ಆ ಒಂದು ದಿನದ ಶೂಟಿಂಗ್‌ನಿಂದ ಕಣ್ಣಿಗೆ ಮಾಡಿಸಿದ ದೊಡ್ಡ ಆಪರೇಷನ್ ಫೇಲ್; ಭಾವುಕರಾದ ರಶ್ಮಿ ಪ್ರಭಾಕರ್

By Vaishnavi ChandrashekarFirst Published Apr 29, 2024, 3:56 PM IST
Highlights

ಕಣ್ಣಿನ ಆಪರೇಷನ್ ಮಾಡಿಸಿಕೊಂಡು ರೆಸ್ಟ್‌ ಮಾಡುತ್ತಿದ್ದ ನಟಿಗೆ ಬಂತು ಎಮರ್ಜೆನ್ಸಿ ಕಾಲ್.... ಆಪರೇಷನ್ ಫೇಲ್ ಆಗಿತ್ತು ಯಾಕೆ?

ಲಕ್ಷ್ಮಿ ಬಾರಮ್ಮ, ಪೌರ್ಣಮಿ, ಮನಸೆಲ್ಲಾ ನೀನೇ, ಕಾವ್ಯಾಂಜಲಿ ಸೇರಿದಂತೆ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ರಶ್ಮಿ ಪ್ರಭಾಕರ್‌ ಭಾವುಕರಾಗಿದ್ದಾರೆ.  ಕಣ್ಣಿಗೆ ಗ್ಲಿಸರಿನ್‌ ಹಾಕುವುದರಿಂದ ಎಷ್ಟು ತೊಂದರೆ ಆಗಿತ್ತು ಎಂದು ವಿವರಿಸಿದ್ದಾರೆ. 

'ನನ್ನ ಜೀವನದಲ್ಲಿ ಅತಿ ಕೆಟ್ಟ ಅನುಭವ ಆಗಿದೆ ಇದುವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ನನಗಿರುವ ಕಣ್ಣಿನ ಸಮಸ್ಯೆ ಎಲ್ಲರಿಗೂ ಗೊತ್ತಿದೆ ಆದರೆ ಒಂದು ದೊಡ್ಡ ಪ್ರಾಜೆಕ್ಟ್ ಮಾಡುವಾಗ ಕಣ್ಣಿನ ಸಮಸ್ಯೆ ವಿಪರೀತ ಅಗಿಬಿಟ್ಟಿತ್ತು. ನ್ಯಾಚುರಲ್ ಆಗಿ ಅಳುತ್ತಿದ್ದರೂ ಕೆಲವೊಮ್ಮೆ ಕಂಟ್ಯೂನಿಟಿಗಾಗಿ ಗ್ಲಿಸರಿನ್ ಹಾಕಬೇಕು ಎನ್ನುತ್ತಿದ್ದರು. ಎಷ್ಟೇ ನ್ಯಾಚುರಲ್ ಆಗಿ ನಟನೆ ಮಾಡಿದ್ದರೂ ಆರ್ಟಿಸ್ಟ್‌ಗಳು ತಮ್ಮ ಜೀವನದಲ್ಲಿ ಗ್ಲಿಸರಿನ್‌ ಬಳಸಬೇಕು. ಗ್ಲಿಸರಿನ್‌ ಹಾಕಿ ಹಾಕಿ ನನ್ನ ಕಣ್ಣು ಕೆಂಪು ಆಗುತ್ತಿತ್ತು ಚಿಕ್ಕಗಾಗುತ್ತಿತ್ತು ಎಂದು ಆಪರೇಷನ್ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ರಶ್ಮಿ ಮಾತನಾಡಿದ್ದಾರೆ. 

ಕೈಯಲ್ಲಿದ್ದ ಡ್ರಿಪ್ಸ್‌ ಕಿತ್ತು ರಕ್ತ ಬರ್ತಿದ್ದರೂ ಶೂಟಿಂಗ್ ಮಾಡಿದ ಗೀತಾ ;3 ತಿಂಗಳು ಡಿಪ್ರೆಶನ್‌ಗೆ ಜಾರಿದ್ದು ನಿಜವೇ?

