
ಭೂಮಿಕಾ ತಂಗಿ ಅಪೇಕ್ಷಾ ಮದ್ವೆ ಮುರಿದು ಬಿದ್ದಿದೆ. ಕೆಲಸದ ಹುಡುಗಿ ಮಲ್ಲಿಗೆ ಗರ್ಭಿಣಿ ಮಾಡಿ ಅಪೇಕ್ಷಾ ಜೊತೆ ರಾಜಾರೋಷವಾಗಿ ಮದುವೆಗೆ ರೆಡಿಯಾಗಿದ್ದ ಜಯದೇವನ ಮುಖವಾಡವನ್ನು ಭೂಮಿಕಾ ಬಯಲು ಮಾಡಿದ್ದಾಳೆ. ಇನ್ನೇನು ಜಯದೇವ ಅರ್ಪಿತಾಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಭೂಮಿಕಾ, ಮಲ್ಲಿಗೆ ಮದುವಣಗಿತ್ತಿಯಂತೆ ಸಿಂಗಾರ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾಳೆ. ಜಯದೇವ ಕೆಲಸದಾಕೆಯ ಜೊತೆ ಸಂಬಂಧ ಇಟ್ಟುಕೊಂಡಿರುವ ವಿಷ್ಯ ಗೊತ್ತಿದ್ದರೂ, ಆಕೆಯನ್ನು ನಾಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಜಯದೇವನ ಅಮ್ಮನಿಗೆ ಮರ್ಮಾಘಾತವಾಗಿದೆ. ಇಷ್ಟವಿಲ್ಲದ ಮದ್ವೆಗೆ ರೆಡಿಯಾಗಿದ್ದ ಅಪೇಕ್ಷಾ ಮಾತ್ರ ಸಂಪೂರ್ಣ ಖುಷಿಯಾಗಿದ್ದಾರೆ. ಜಯದೇವನಿಂದ ಕೆಲಸದಾಕೆ ಗರ್ಭಿಣಿಯಾಗಿರುವ ವಿಷಯ ಭೂಮಿಕಾಗೆ ತಿಳಿದರೂ ಏನೂ ಮಾಡದ ಅಸಹಾಯಕಳಾಗಿದ್ದಳು. ಆದರೆ ಕೊನೆಗೂ ಮಲ್ಲಿಯನ್ನು ಹುಡುಕಿ ಬಂದು ಜಯದೇವನ ಜೊತೆ ಮದ್ವೆ ಮಾಡಿಸಿದ್ದಾಳೆ.
ಜಯದೇವನ ವಿಷಯವನ್ನು ಭೂಮಿಕಾ ಮೊದಲೇ ಗೌತಮ್ಗೆ ತಿಳಿಸಿದ್ದಳು. ಆದರೆ ಮಲ್ಲಿ ಸಿಗದೇ ಇರುವ ಕಾರಣ, ಆತನೂ ನಿಸ್ಸಾಯಕನಾಗಿದ್ದ. ಜಯದೇವನ ತಾಯಿ ಅಂದರೆ ತನ್ನ ಚಿಕ್ಕಮ್ಮನ ವಿರುದ್ಧದ ಯಾವತ್ತೂ ಹೋಗದಿದ್ದ ಗೌತಮ್, ಇದೀಗ ಪತ್ನಿ ಭೂಮಿಕಾ ಪರ ನಿಂತು ಮಲ್ಲಿಗೆ ನ್ಯಾಯ ಒದಗಿಸಿದ್ದಾನೆ. ಇದು ಚಿಕ್ಕಮ್ಮನ ಕೋಪಕ್ಕೆ ಕಾರಣವಾಗಿದೆ. ಸತ್ಯವನ್ನು ಬಯಲಿಗೆಳೆದ ಭೂಮಿಕಾ ವಿರುದ್ಧ ಅತ್ತೆ ಶಕುಂತಲಾ ದೇವಿ ಕೆಂಡಾಮಂಡಲವಾಗಿದ್ದಾಳೆ. ಮೊದಲಿನಿಂದಲೂ ಭೂಮಿಕಾಳ ಮೇಲೆ ಕೋಪ ಇದ್ದರೂ, ಸಮಾಧಾನ ಮಾಡಿಕೊಳ್ಳುತ್ತಿದ್ದ ಶಕುಂತಲಾ ದೇವಿಯ ವರಸೆ ಈಗ ಬದಲಾಗಿದೆ. ಆಕೆಯನ್ನು ಹೇಗಾದರೂ ಮಾಡಿ ತುಳಿಯುವ ಪ್ಲ್ಯಾನ್ ಹಾಕುತ್ತಿದ್ದಾಳೆ.
