Amruthadhaare Serialನಲ್ಲಿ ಗೌತಮ್​ ಪಾತ್ರ ಮುಗಿದೋಯ್ತಾ? ಧಾರಾವಾಹಿ ನಿರ್ದೇಶಕ ಹೇಳಿದ್ದೇನು

Published : Oct 03, 2026, 12:46 PM IST
Mahesh Rao

ಸಾರಾಂಶ

ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ದೀಪಿಕಾ ಅಸಲಿಯತ್ತು ಬಯಲಾಗಲು ವೀಕ್ಷಕರು ಕಾಯುತ್ತಿದ್ದಾರೆ. ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ನಾಟಕವೊಂದರಲ್ಲಿ ನಟಿಸುತ್ತಿರುವ ಕಾರಣ ಸೀರಿಯಲ್‌ನಿಂದ ಚಿಕ್ಕ ಬ್ರೇಕ್ ಪಡೆದಿದ್ದಾರೆ. ಅವರ ಪಾತ್ರ ಮುಗಿದೋಯ್ತಾ ಅಥವಾ ವಾಪಸ್​ ಬರ್ತಾರಾ ಎನ್ನುವ ಬಗ್ಗೆ ನಿರ್ದೇಶಕ ಮಹೇಶ್​ ರಾವ್​ ಹೇಳಿದ್ದೇನು?

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ನಟಿ ಛಾಯಾ ಸಿಂಗ್​ ಅವರ ಡಬಲ್​ ರೋಲ್​ ನಡೆಯುತ್ತಿದೆ. ಭೂಮಿಕಾ ಮತ್ತು ದೀಪಿಕಾ ಆಗಿ ನಟಿ ನಟಿಸುತ್ತಿದ್ದು, ಎರಡೂ ಪಾತ್ರಕ್ಕೆ ಅವರು ಜೀವ ತುಂಬುತ್ತಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್​ನಲ್ಲಿ ಗೌತಮ್​ ಪಾತ್ರಧಾರಿಯಾಗಿರುವ ನಟ ರಾಜೇಶ್​ ನಟರಂಗ (Rajesh Nataranga) ಮತ್ತು Chaya Singh ಇಬ್ಬರದ್ದೂ ಒಬ್ಬರನ್ನು ಒಬ್ಬರು ಮೀರಿಸುವ ನಟನೆ. ಅವರ ಅದ್ಭುತ ನಟನೆಯಿಂದಲೇ ಈ ಸೀರಿಯಲ್​ ಈ ಪರಿಯಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಟಿಆರ್​ಪಿ ಏರುತ್ತಲೇ ಇರುವ ಕಾರಣ, ಇನ್ನೇನು ಸೀರಿಯಲ್​ ಮುಗಿಯತ್ತೆ ಎನ್ನೋಷ್ಟರಲ್ಲಿಯೇ ಮತ್ತೊಂದು ಟ್ವಿಸ್ಟ್​ ಕೊಟ್ಟು ಸೀರಿಯಲ್​ ಎಳೆಯಲಾಗುತ್ತಿದೆ. ಸಾಮಾನ್ಯವಾಗಿ ಸೀರಿಯಲ್​ಗಳನ್ನು ಎಳೆದಾಗ ಅದರ ಮೂಲ ಕಥೆಯ ಇಂಟರೆಸ್ಟಿಂಗ್​ ವೀಕ್ಷಕರಿಗೆ ಇರದೇ ಕೊನೆಗೆ ಜಾಳುಜಾಳಾಗುವುದು ಇದೆ. ಆದರೆ ಅಮೃತಧಾರೆಯಲ್ಲಿ ಆ ರೀತಿಯಾಗದೇ ಮುಂದೇನು ಮುಂದೇನು ಎಂದು ಕುತೂಹಲ ಕೆರಳಿಸುವಂತಿದೆ.

ಆದರೆ ಸದ್ಯ ದೀಪಿಕಾ, ಭೂಮಿಕಾ ಜಾಗದಲ್ಲಿ ಬಂದು ಕೂತಿದ್ದಾಳೆ. ಇವಳ ಅಸಲಿಯತ್ತು ಯಾವಾಗ ಬಯಲಾಗುತ್ತದೆಯೋ ನೋಡಬೇಕಿದೆ. ಮನೆಯಲ್ಲಿ ಇರುವವರಿಗೆ ಇವಳ ಮೇಲೆ ಡೌಟ್​ ಬಂದಿದ್ದರೂ, ಇವಳು ಭೂಮಿಕಾ ಅಲ್ಲಾ ಎನ್ನೋದು ಯಾರಿಂದಲೂ ತಿಳಿಯಲು ಸಾಧ್ಯವಿಲ್ಲ. ಇವಳ ಅಸಲಿಯತ್ತು ಬಹಿರಂಗಗೊಳ್ಳಬೇಕಿದ್ದರೆ, ಗೌತಮ್​ ಬರಲೇಬೇಕು. ಆತ ಯಾವಾಗ ಬರ್ತಾನೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಗೌತಮ್​ ಪಾತ್ರ ಮುಗೀತಾ?

