
ಕನ್ನಡದ ನಂ 1 ಸೀರಿಯಲ್ ಕುತೂಹಲ ಘಟ್ಟ ತಲುಪಿದೆ. ಅನು ಇನ್ನೇನು ಮದುವೆಯಾಗ್ತಾಳೆ, ಆರ್ಯವರ್ಧನ್ ಕೈ ತಪ್ಪಿ ಹೋಗ್ತಾ ಇದಾರೆ ಅನ್ನುವಾಗಲೇ ಮುಖ್ಯವಾದ ತಿರುವು ಪಡೆದುಕೊಂಡಿದೆ. ಅನು ಮದುವೆಯನ್ನು ನಿಲ್ಲಿಸಲು ಆರ್ಯವರ್ಧನ್ ನಿಧಾನಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಇಲ್ಲಿ ಮುಂದೇನಾಗುತ್ತದೆ ಎನ್ನುವ ಕುತೂಹಲವನ್ನು ಹೆಚ್ಚಿಸಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ 'ಜೊತೆ ಜೊತೆಯಲಿ' ಯಶಸ್ವಿಯಾಗಿದೆ.
ಆರ್ಯವರ್ಧನ್ ಲುಕ್‌ಗೆ ಹುಡ್ಗೀರು ಈ ನಮೂನಿ ಬೀಳೋದ್ಯಾಕೆ? ಏನಿಟ್ಟವ್ರೆ ಗಡ್ಡದಲ್ಲಿ?
ಆರ್ಯವರ್ಧನ್ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಸಿಕ್ಕಾಪಟ್ಟೆ ಸಿಂಪಲ್. ಅಭಿಮಾನಿಗಳ ಜೊತೆ ಸ್ವಲ್ಪವೂ ಹಮ್ಮು ಬಿಮ್ಮು ಇಲ್ಲದೇ ಬೆರೆಯುತ್ತಾರೆ. ಅದೇ ರೀತಿ ರಾಜಾಜಿನಗರದಲ್ಲಿ ಶೂಟಿಂಗ್ ಮುಗಿಸಿ ಅಲ್ಲಿಂದ ಬಸವನಗುಡಿಗೆ ಇಡೀ ತಂಡ ಮೆಟ್ರೋದಲ್ಲಿ ಪ್ರಯಾಣಸಿತು.
ಮೆಟ್ರೋದಲ್ಲಿ ಆರ್ಯವರ್ಧನ್ ಹಾಗೂ ಅವರ ತಂಡವನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ಅನಿರುದ್ಧ್ ನೋಡಿ ಅಲ್ಲಿದ್ದವರು ಸೆಲ್ಪಿ ತೆಗೆಸಿಕೊಳ್ಳಲು ಮುಗಿ ಬಿದ್ದರು. ಜನರ ಪ್ರೀತಿ, ವಿಶ್ವಾಸ ಕಂಡು ಅನಿರುದ್ಧ್ ಮೂಕ ವಿಸ್ಮಿತರಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.