
ಪ್ರೀತಿ ಮೊದಲಾ? ಮನೆಯವರು ಮೊದಲಾ? ನಿಮ್ಮ ಆಯ್ಕೆ ಯಾವುದು ಎಂದು ಕೇಳಿದರೆ ಬಹುತೇಕ ಮಂದಿಗೆ ಉತ್ತರಿಸುವುದು ಕಷ್ಟವಾಗಬಹುದು. ಬಲಗಣ್ಣು ಬೇಕೋ, ಎಡಗಣ್ಣು ಬೇಕೋ ಎರಡರಲ್ಲಿ ಒಂದು ಕಣ್ಣು ಹೇಳಿ ಎಂದರೆ ಉತ್ತರ ಹೇಳುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಈ ಪ್ರಶ್ನೆಗೂ ಉತ್ತರಿಸುವುದು. ಅಪ್ಪ-ಅಮ್ಮನನ್ನು ತುಂಬಾ ಪ್ರೀತಿ ಮಾಡುವವರಿಗಂತೂ ಈ ಪ್ರಶ್ನೆ ನುಂಗಲಾಗದ ತುತ್ತೇ. ಒಂದೆಡೆ ಅಪ್ಪ-ಅಮ್ಮ, ಇನ್ನೊಂದೆಡೆ ಪ್ರೀತಿಸುವ ಜೀವ ಎರಡಲ್ಲಿ ಒಂದು ಆಯ್ಕೆ ಮಾಡಿ ಎಂದು ಜೀ ಕನ್ನಡ ವಾಹಿನಿ ಕೆಲವರನ್ನು ಕೇಳಿದಾಗ ಅವರೆಲ್ಲಾ ಏನು ಹೇಳಿದ್ದಾರೆ ನೋಡಿ...
ಅಷ್ಟಕ್ಕೂ ಈ ಆಯ್ಕೆಯನ್ನು ಕೊಟ್ಟಿರುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ ಸಲುವಾಗಿ. ಇಲ್ಲಿ ಅಪೇಕ್ಷಾ ಮತ್ತು ಪಾರ್ಥ ಪ್ರೀತಿಸುತ್ತಿದ್ದಾರೆ. ಆದರೆ, ಅಪೇಕ್ಷಾಳ ಮದುವೆ ಪಾರ್ಥನ ಸಹೋದರ ಜೈದೇವನ ಜೊತೆ ಫಿಕ್ಸ್ ಆಗಿದ್ದು, ಮದುವೆ ತಯಾರಿಯೂ ನಡೆಯುತ್ತಿದೆ. ಮನೆಯವರಿಗಾಗಿ ಅಪೇಕ್ಷಾ ಮತ್ತು ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ಜೈದೇವ ಕುತಂತ್ರಿ ಎನ್ನುವುದು ಅಪೇಕ್ಷಾ ಸೇರಿದಂತೆ ಯಾರಿಗೂ ತಿಳಿದಿಲ್ಲ. ಈಗಿರುವ ಪ್ರಶ್ನೆ ಅಪೇಕ್ಷಾ ಮನೆಯವರಾಗಿ ಪ್ರೀತಿ ತ್ಯಾಗ ಮಾಡಿದ್ದು ಸರಿನಾ ಎನ್ನುವುದು.
