ಎಷ್ಟು ಸಲ ಹೇಳಿದರೂ ಮತ್ತದೇ ತಪ್ಪು ಮಾಡ್ತಾರೆ, ಬೇಸರವಾಗುತ್ತಿದೆ: ಅನಿರುದ್ಧ

By Suvarna NewsFirst Published Oct 19, 2021, 12:05 PM IST
Highlights

ಮಾಡಿದ್ದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದೀರಾ? ಮನೆ ಸ್ವಚ್ಛತೆ ಕಾಪಾಡಿಕೊಳ್ಳುವ ಹಾಗೆ ನಮ್ಮ ಬಡಾವಣಿಯನ್ನೂ ಸ್ವಚ್ಛವಾಗಿ ನೋಡಿಕೊಳ್ಳಬೇಕು ಎಂದು ನಟ ಅನಿರುದ್ಧ್ ಹೇಳಿದ್ದಾರೆ. 

ಕನ್ನಡ ಚಿತ್ರರಂಗದ ಯುವ ಕೇಸರಿ, ಯಂಗ್ ಲಯನ್ ಅನಿರುದ್ಧ ಜಟ್ಕರ್ (Aniruddha Jatkar) ಒಂದೆರಡು ವರ್ಷಗಳಿಂದ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. 2018ರಲ್ಲಿಅಭಯಹಸ್ತ (Abhayahasta) ಚಿತ್ರದಲ್ಲಿ ನಟಿಸಿದ ನಂತರ ಆನ್‌ಸ್ಕ್ರೀನ್‌ನಿಂದ ದೊಡ್ಡ ಬ್ರೇಕ್‌ ತೆಗೆದುಕೊಂಡು, ಜೀ ಕನ್ನಡ (Zee kannada) ವಾಹಿನಿಯ ಜೊತೆ ಜೊತೆಯಲಿ (Jothe Jotheyalli) ಧಾರಾವಾಹಿ ಮೂಲಕ ಸಾಲ್ಟ್ ಆಂಡ್ ಪೆಪ್ಪರ್ ಲುಕ್‌ (Salt and Pepper Look) ಆರ್ಯವರ್ಧನ್ ಆಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತೆರೆ ಮೇಲೆ ಮಾತ್ರ ಸಮಾಜ ಸೇವೆ ಮಾಡುವುದಲ್ಲ, ನಿಜ ಜೀವನಲ್ಲೂ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯೇ ಅವರ ಸೋಷಿಯಲ್ ಮೀಡಿಯಾ ಖಾತೆ. 

ಬಿಬಿಎಂಪಿ ಅನಧಿಕೃತ ಪುತ್ಥಳಿಗಳ ತೆರವು: ನಟ ಅನಿರುದ್ಧ ಪ್ರತಿಕ್ರಿಯೆ

ಬೆಂಗಳೂರು ಮತ್ತು ಸುತ್ತ ಮುತ್ತಲಿನ ಕೆಲವೊಂದು ಕಸದ ಸ್ಥಳಗಳನ್ನು ಶುಚಿ ಮಾಡಿಸುತ್ತಿದ್ದಾರೆ. ಸ್ಥಳದ ಬಗ್ಗೆ, ಬಿಬಿಎಂಪಿ (BBMP) ಸಹಾಯ ಪಡೆದು, ಶುಚಿಗೊಳಿಸಿದ  ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತಾರೆ. ಎಲ್ಲೆಲ್ಲಿ ಶುಚಿ ಮಾಡಿಕೊಂಡು ಬಂದಿದ್ದಾರೊ, ಅದೇ ಜಾಗದಲ್ಲಿ ಸಾರ್ವಜನಿಕರು ಮತ್ತೆ ಕಸ (Garbage) ಹಾಕುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಗಮನಿಸಿದ ಅನಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. 

