ನಟಿ, ಬರಹಗಾರ್ತಿ ಚೈತ್ರಾ ಕೊಟ್ಟೂರು ನಾಲ್ಕನೇ ವಾರ ಮನೆಯಿಂದ ಆಚೆ ಬಂದಿದ್ದಾರೆ. ಮದುವೆ ಬಗ್ಗೆ, ಶೈನ್ ಶೆಟ್ಟಿ ಜೊತೆಗಿನ ಫ್ಲರ್ಟ್, ಸೊಪ್ಪು ಮಾರುವವನ ಜೊತೆ ಮದುವೆ. ಎಲ್ಲದರ ಬಗ್ಗೆ ಮಾತನಾಡಿದ್ದಾರೆ. ಇದು ಬುದ್ಧಿವಂತರಿಗೆ ಮಾತ್ರ!
ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರಕ್ಕೆ ಮನೆಯಿಂದ ಹೊರ ಬಿದ್ದಿದ್ದಾರೆ. ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಿಂತ ಹೆಚ್ಚಾಗಿ ಗಾಸಿಪ್, ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಾಗುತ್ತಿದ್ದರು. ಒಂದು ಆ್ಯಪಲ್ ವಿಚಾರಕ್ಕೆ ಚಂದನ್ ಜೊತೆ ಕಿತ್ತಾಡಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
ಮನೆಯಿಂದ ಕೊನೆಗೂ ಹೊರಬಂದ ಚೈತ್ರಾ ಕೊಟ್ಟೂರು ಶಾಕ್ ಕೊಟ್ಟೆ ಬಂದ್ರು!
ಶೈನ್ ಶೆಟ್ಟಿ ಜೊತೆ ಫ್ಲರ್ಟ್ ಮಾಡುತ್ತಿದ್ದರು. ಇವರಿಬ್ಬರನ್ನು ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ಅಂತಲೇ ಬಿಂಬಿಸಲಾಗಿತ್ತು. ಮನೆಯಿಂದ ಆಚೆ ಬಂದ ಬಳಿಕ ಈ ಬಗ್ಗೆ ಮಾತನಾಡಿದ್ದಾರೆ. 'ಮನೆಯಲ್ಲಿ ಟಾಸ್ಕ್ ಇಲ್ಲದೇ ಇದ್ದಾಗ ಬೋರ್ ಆಗ್ತಾ ಇತ್ತು. ಏನಾದ್ರೂ ಎಂಟರ್‌ಟೇನ್‌ಮೆಂಟ್ ಬೇಕು ಅನಿಸ್ತಾ ಇತ್ತು. ಅಲ್ಲಿ ನಮ್ಮನ್ನು ನಾವೇ ಎಂಟರ್‌ಟೇನ್ ಮಾಡ್ಕೋಬೇಕಿತ್ತು. ನಾವೆಲ್ಲಾ ಒಟ್ಟಿಗೆ ಕೂತಿದ್ದಾಗ ಶೈನ್ ಶೆಟ್ಟಿಗೆ ಕಾಲೆಳೆಯಬೇಕು ಅನಿಸ್ತು. ಏನೂಂದ್ರೆ, ಕಾಫಿ ತರ್ಲಾ? ಅಂತ ಕಿಚಾಯಿಸಿದೆ. ಅಲ್ಲಿಂದ ನಮ್ಮಿಬ್ಬರ ಬಗ್ಗೆ ಗಾಸಿಪ್ ಶುರುವಾಯ್ತು. ಅದು ಬರೀ ಮನರಂಜನೆಗಷ್ಟೇ. ಬೇರೇನಿಲ್ಲ ಅಂತ ಸಮಜಾಯಿಷಿ ನೀಡಿದ್ದಾರೆ. \
BB7 : ಕಿಚ್ಚನ ಮೆಚ್ಚುಗೆ ಚಪ್ಪಾಳೆ ಗಿಟ್ಟಿಸಿಕೊಂಡ ನಾಗಿಣಿ!
ಇನ್ನು ಬಿಗ್ ಬಾಸ್ ಮನೆಯಲ್ಲಿ ನನಗೆ ಈಗಾಗಲೇ ಮದುವೆಯಾಗಿದೆ. ಸೊಪ್ಪು ಮಾರುವವನನ್ನು ಮದುವೆಯಾಗಿದ್ದೇನೆ ಎಂದು ಶಾಕ್ ನೀಡಿದ್ದರು. ಇದು ನಿಜಾನ ಎಂದು ಕೇಳಿದಾಗ, 'ನನಗೆ ಮದುವೆಯಾಗಿಲ್ಲ. ಸುಮ್ಮನೆ ತಮಾಷೆಗೆಂದು ಹೇಳಿದೆ. ಮನೆಯಲ್ಲಿ ಬೋರ್ ಅನಿಸಲು ಶುರುವಾದಾಗ ಎಲ್ಲರನ್ನು ಚಿಯರ್ ಅಪ್ ಮಾಡಲು ಈ ರೀತಿ ಹೇಳಿದೆ' ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ವರ್ತನೆ ಕೆಲವವೊಂದು ಕಡೆ ಅಸಹಜ ಎನಿಸುತ್ತಿತ್ತು. ಅತಿರೇಕದ ಪರಮಾವಧಿ ಎನಿಸುತ್ತಿತ್ತು. ತಮಾಷೆ ಅತಿಯಾದರೆ ಕಿರಿಕಿರಿ ಎನಿಸುತ್ತದೆ ಎನ್ನುವುದಕ್ಕೆ ಚೈತ್ರಾ ಸಾಕ್ಷಿ. ಈ ಕಾರಣದಿಂದಲೇ ಮನೆಯವರಿಂದ ಹೆಚ್ಚು ನಾಮಿನೇಟ್ ಆಗುತ್ತಿದ್ದರು ಎನಿಸುತ್ತದೆ. ಸ್ವಲ್ಪ ಸಹಜವಾಗಿದ್ದರೆ ಇನ್ನಷ್ಟು ಸಮಯ ಮನೆಯೊಳಗೆ ಇರುತ್ತಿದ್ದರೋ ಏನೋ!