25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್ನಲ್ಲಿ! ರಾಜಕಾರಣಿ ವಿರುದ್ಧ ನಟಿ ತ್ರಿಷಾ ಕೇಸ್- ನೆಟ್ಟಿಗರಿಗೂ ಎಚ್ಚರಿಕೆ
ಮನೆಯವರಾ? ಪ್ರೀತಿನಾ ಎಂಬ ಪ್ರಶ್ನೆಗೆ ಹಲವಾರು ಮಂದಿ ಅಪ್ಪ-ಅಮ್ಮನೇ ಮೊದಲು ಎಂದು ಹೇಳಿದ್ದಾರೆ. ಕಮೆಂಟ್ನಲ್ಲಿಯೂ ಅಪ್ಪ-ಅಮ್ಮನಿಗೇ ಮೊದಲ ಆದ್ಯತೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ಹೇಳುವಷ್ಟು ಸುಲಭ ನಿಜ ಜೀವನದಲ್ಲಿ ಸಾಧ್ಯವಿಲ್ಲ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ. ಅಪ್ಪ-ಅಮ್ಮನಿಗಾಗಿ ತಾನು ನಂಬಿರುವ ಅಥವಾ ತಾನು ಪ್ರೀತಿಸುತ್ತಿರುವ ಹುಡುಗ-ಹುಡುಗಿಯನ್ನು ಬಿಟ್ಟು ಕೊಡಲು ಎಷ್ಟು ಮಂದಿ ಒಪ್ಪುತ್ತಾರೆ ಎನ್ನುವುದು ಅವರ ಪ್ರಶ್ನೆ. ಇನ್ನು ಕೆಲವರು ಇಬ್ಬರೂ ಬೇಕು, ಆದರೆ ಅಪ್ಪ-ಅಮ್ಮನನ್ನು ಎದುರು ಹಾಕಿಕೊಂಡು ಪ್ರೀತಿಯನ್ನು ಒಪ್ಪಿಕೊಳ್ಳುವುದು ಸರಿಯಲ್ಲ. ಅವರ ಮನವೊಲಿಸಿ ಪ್ರೀತಿಸಿದ ಜೀವದ ಜೊತೆ ಮದುವೆಯಾಗಬೇಕು ಎಂದು ಹೇಳಿದ್ದಾರೆ. ಇದನ್ನು ಬಹುತೇಕ ಮಂದಿ ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಮನಸ್ಸನ್ನು ಒಬ್ಬನಿಗೆ ಕೊಟ್ಟು, ಅಪ್ಪ-ಅಮ್ಮನಿಗಾಗಿ ಪ್ರೀತಿ ತ್ಯಾಗ ಮಾಡಿ ದೇಹ ಮತ್ತೊಬ್ಬನಿಗೆ ಕೊಡುವುದು ಸರಿನಾ ಎನ್ನುವುದು ಕೆಲವರ ಪ್ರಶ್ನೆ.
ಈ ಸೀರಿಯಲ್ನಲ್ಲಿ, ಅಪೇಕ್ಷಾ ಮನೆಯವರಿಗಾಗಿ ಪ್ರೀತಿ ಬಿಟ್ಟುಕೊಟ್ಟಿದ್ದಾಳೆ. ಆದರೆ, ಆಕೆ ಮಾಡಿರುವುದು ಸರಿಯಲ್ಲ ಎನ್ನುವುದು ಸೀರಿಯಲ್ ಪ್ರಿಯರ ಅಭಿಮತ. ಇದಕ್ಕೆ ಕಾರಣವೂ ಇದೆ. ಆಕೆ ಪಾರ್ಥನನ್ನು ಪ್ರೀತಿಸುತ್ತಿರುವ ವಿಷಯವನ್ನು ಮನೆಯವರಿಗೆ ಹೇಳಲೇ ಇಲ್ಲ. ತಾನು ಮದುವೆಯಾಗುತ್ತಿರುವ ಹುಡುಗ ಪಾರ್ಥ ಎಂದು ಆರಂಭದಲ್ಲಿ ಆಕೆ ತಪ್ಪಾಗಿ ತಿಳಿದುಕೊಂಡದ್ದೇನೋ ನಿಜ. ಆದರೆ ತನ್ನ ಮದುವೆ ಆಗುತ್ತಿರುವುದು ಜೈದೇವನ ಜೊತೆ ಎಂದು ತಿಳಿದಾಗ, ಆಕೆ ತನ್ನ ಪ್ರೀತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳದೇ ಇರುವುದು ದೊಡ್ಡ ಅಪರಾಧ. ಅವಳಿಗೆ ಯಾರಿಂದಲೂ ಬಲವಂತ ಇರಲಿಲ್ಲ. ಮನೆಯವರಿಗೆ ಈ ವಿಷಯವನ್ನು ತಿಳಿಸಿದ್ದರೆ ಅವರು ಬೇಡ ಎಂದೇನೂ ಹೇಳುತ್ತಿರಲಿಲ್ಲ. ಆದರೆ ನಿಜ ಜೀವನದಲ್ಲಿ ಇಬ್ಬರಲ್ಲಿ ಒಬ್ಬರು ಯಾರು ಬೇಕು ಎಂದು ಕೇಳಿದಾಗ, ಅಪೇಕ್ಷಾ ರೀತಿಯಲ್ಲಿ ಮಾಡುವುದು ಸರಿಯಲ್ಲ ಎಂದು ಕಮೆಂಟಿಗರು ಹೇಳುತ್ತಿದ್ದಾರೆ.
ಸತ್ಯ ಸೀರಿಯಲ್ನಲ್ಲಿ ಪೊಲೀಸ್ ಪಾತ್ರಕ್ಕೆ ಇಷ್ಟು ಕಷ್ಟಪಟ್ಟಿದ್ದಾರಾ ನಟಿ? ತೆರೆಯ ಹಿಂದಿನ ವಿಡಿಯೋ ರಿಲೀಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.