ಅಷ್ಟಕ್ಕೂ ಗೌತಮ್​ನನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಹಲವು ಮಂದಿ ಗೌತಮ್​ ಪಾತ್ರ ಮುಗಿಸೇಬಿಟ್ಟರಾ ಎಂದುಕೊಂಡದ್ದೂ ಉಂಟು. ಆಗಾಗ್ಗೆ ಭೂಮಿಕಾ ಜೊತೆ ಫೋನ್​ನಲ್ಲಿ ಮಾತನಾಡಿಸಿ ಗೌತಮ್​ ಪಾತ್ರ ಮುಗಿದಿಲ್ಲ ಎಂದು ನಿರ್ದೇಶಕರು ತೋರಿಸುತ್ತಾ ಬಂದರೂ, ಕೆಲವೊಮ್ಮೆ ಗೌತಮ್​ ಪಾತ್ರಧಾರಿ ಬದಲಾಗ್ತಾರಾ, ಅವರು ಏಕೆ ಕಾಣಿಸ್ತಿಲ್ಲ ಇತ್ಯಾದಿಯಾಗಿ ಪ್ರೊಮೋಗಳ ಕಮೆಂಟ್ಸ್​ನಲ್ಲಿ ವೀಕ್ಷಕರು, ನೆಟ್ಟಿಗರು ಪ್ರಶ್ನೆ ಕೇಳುವುದು ಉಂಟು.

ನಿರ್ದೇಶಕ ಮಹೇಶ್​ ಹೇಳಿದ್ದೇನು?

ಅದಕ್ಕೆ ಈಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಖುದ್ದು ಅಮೃತಧಾರೆ ಸೀರಿಯಲ್​ ನಿರ್ಮಾಪಕ-ನಿರ್ದೇಶಕ ಮಹೇಶ್‌ ರಾವ್‌ ಅವರೇ ಉತ್ತರ ಕೊಟ್ಟಿದ್ದಾರೆ. ಗೌತಮ್​ ಪಾತ್ರ ಮುಗಿದಿಲ್ಲ. ಗೌತಮ್​ ಪಾತ್ರಧಾರಿಯಾಗಿರುವ ರಾಜೇಶ್​ ನಟರಂಗ ಅವರೇ ಶೀಘ್ರದಲ್ಲಿ, ಇನ್ನೊಂದು ವಾರದಲ್ಲಿ ಚಿತ್ರೀಕರಣಕ್ಕೆ ಮತ್ತೆ ಬರಲಿದ್ದಾರೆ. ಸದ್ಯ ಅವರು, ಒಂದು ನಾಟಕದಲ್ಲಿ ಭಾಗವಹಿಸಲಿದ್ದು, ಅದಕ್ಕಾಗಿ ಚಿಕ್ಕ ಬ್ರೇಕ್​ ತೆಗೆದುಕೊಂಡಿದ್ದಾರೆ. ಬರುವ 10ನೇ ತಾರೀಖಿನಿಂದ ಅವರು ಸೀರಿಯಲ್​ಗೆ ಮರಳಲಿದ್ದಾರೆ ಎಂದಿದ್ದಾರೆ.

ಅಷ್ಟಕ್ಕೂ ರಾಜೇಶ್​ ಅವರು, 20 ವರ್ಷಗಳ ನಂತರ ಮತ್ತೆ ರಂಗಭೂಮಿಗೆ ಮರಳಿದಿದ್ದಾರೆ. ʻಕಲಾದ್ಯುತಿ ಪ್ರೊಡಕ್ಷನ್ಸ್ʼಅವರ ಮಳೆ ನಿಲ್ಲುವವರೆಗೆ ನಾಟಕದ ಮೂಲಕ ಕಂಬ್ಯಾಕ್‌ ಆಗಿದ್ದಾರೆ. ಇದರ ಷೋ ಇದಾಗಲೇ ನಡೆದಿದೆ. ಇದಕ್ಕಾಗಿ ರಾಜೇಶ್​ ಅವರು ಕೆಲ ಕಾಲ ಅಮೃತಧಾರೆ ಸೀರಿಯಲ್​ನಿಂದ ಬ್ರೇಕ್​ ತೆಗೆದುಕೊಂಡಿದ್ದರು. ಅವರನ್ನು ಫಾರಿನ್​ಗೆ ಸೀರಿಯಲ್​ನಲ್ಲಿ ಕಳುಹಿಸಲಾಗಿದೆ. ಅಷ್ಟಕ್ಕೂ ಸದ್ಯ ದೀಪಿಕಾ ಎಂಟ್ರಿಯಾಗಿರುವ ಕಾರಣ, ಗೌತಮ್​ ಪಾತ್ರ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳದಿದ್ದರೆ ಒಳಿತು ಎನ್ನುವ ಕಾರಣಕ್ಕೆ, ಸೀರಿಯಲ್​ನಲ್ಲಿ ಕಲಾವಿದರ ಅನುಕೂಲಕ್ಕೆ ತಕ್ಕಂತೆ ಟ್ವಿಸ್ಟ್​ ಕೊಡಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೆಡಿಎಸ್‌ ಪಕ್ಷ ಸೇರಿದ 6 ತಿಂಗಳಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ Bigg Boss ಜಾಹ್ನವಿ, ಪತ್ರಕ್ಕೆ ಸಹಿ ಹಾಕಿದ ಕುಮಾರಸ್ವಾಮಿ!
Amruthadhaare: ದೀಪಿಕಾ ಬಂದ ಕೆಲ್ಸ ಮಾಡಾಯ್ತು- ಜೈದೇವ್​ ಮನೆಗೆ ಎಂಟ್ರಿ ಕೊಟ್ಟಾಯ್ತು; ಮುಂದೇನು