'ಕಳೆದ ವರ್ಷ ಸ್ವಚ್ಛತೆಗಾಗಿ ನಾನು ಸಹಭಾಗಿ ಎನ್ನುವ ಒಂದು ಅಭಿಯಾನವನ್ನು ಪ್ರಾರಂಭ ಮಾಡಿದ್ದೀನಿ. ನಾನು, ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಬೆಂಗಳೂರಿನ (Bengaluru) ಹಾಗೂ ಬೇರೆ ಬೇರೆ ಊರಿನ ಕೆಲವೊಂದು ಅಶುಚಿಯಾಗಿರುವ ಪ್ರದೇಶಗಳ ಛಾಯ ಚಿತ್ರಣ (Photography) ಮತ್ತು ವಿಡಿಯೋಗಳನ್ನ ಹಾಕುತ್ತಿರುವೆ. ಅಲ್ಲಿನ ಸ್ಥಳೀಯ ಅಧಿಕಾರಿಗಳು (Local Officers) ಮತ್ತೆ ನಮ್ಮ ಬಿಬಿಎಂಪಿ ಅಧಿಕಾರಿಗಳು ತಕ್ಷಣ ಇಂಥ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಗಮನಿಸುತ್ತಿರುವ ನಾವು ಸ್ವಚ್ಛಗೊಳಿಸಿರುವ ಜಾಗಗಳಿಯೇ ಜನರು ಮತ್ತೆ ಮತ್ತೆ ಕಸ ಹಾಕುತ್ತಿದ್ದಾರೆ,' ಎಂದು ಅನಿರುದ್ಧ ಹೇಳಿದ್ದಾರೆ. 

ಮಾಸ್ಟರ್ ಸಾಂಗ್‌ಗೆ ಮಗನ 'ಜೊತೆಜೊತೆ'ಯಲಿ ಹೆಜ್ಜೆ ಹಾಕಿದ ಅನಿರುದ್ಧ್

'ಉದಾಹರಣೆ ಹೇಳುವುದಾದರೆ ನಮ್ಮ ಬೆಂಗಳೂರಿನ ಇನ್ನರ್‌ರಿಂಗ್ ರೋಡ್‌ನಲ್ಲಿ (Inner Rinf Road) ಇರುವ ಸಿಂಧೂರ ಕಲ್ಯಾಣ ಮಂಟಪ. ಏನಿದೆ ಅಲ್ಲಿ? ಒಂದು ಜಾಗವನ್ನು ನಾವು ಆಗಾಗ ಸ್ವಚ್ಛಗೊಳಿಸಿ, ಪೇಂಟಿಂಗ್ ಮಾಡಿದ್ದರೂ, ಮತ್ತೆ ಮತ್ತೆ ಜನರ ಅಲ್ಲಿ ಕಸ ಹಾಕುತ್ತಿದ್ದಾರೆ. ಕನಕಪುರ ರಸ್ತೆ (Kanakapura Road) ಕೂಡ ಹಾಗೆಯೇ ಅಲ್ಲಿ ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಜನರು ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಸಾರಕ್ಕಿ ವೃತ್ತದಿಂದ (Sarakki circle)  ಕಗ್ಗಲೀಪುರದವರೆಗೂ (Kaggalipura) ತುಂಬಾ ಅಸ್ವಚ್ಛವಾಗಿದೆ. ಇದೆಲ್ಲಾ ಕೇಳಿದಾಗ ನನಗೆ ತುಂಬಾ ತುಂಬಾ ಬೇಜಾರು ಆಗುತ್ತದೆ. ನಾವೆಲ್ಲರೂ ನಮ್ಮ ದೇಶವನ್ನು, ನಮ್ಮ ಊರನ್ನು ನಮ್ಮ ಬಡಾವಣೆಯನ್ನು ನಾವು ಪ್ರೀತಿಸಬೇಕು. ಜವಾವ್ದಾರಿಯಿಂದ ನೋಡ್ಕೋಬೇಕು. ನಮ್ಮ ಕರ್ತವ್ಯ ಪಾಲನೆ ಮಾಡಬೇಕು. ನಮ್ಮ ದೇಶ ಬೇರೆ ದೇಶಗಳಿಗೆ ಮಾದರಿ ಆಗಬೇಕು. ದಯವಿಟ್ಟು ಕಸದ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೀನಿ,' ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೋ, ಹಾಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟಕೊಂಡರೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಷ್ಟವೇ ಅಲ್ಲ. ಅದನ್ನೂ ಭಾರತದ ಪ್ರತಿಯೊಬ್ಬ ನಾಗರಿಕನೂ ಅರಿತು ಕೊಂಡರೆ, ದೇಶವನ್ನು ಕಸ ಮುಕ್ತಗೊಳಿಸುವುದು ಕಷ್ಟದ ವಿಷಯವೇ ಅಲ್ಲ.

 

click me!