ಮೈಕಲ್‌ ಏಂಜಲೋ ಮತ್ತು ಕೆಲಸಕ್ಕೆ ಬರದ ಶಿಲೆ!

Kannadaprabha News   | Asianet News
Published : Jul 28, 2020, 09:07 AM IST
ಮೈಕಲ್‌ ಏಂಜಲೋ ಮತ್ತು ಕೆಲಸಕ್ಕೆ ಬರದ ಶಿಲೆ!

ಸಾರಾಂಶ

‘ದ ಡಿವೈನ್‌ ವನ್‌’ ಮೈಕಲ್‌ ಏಂಜಲೋ ಒಮ್ಮೆ ಎಲ್ಲ ಬಗೆಯ ಅಮೃತಶಿಲೆಗಳು ಸಿಗುವ ಮಾರುಕಟ್ಟೆದಾರಿಯಾಗಿ ಬರುತ್ತಿದ್ದ. ಒಂದು ಕಡೆ ಥಟ್ಟನೆ ನಿಂತ. ಅಲ್ಲೊಂದು ಶಿಲೆಯತ್ತ ಬೊಟ್ಟು ಮಾಡಿದ. ನಿರಾಸಕ್ತ ವ್ಯಾಪಾರಿ, ‘ಅದು ಹನ್ನೆರಡು ವರ್ಷದಿಂದ ಇಲ್ಲೇ ಬಿದ್ದುಕೊಂಡು ಜಾಗ ವೇಸ್ಟ್‌ ಮಾಡುತ್ತಿದೆ. ಇದರಿಂದ ಶಿಲ್ಪ ಮಾಡುವುದು ಸಾಧ್ಯ ಅಂತ ನನಗನಿಸಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಂಡು ಹೋಗು. ದುಡ್ಡೇನೂ ಬೇಡ’ ಅಂದ.

ಮೈಕಲ್‌ಏಂಜಲೋ ಆ ಶಿಲೆಯನ್ನು ತಂದ. ಒಂದು ವರ್ಷ ತಪಸ್ಸಿನಂತೆ ಅದರ ಜೊತೆಗೆ ಕೆಲಸ ಮಾಡಿದ. ತೀರಿ ಹೋದ ಏಸು ಕ್ರಿಸ್ತನನ್ನು ಶಿಲುಬೆಯಿಂದ ಕೆಳಗಿಳಿಸಿ ತಾಯಿ ಮೇರಿಯ ತೊಡೆ ಮೇಲೆ ಮಲಗಿಸಿರುವ ಶಿಲ್ಪ. ತಾಯಿ ಮೇರಿಯ ಕಣ್ಣೀರು ತುಂಬಿದ ಮುಖ ಭಾವ, ಏಸುವಿನ ಭಂಗಿ ಅರೆಕ್ಷಣ ಎಂಥವರನ್ನೂ ವಿಚಲಿತಗೊಳಿಸುತ್ತದೆ. ಹೆಚ್ಚು ಹೊತ್ತು ಈ ಶಿಲೆಯನ್ನೇ ದಿಟ್ಟಿಸಿದರೆ ನಮ್ಮ ಕಣ್ಣಾಲಿಗಳೂ ತುಂಬುತ್ತವೆ. ಇದನ್ನು ಈಗ ವ್ಯಾಟಿಕನ್‌ ಸಿಟಿಯಲ್ಲಿ ಇಡಲಾಗಿದೆ.

ಈ ಶಿಲೆ ಕೊಂಡುಹೋದ ಒಂದು ವರ್ಷದ ಬಳಿಕ ಮೈಕಲ್‌ ಏಂಜಲೋ ಆ ಅಂಗಡಿಯವನನ್ನು ಮನೆಗೆ ಕರೆಸಿದ. ಈ ಕಲಾಕೃತಿ ನೋಡಿ ಆತನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ‘ಇಷ್ಟುಸುಂದರ ಅಮೃತಶಿಲೆ ಎಲ್ಲಿಂದ ತಂದೆ?’ ಅಂತ ಅಚ್ಚರಿಯಿಂದ ಆತ ಕೇಳಿದ.

ಬಾರದ ಲೋಕಕ್ಕೆ GENTALMAN ಜೇಟ್ಲಿ: ಆಗಮನದಷ್ಟೇ ನಿರ್ಗಮನವೂ ಇತ್ತು GENTLY! 

‘ನಿಮ್ಮ ಅಂಗಡಿಯ ಮುಂದೆ 12 ವರ್ಷಗಳಿಂದ ಕಾಯುತ್ತಿದ್ದ ಕೆಲಸಕ್ಕೆ ಬರದ ಶಿಲೆ’ ಎಂದ ಮೈಕಲ್‌. ಅಂಗಡಿಯಾತನಿಗೆ ಇದನ್ನು ಅರಗಿಸಿಕೊಳ್ಳಲು ಕೊಂಚ ಹೊತ್ತು ಬೇಕಾಯ್ತು. ಆಮೇಲೆ ಕೇಳಿದ,‘ಆ ಕೆಲಸಕ್ಕೆ ಬರದ ಶಿಲೆಯನ್ನು ಇಂಥಾ ಅದ್ಭುತ ಕಲಾಕೃತಿಯಾಗಿ ರೂಪಿಸಬಲ್ಲೆ ಅಂತ ಅಂದುಕೊಳ್ಳುವುದು ಹೇಗೆ ಸಾಧ್ಯವಾಯ್ತು?’

‘ಬಹಳ ದಿನಗಳಿಂದ ಈ ಕಲಾಕೃತಿ ಮಾಡುವ ಕನಸಲ್ಲಿದ್ದೆ. ಈ ಶಿಲೆಯ ಮುಂದೆ ಹಾದುಹೋದಾಗ ಇದ್ದಕ್ಕಿದ್ದಂತೆ ಜೀಸಸ್‌ ನನ್ನನ್ನು ಕರೆದ. ನಾನು ಈ ಶಿಲೆಯಲ್ಲಿ ಬಂಧಿತನಾಗಿದ್ದೇನೆ. ನನ್ನನ್ನು ಇದರಿಂದ ಬಿಡಿಸು ಎಂದ. ನಾನು ಈ ಶಿಲೆಯ ಅನಗತ್ಯ ಭಾಗವನ್ನು ತೆಗೆದೆ. ಜೀಸಸ್‌ ಮತ್ತು ಮೇರಿ ಬಂಧನದಿಂದ ಮುಕ್ತರಾದರು’ ಎಂದ ಮೈಕಲ್‌ ಏಂಜಲೋ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