ಆಪರೇಷನ್ ಆದ ನಂತರ ಸುಮಾರು ಎರಡು ತಿಂಗಳ ಕಾಲ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು ಏಕೆಂದರೆ ಒಂದು ಕಣ್ಣಿನ ಸೆಲ್‌ಗಳನ್ನು ತೆಗೆದುಕೊಂಡು ಮತ್ತೊಂದು ಕಣ್ಣಿಗೆ ಸೇರಿಸುವ ಕೆಲಸ ಅದಾಗಿತ್ತು. ಆಪರೇಷನ್‌ ಸಕ್ಸಸ್‌ ಆಗಿತ್ತು. ಕಣ್ಣಿಗೆ ತೊಂದರೆ ಆಗಬಾರದು ಎಂದು ದಪ್ಪ ಲೆನ್ಸ್‌ ಹಾಕಿದ್ದರು. ಇದ್ದಕ್ಕಿದ್ದಂತೆ ಕಥೆ ಬದಲಾಗಿದೆ ವಿಡಿಯೋ ಬ್ಯಾಂಕಿಂಗ್‌ ಇಲ್ಲ ಎಂದು ಶೂಟಿಂಗ್‌ಗೆ ಬರಲು ಹೇಳಿದ್ದರು. ಕ್ಯಾಮೆರಾಗೆ ಒಂದು ಕಣ್ಣು ಕಾಣಿಸುವ ರೀತಿ ನಿಂತುಕೊಂಡು ಶೂಟಿಂಗ್ ಮಾಡಿದ್ದೀವಿ. ಆದರೆ ಈ ಸಮಯದಲ್ಲಿ ನನ್ನ ಕಣ್ಣೀನಲ್ಲಿ ಇದ್ದ ಲೆನ್ಸ್‌ ಬಿದ್ದು ಹೋಗಿದೆ. ಅಲ್ಲಿಗೆ ಆಪರೇಷನ್‌ ಫೇಲ್ ಆಯ್ತು. ಒಂದು ದಿನ ಶೂಟಿಂಗ್‌ನಿಂದ ಸರ್ಜರಿ ಫೇಲ್ ಆಯ್ತು ಎಂದು ರಶ್ಮಿ ಪ್ರಭಾಕರ್ ಹೇಳಿದ್ದಾರೆ. 

ಮೇಕಪ್ ಮಾಡಲು 50 ಸಾವಿರ ಪಡೆಯುವ ತೃತೀಯ ಲಿಂಗಿ; ಬಿಗ್ ಬಾಸ್ ಜಾನ್ಮೋನಿ ದಾಸ್ ಯಾರು?

'ಎಷ್ಟು ಸೆಲ್ ಹಾಕಿದ್ರು ಅಷ್ಟೂ ಲೆನ್ಸ್‌ಗೆ ಸೇರಿಕೊಂಡು ಹೋಗಿಬಿಟ್ಟಿತ್ತು. ಸೀರಿಯಲ್‌ ಕೆಲಸಗಳು ಅಂದ್ರೆ ತುಂಬಾ ಶ್ರಮ ಹಾಕಿ ಕೆಲಸ ಮಾಡುತ್ತೀವಿ. ಹತ್ತಿರಲ್ಲಿ ಸಾವು ಆದರೂ ಅಲ್ಲಿಗೆ ಹೋಗಿ ಸ್ನಾನ ಮಾಡಿಕೊಂಡು ಶೂಟಿಂಗ್‌ಗೆ ಬರುತ್ತೀವಿ. ಈಗ ನಾನು ಮತ್ತೆ ಆಪರೇಷನ್ ಮಾಡಿಸಬೇಕು ಯಾವಾಗ ಗೊತ್ತಿಲ್ಲ' ಎಂದಿದ್ದಾರೆ ರಶ್ಮಿ ಪ್ರಭಾಕರ್. 

click me!