ಮತ್ತೆ ಬಿಗ್ ಬಾಸ್ ಗೆ ಅವಮಾನಿಸಿದ ಜಗದೀಶ್‌, ಅಶ್ಲೀಲ ಪದ ಬಳಕೆಗೆ ಬೀಪ್ ಸೌಂಡ್‌ ಅಷ್ಟೇ!

Published : Oct 15, 2024, 11:42 PM ISTUpdated : Oct 16, 2024, 12:01 AM IST
ಮತ್ತೆ ಬಿಗ್ ಬಾಸ್ ಗೆ ಅವಮಾನಿಸಿದ ಜಗದೀಶ್‌, ಅಶ್ಲೀಲ ಪದ ಬಳಕೆಗೆ ಬೀಪ್ ಸೌಂಡ್‌ ಅಷ್ಟೇ!

ಸಾರಾಂಶ

ಬಿಗ್ ಬಾಸ್ ಕನ್ನಡ 11ರಲ್ಲಿ ಜಗದೀಶ್ ಅವರ ವರ್ತನೆ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಅಶ್ಲೀಲ ಪದ ಬಳಕೆ ಮತ್ತು ಶೋನಿಂದ ಹೊರಹೋಗುವ ಬೆದರಿಕೆ ಹಾಕಿದ ಜಗದೀಶ್, ಮನೆಯ ಸ್ಪರ್ಧಿಗಳು ಮತ್ತು ಬಿಗ್‌ಬಾಸ್‌ ಅವರನ್ನೂ ಕೆರಳಿಸಿದ್ದಾರೆ. ಕೊನೆಗೆ ಬಿಗ್‌ಬಾಸ್‌ ಕನ್ಫೆಶನ್ ರೂಂಗೆ ಕಳುಹಿಸಿದ್ದಾರೆ.

ಬಿಗ್ ಬಾಸ್ ಕನ್ನಡ 11ರಲ್ಲಿ ಮತ್ತೆ ಜಗದೀಶ್ ವರ್ತನೆಗೆ ಮನೆಯವರ ಜೊತೆಗೆ ಬಿಗ್‌ಬಾಸ್‌ ಕೂಡ ಬೇಸತ್ತಿದ್ದಂತೆ ಕಾಣುತ್ತಿದೆ. ಮೊದಲ ವಾರದಲ್ಲಿ ಜಗದೀಶ್ ಬಗ್ಗೆ ಹಗುರವಾಗಿ ಮಾತನಾಡಿದ್ದ ಜಗದೀಶ್ ಎರಡನೇ ವಾರ ಲವರ್ ಬಾಯ್ ತರ ಕಾಣಿಸಿಕೊಂಡಿದ್ದರು. ಇದೀಗ ಮೂರನೇ ವಾರ ಮತ್ತದೇ ಮೊದಲ ವಾರದ ವರ್ತನೆ ಕಾಣಿಸಿಕೊಂಡಿದೆ.

ಮೂರನೇ ವಾರದ 15 ನೇ ದಿನದ ಎಪಿಸೋಡ್‌ ನಲ್ಲಿ ಕೆಲವು ಅಶ್ಲೀಲ ಪದಗಳನ್ನು ಬಿಗ್‌ಬಾಸ್‌ ವಿರುದ್ಧ ಬಳಸಿದ್ದು, ಕ್ಯಾಮೆರಾ ಮುಂದೆ ನಿಂತು ತನಗೆ ಮನಬಂದಂತೆ ಬೈದಿದ್ದಾರೆ. ಜೊತೆಗೆ ನಾನು ಇಂದೇ ಶೋ ನಿಂದ ಹೊರಹೋಗುತ್ತೇನೆ ಕಳುಹಿಸಿ ಎಂದು ಹೇಳಿದ್ದಾರೆ. ಜಗದೀಶ್ ಅವರ ಆಡಿರುವ ಕೆಲವು ಅಶ್ಲೀಲ ಪದಗಳಿಗೆ ಬಿಗ್‌ಬಾಸ್‌ ಬೀಪ್‌ ಪದ ಹಾಕಿದ್ದಾರೆ.

