರು ಧಾರಾವಾಹಿ ಶುರುವಾದಾನಿಂದ ಒಂದೇ ಸೀರೆಯಲ್ಲಿದ್ದರು. ಇವರು ದೆವ್ವದ ಪಾತ್ರ ಮಾಡ್ತಿರೋದಿಕ್ಕೆ ಒಂದೇ ಸೀರೆಯನ್ನು ಉಡಬೇಕಾದ ಅಗತ್ಯ ಕೂಡ ಇತ್ತು. ದೆವ್ವ ನಿತ್ಯವೂ ಸೀರೆ ಬದಲಾಯಿಸತ್ತಾ? ಹೀಗಾಗಿ ನೀತಾ ಒಂದೇ ಸೀರೆಯಲ್ಲಿದ್ದರು. ಅಂದಹಾಗೆ ಈಗ ಆ ಸೀರೆಗೆ ಗುಡ್‌ಬೈ ಹೇಳಿದ್ದಾರೆ.

ಭೂತಗಳು ಗಾಳಿಯಲ್ಲಿ ಹೇಗೆ ಚಲಿಸತ್ತೆ? 'ನಾ ನಿನ್ನ ಬಿಡಲಾರೆ' ಸೀರಿಯಲ್​ ಶೂಟಿಂಗ್​ ವಿಡಿಯೋ ನೋಡಿ!

ಜನರ ಮೆಚ್ಚುಗೆ ಪಡೆದ ಸೀರೆ!
ನೀತಾ ಅದೊಂದೇ ಸೀರೆಯಲ್ಲಿ ಇದ್ದಿದ್ದಕ್ಕೆ ಸಾಕಷ್ಟು ಜನರು ಯಾವಾಗ ಸೀರೆ ಚೇಂಜ್‌ ಮಾಡ್ತೀರಾ ಅಂತ ಪ್ರಶ್ನೆ ಮಾಡುತ್ತಲಿದ್ದರಂತೆ. ಇದಕ್ಕೆ ಉತ್ತರ ಎನ್ನುವಂತೆ ನೀತಾ ಅವರು ರೀಲ್ಸ್‌ ಮಾಡಿದ್ದು, ಹೊಸ ಸೀರೆ ಹಾಕಿಕೊಂಡಿರೋದಾಗಿ ಹೇಳಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ಸ್‌ಗಳು ಬಂದಿವೆ. “ನಮಗೂ ಕೂಡ ಯಾವಾಗ ಸೀರೆ ಬದಲಾಯಿಸ್ತೀರಾ ಎನ್ನೋ ಪ್ರಶ್ನೆ ಇತ್ತು. ಸೀರೆ ಸಿಂಪಲ್‌ ಆಗಿ ಚೆನ್ನಾಗಿತ್ತು, ಬ್ಲೌಸ್‌ ಸಿಂಪಲ್‌ ಇದ್ರೂ ಕೂಡ ಸೀರೆ ಗ್ರ್ಯಾಂಡ್‌ ಇತ್ತು, ಪರ್ಫೆಕ್ಟ್‌ ಸೀರೆ” ಎಂಬೆಲ್ಲ ಮಾತುಗಳು ಬಂದಿದ್ದವು. ಅಂದಹಾಗೆ ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಕೂಡ ಈಗ ದೆವ್ವ ಆಗಿರೋದಿಕ್ಕೆ ಇಲ್ಲಿಯೂ ಅವಳು ಬಿಳಿ ಫ್ರಾಕ್‌ನಲ್ಲೇ ಕಾಣಿಸಿಕೊಳ್ತಾಳೆ. 