ಆರ್ಟಿಕಲ್ 370 ಭರ್ಜರಿ ಕಲೆಕ್ಷನ್: ಸತ್ಯ ಅರಗಿಸಿಕೊಳ್ಳದ ಈ ದೇಶಗಳಲ್ಲಿ ಸಿನಿಮಾವೇ ಬ್ಯಾನ್!
ಅದೇ ಇನ್ನೊಂದೆಡೆ, ಮೊದಲ ರಾತ್ರಿಗೆ ಮಲ್ಲಿಯನ್ನು ಸಿಂಗರಿಸಿ ಜಯದೇವನ ಬಳಿ ಕಳುಹಿಸಿದ್ದಾಳೆ ಭೂಮಿಕಾ. ಮೊದಲೇ ಒಲ್ಲದ ಮದುವೆ. ಕಾಮತೃಷೆಗಾಗಿ ಮಲ್ಲಿಯನ್ನು ಬಳಸಿಕೊಂಡಿದ್ದ ಜಯದೇವ ಆಕೆಯನ್ನು ಪತ್ನಿಯೆಂದು ಸ್ವೀಕರಿಸುವುದಾದರೂ ಹೇಗೆ? ಅವಳಿಗೆ ಇನ್‌ಸಲ್ಟ್ ಮಾಡಿ, ಹಿಂಸೆ ಕೊಟ್ಟು ಸಿಟ್ಟಿನಲ್ಲಿ ಹೊರಕ್ಕೆ ಬಂದಿದ್ದಾನೆ. ಭೂಮಿಕಾ ವಿರುದ್ಧ ಕೊತಕೊತ ಕುದಿಯುತ್ತಿದ್ದಾನೆ. ಭೂಮಿಕಾ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ಲ್ಯಾನ್ ಮಾಡುತ್ತಿದ್ದಾನೆ.
ಇದೇ ಸಮಯದಲ್ಲಿ ಭೂಮಿಕಾ ಎಂಟ್ರಿ ಕೊಟ್ಟಿದ್ದಾಳೆ. ಹಿಂದೊಮ್ಮೆ ಗೌತಮ್ ಮತ್ತು ಆತನ ಸ್ನೇಹಿತ ಆನಂದ್ ವಿಷಯದಲ್ಲಿ ಮಾಡಿರುವ ತಪ್ಪನ್ನು ನೆನಪಿಸಿದ ಭೂಮಿಕಾ, ಈಗ ಎಲ್ಲವೂ ತಿಳಿದಿದ್ದರೂ ತನ್ನ ತಂಗಿ ಮತ್ತು ಮಲ್ಲಿಗೆ ಮೋಸ ಮಾಡಿದ್ದನ್ನು ತಾನು ಸಹಿಸುವುದಿಲ್ಲ ಎಂದಿದ್ದಾಳೆ. ಇಷ್ಟಾದರೂ ತನ್ನ ತಪ್ಪನ್ನು ಒಪ್ಪಿಕೊಳ್ತಿಲ್ಲ ಜೈದೇವ. ಆದರೆ ಖುದ್ದು ಕಣ್ಣಾರೆ ನೋಡಿದ ಭೂಮಿಕಾಗೆ ಸತ್ಯ ಏನು ಎಂದು ಗೊತ್ತು. ಇದೇ ವೇಳೆ ಮಲ್ಲಿಗೆ ಏನಾದರೂ ಹಿಂಸೆ ಕೊಟ್ಟರೆ, ಗೊತ್ತಲ್ಲ ಏನಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ.
ಸಿಹಿಯ ನಟನೆಗೆ ಕಣ್ಣೀರು ಹಾಕಿದ ಫ್ಯಾನ್ಸ್: ನಿನಗೆ ನೀನೇ ಸಾಟಿ ಕಂದಾ ಎಂದ ಅಭಿಮಾನಿಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.