ನಿನ್ನ ಪ್ರೋಗ್ರಾಂ ನೀನೇ ಮಾಡಿಕೋ. ನಾನು ಹೊರಗೆ ಹೋಗ್ತೀನಿ. ಇಮೇಜ್​ಗೆ ಡ್ಯಾಮೇಜ್ ಮಾಡಿಕೊಂಡು ನಾನು ಇಲ್ಲಿ ಇರಲ್ಲ. ಹೊರಗೆ ನೂರು ಜನಕ್ಕೆ ನಾನು ಊಟ ಹಾಕಿದ್ದೇನೆ. ಇಲ್ಲಿ ಊಟಕ್ಕೆ ರೂಲ್ಸ್ ಮಾಡ್ತಾರೆ. ಈಗಲೇ ಬಾಗಿಲು ತೆಗೆಯಿರಿ. ನಾನು ಈಗಲೇ ಹೊರಗೆ ಹೋಗುತ್ತೇನೆ. ಕಿರಿಕ್ ಮಾಡಿಕೊಂಡು ಮಜಾ ತೆಗೆದುಕೊಳ್ಳುವವರಿಗೆ ಬೆಲೆ ಜಾಸ್ತಿ. ಬಿಟ್ಟರೆ ನಾನು ಬ್ಯಾಗ್ ತೆಗೆದುಕೊಂಡು ಹೋಗುತ್ತೇನೆ ಎಂದು ಕ್ಯಾಮಾರಾ ಮುಂದೆ ಬಾಯಿ ಬಡಿದುಕೊಂಡಿದ್ದಾರೆ.

 ಜಗದೀಶ್ ಬಿಗ್‌ಬಾಸ್‌ಗೆ ಇಷ್ಟು ಕೆಟ್ಟದಾಗಿ ಮಾತನಾಡಿದ್ದಕ್ಕೆ ಮನೆಯ ಸ್ಪರ್ಧಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದು,  ಜಗದೀಶ್ ಎದುರು ರಂಜಿತ್, ಉಗ್ರಂ ಮಂಜು ಇಬ್ಬರು ಹೋಗಿ ಶೋ ಬಗ್ಗೆ ಏನೂ ಕೂಡ ಕೆಟ್ಟದಾಗಿ ಮಾತನಾಡುವಂತಿಲ್ಲ. ನೀನು ಏನೂ ಬೇಕಾದ್ರು ಮಾಡಿಕೋ, ಶೋ ಬಗ್ಗೆ ಮಾತನಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಕ್ಯಾಪ್ಟನ್ ಶಿಶಿರ್ ಅವರಿಗೆ ಕೂಡ ಈ ಸಮಯದಲ್ಲಿ ಪರಿಸ್ಥಿತಿಯ ನಿಯಂತ್ರಣ ಕಷ್ಟವಾಗಿದೆ.  ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಿಗ್ಬಾಸ್‌ ಕೂಡಲೇ ಕ್ಯಾಪ್ಟನ್ ಶಿಶಿರ್ ಗೆ ಕರೆ ಮಾಡಿ, ಮಾಹಿತಿ ತೆಗೆದುಕೊಂಡಿದ್ದಾರೆ.

ಇದಾದ ನಂತರ ಮನೆಯವರನ್ನು ಖಂಡಿಸಿದ್ದನ್ನು ಸಹಿಸಿಕೊಳ್ಳದ ಜಗದೀಶ್, ನನ್ನ ತಕರಾರು ಇರುವುದು ಬಿಗ್ ಬಾಸ್ ಬಳಿ. ನೀವು ಯಾರೂ ಮಾತನಾಡಬೇಕಿಲ್ಲ. ಟೈಮ್​ ಪಾಸ್​ ಮಾಡಲು ನಾನು ಬಂದಿಲ್ಲ. ಇಲ್ಲಿ ಬಂದು ಪರ್ಫಾರ್ಮೆನ್ಸ್​ ಮಾಡಿದ್ದೇನೆ. ನಾನು ಗುಲಾಮಗಿರಿ ಮಾಡಲ್ಲ.  ನಾನು  ಬಿಗ್ ಬಾಸ್​ ಮನೆಯಿಂದ ಹೀರೋ ಆಗಬೇಕಿಲ್ಲ. 50 ಲಕ್ಷ ರೂಪಾಯಿ ಆಸೆ ನನಗೆ ಇಲ್ಲ. ಕಪ್​ ಗೆಲ್ಲುವುದು ಕೂಡ ಬೇಕಿಲ್ಲ ಎಂದು ಕೈ ಮುಗಿದು ಶಿಶಿರ್ ಜೊತೆಗೆ ಹೇಳಿಕೊಂಡರು.

ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ 5 ಸಿನಿಮಾಗಳು ಸೂಪರ್‌ ಹಿಟ್‌!

ಇಷ್ಟು ಆಗಲಿಲ್ಲ ಎಂದು ಚೈತ್ರಾ ಕುಂದಾಪುರ ಜೊತೆಗೆ ಗಲಾಟೆಗೆ ಮುಂದಾದರು. ಅವರ ಕೇಸ್ ಬಗ್ಗೆ ಲೆಕ್ಕ ಕೊಟ್ಟರು. ಇದಾದ ಬಳಿಕ ಅವರಿಬ್ಬರ ಮಧ್ಯೆ ಜಗಳ ನಡೆಯಿತು. ಉಗ್ರಂ ಮಂಜು ಕೂಡ ಈ ಜಗಳಕ್ಕೆ ಸಾಥ್ ನೀಡಿದರು. ಕೊನೆಗೆ ಬಿಗ್‌ಬಾಸ್‌ ಗೆ ಜಗದೀಶ್ ಕಾಟ ತಡೆಯಲಾಗಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿತು. ಕನ್ಫೆಶನ್ ರೂಂ ಗೆ ಕಳಿಸುವಂತೆ  ಶಿಶಿರ್ ಗೆ ಫೋನ್ ಮಾಡಿ ತಿಳಿಸಿದರು. ಜೊತೆಗೆ ಈ ವಿಚಾರದಲ್ಲಿ ತಲೆ ಹಾಕುವುದು ಬೇಡ ಎಂದು ಬಿಗ್ ಬಾಸ್​ ಆದೇಶಿಸಿದರು. ಕನ್ಫೆಶನ್ ರೂಂನಲ್ಲಿ ಜಗದೀಶ್ ಅವರನ್ನು ಗಂಟೆಗಳ ಹೊತ್ತು ಕೂರಿಸಿದರು. 

ನಾವು ಕೈ ಎತ್ತಿ ಹೊಡೆದು,  ಹೊರಗಡೆ ಹೇಳಿಕೊಂಡು ಕೇಸ್ ಹಾಕೋ ಪ್ಲಾನ್‌ ಆಗಿರಬೇಕು ಎಂದು ಮನೆಯವರು ಮಾತನಾಡಿಕೊಂಡರು. ಇದೆಲ್ಲವನ್ನು ಕನ್ಫೆಶನ್ ರೂಂ ನಲ್ಲಿ ಜಗದೀಶ್  ನೋಡಿದ್ದಾರೆಂದು ಕಾಣುತ್ತದೆ.

ಬಿಗ್‌ಬಾಸ್‌ ಗೆ ಜಗದೀಶ್ ಯಾವ ಕೆಟ್ಟ ಪದ ಬಳಕೆ ಮಾಡಿ ಬೈದಿದ್ದಾರೆ ಎಂಬುದು ತಿಳಿದುಬಂದಿಲ್ಲ. ಜೊತೆಗೆ  ಜಗದೀಶ್ ಈ ರೀತಿಯ ವರ್ತನೆ ಬಿಗ್‌ಬಾಸ್‌ ಹೇಳಿ ಮಾಡಿಸಿರಬಹುದು ಎಂದು ಕೂಡ ಅನುಮಾನ ವೀಕ್ಷರಲ್ಲಿ ಎದ್ದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!