ಶರತ್ ತಾಯಿ ಅಲ್ಲವಾ ಮಾಳವಿಕಾ: ಯಾರು ಈ ದಾಕ್ಷಾಯಿಣಿ? ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್

ʼನಾ ನಿನ್ನ ಬಿಡಲಾರೆʼ ಧಾರಾವಾಹಿ ಕಥೆ ಏನು?
ಶರತ್, ಅಂಬಿಕಾಗೆ ಹಿತಾ ಎಂಬ ಮಗಳು ಇರುತ್ತಾಳೆ. ಇಬ್ಬರಿಗೂ ಮಗಳೆಂದರೆ ತುಂಬ ಇಷ್ಟ. ಶರತ್‌ನನ್ನು ಪಡೆದುಕೊಳ್ಳಬೇಕು ಎಂದು ಮಾಯಾ, ಅಂಬಿಕಾಳನ್ನು ಕೊಲೆ ಮಾಡ್ತಾಳೆ. ತಾಯಿ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ಅಪ್ಪನ ಜೊತೆ ಮಾತಾಡೋದನ್ನು ಬಿಡುತ್ತಾಳೆ. ಇತ್ತ ಮಾಯಾ ಹಿತಾಳನ್ನೂ ಕೊಲೆ ಮಾಡಲು ಪ್ಲ್ಯಾನ್‌ ಮಾಡುತ್ತಾಳೆ. ದೆವ್ವ ಆಗಿರೋ ಅಂಬಿಕಾ ಸದಾ, ಹಿತಾಳ ರಕ್ಷಣೆಗೆ ಮುಂದಾಗ್ತಾಳೆ. ಶರತ್​ ಕಂಪೆನಿಯಲ್ಲಿ ಕೆಲಸ ಮಾಡುವ ದುರ್ಗಾ ಒಳ್ಳೆಯ ಹುಡುಗಿ. ಶರತ್‌ಗೂ, ದುರ್ಗಾಗೂ ಮದುವೆ ಮಾಡಿಸಬೇಕು ಅಂತ ಅವಳು ಪ್ಲ್ಯಾನ್‌ ಮಾಡುತ್ತಾಳೆ. ಅಂಬಿಕಾ ಬರೀ ದುರ್ಗಾಗೆ ಮಾತ್ರ ಕಾಣಿಸಿಕೊಳ್ತಾಳೆ. ದುರ್ಗಾ ಕಂಡ್ರೆ ಶರತ್‌ಗೆ ಆಗೋದೇ ಇಲ್ಲ. ದುರ್ಗಾಳಿಗೆ ಬಂದ ಅಪಾಯವನ್ನು ಕೂಡ ಅಂಬಿಕಾ ತಡೆಯುವ ಪ್ರಯತ್ನ ಮಾಡುತ್ತಿದ್ದಾಳೆ. ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ ಶುರುವಾಗಿದೆ. ದುರ್ಗಾ ಹಾಗೂ ಶರತ್‌ ನಡುವೆ ಪ್ರೀತಿ ಹುಟ್ಟತ್ತಾ? ಇವರಿಬ್ಬರು ಮದುವೆ ಆಗ್ತಾರಾ ಅಂತ ಕಾದು ನೋಡಬೇಕಿದೆ. ಇದು ನಿಜಕ್ಕೂ ನಡೆಯತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ. ಟಿಆರ್‌ಪಿಯಲ್ಲಿ ಈ ಧಾರಾವಾಹಿ ಒಳ್ಳೆಯ ವೀಕ್ಷಣೆ ಕಂಡಿದ್ದು, ಟಾಪ್‌ 1 ಪಟ್ಟಕ್ಕೇರಿತ್ತು. 

ಪಾತ್ರಧಾರಿಗಳು
ಶರತ್​ ಪಾತ್ರದಲ್ಲಿ ಶರತ್ ಪದ್ಮನಾಭ್, ಅಂಬಿಕಾ ಪಾತ್ರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಖ್ಯಾತಿಯ ನಟಿ ನೀತಾ ಅಶೋಕ್, ದುರ್ಗಾ ಪಾತ್ರದಲ್ಲಿ ರಿಷಿಕಾ, ಮಾಯಾ ಪಾತ್ರದಲ್ಲಿ ರುಹಾನಿ ಶೆಟ್ಟಿ ಅವರು ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?