ಪುಷ್ಪಾ 2 ಸಿನಿಮಾದ ಸಾಮಿ ಹಾಡು ಸಖತ್ ಹಿಟ್ ಆಗಿತ್ತು, ಜೊತೆಗೆ ಟ್ರೆಂಡ್ ಕೂಡ ಸೃಷ್ಟಿಸಿತ್ತು. ಇದೀಗ 70 ಪ್ಲಸ್ ಆಸುಪಾಸಿನ ವಯಸ್ಸಿನ ಅಜ್ಜಿ -ತಾತ ಈ ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಮುಖ್ಯ ಪಾತ್ರದಲ್ಲಿ ನಟಿಸಿರುವ 2024ರ ಸೂಪರ್ ಹಿಟ್ ಸಿನಿಮಾ ಅಂದರೆ ಅದು ಪುಷ್ಪಾ 2. ಈ ಸಿನಿಮಾದ ಪಾತ್ರಗಳು, ಕಥೆ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ರೊಮ್ಯಾನ್ಸ್, ಶ್ರೀಲೀಲಾ ಕಿಸಕ್ ಡ್ಯಾನ್ಸ್ ಎಲ್ಲವೂ ಸದ್ದು ಮಾಡಿತ್ತು. ಒಟ್ಟಲ್ಲಿ ಹೇಳಬೇಕಂದ್ರೆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದಂತೂ ನಿಜಾ. ಈ ಸಿನಿಮಾದ ಹಾಡು ಒಂದಲ್ಲ ಒಂದು ರೀತಿಯಲ್ಲಿ ಟ್ರೆಂಡ್ ಸೃಷ್ಟಿಸಿತ್ತು, ಅದರಲ್ಲೂ ಸೂಸೇಕಿ….. ಸಾಮಿ ಹಾಡು ಸಖತ್ ಟ್ರೆಂಡ್ ಆಗಿತ್ತು, ಇನ್’ಸ್ಟಾಗ್ರಾಂ ರೀಲ್ಸ್ ಪೂರ್ತಿ ಈ ಹಾಡು ಸ್ಥಾನ ಪಡೆದಿತ್ತು.
ಪುಷ್ಪಾ ಸಿನಿಮಾದ ಸಾಮಿ ಸಾಮಿ ಸಿಗ್ನೇಚರ್ ಸ್ಟೆಪ್ ರೀತಿ ಮತ್ತೊಂದು ಡ್ಯಾನ್ಸ್ ತೋರಿಸಿದ ರಶ್ಮಿಕಾ ಮಂದಣ್ಣ!
ಸೋಶಿಯಲ್ ಮೀಡಿಯಾ ರೀಲ್ಸ್ ನಲ್ಲಿ (Instagram reels) ಸಾಮಿ ಅಂತ ಕೊಟ್ರೆ ಸಾಕು, ಸೆಲೆಬ್ರಿಟಿಗಳಿಂದ ಹಿಡಿದು, ಸಾಮಾನ್ಯ ಜನರವರೆಗೂ ಎಲ್ಲರೂ ಸಹ ಈ ಟ್ರೆಂಡಿ ಹಾಡಿಗೆ (trendy song)ಹೆಜ್ಜೆ ಹಾಕಿ ಕುಣಿದವರೇ ಹೆಚ್ಚು. ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಈ ಹಾಡಿನ ಕ್ರೇಜಿಗೆ ಕಳೆದು ಹೋಗಿದ್ದರು. ಇದೀಗ ಈ ಹಾಡಿಗೆ ಯುವಕರೇ ನಾಚುವಂತೆ ಹೆಜ್ಜೆ ಹಾಕಿದ 70ರ ಆಸುಪಾಸಿನಲ್ಲಿರುವ ಅಜ್ಜಿ -ತಾತನ ವಿಡಿಯೋ ಸಖತ್ ವೈರಲ್ ಆಗ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತದ್ದೇನಿದೆ ಅನ್ನೋದನ್ನು ನೀವೇ ನೋಡಬಹುದು.
ರಶ್ಮಿಕಾ ಮಂದಣ್ಣ ಪೀಲಿಂಗ್ಸ್ ಹಾಡಿಗೆ ಅಜ್ಜಿಯ ಬಿಂದಾಸ್ ಡ್ಯಾನ್ಸ್; ಹುಬ್ಬೇರಿಸಿದ ಶ್ರೀವಲ್ಲಿ ಫ್ಯಾನ್ಸ್
ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ ಸೂಸೇಕಿ ಅಗ್ಗಿರವ ಮದಿರಿ ವುಂಟಾದೆ ನಾ ಸಾಮಿ, ಹಾಡು ಎಷ್ಟು ಕಿಕ್ ಕೊಟ್ಟಿತ್ತೋ, ಇಬ್ಬರ ಡ್ಯಾನ್ಸ್ ಕೂಡ ಅಷ್ಟೇ ಕಿಕ್ ಕೊಟ್ಟಿತ್ತು. ಸಿನಿಮಾ ರಿಲೀಸ್ ಆಗುವ ಮುನ್ನವೇ ಈ ಹಾಡು ಟ್ರೆಂಡ್ ಸೃಷ್ಟಿಸಿತ್ತು. ಈ ಹಾಡಿನ ರೀಲ್ಸ್ ಟ್ರೆಂಡ್ ಕೊನೆಯಾಗುವ ಸಮಯದಲ್ಲಿ ಇದೀಗ ಅಜ್ಜಿ -ತಾತನ ಜೋಡಿಯೊಂದು ವೇದಿಕೆ ಮೇಲೆ ಈ ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಯಾವುದೋ ಮದುವೆ ಸಮಾರಂಭದಲ್ಲಿ ಸಂಗೀತ್ ಸಂಜೆಯಲ್ಲಿ ಈ ಜೋಡಿ ನೃತ್ಯ ಮಾಡಿದಂತೆ ಕಾಣುತ್ತಿದೆ. ಇಬ್ಬರು ಹಾಡಿಗೆ ಸರಿಯಾಗಿ ಮುದ್ದಾಗಿ, ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕುತ್ತಿದ್ದರೆ, ಪ್ರೇಕ್ಷಕರು ಕ್ಲಾಪ್ ಮಾಡುತ್ತಾ ಹುರಿದುಂಬಿಸುತ್ತಿರುವ ಶಬ್ಧ ಕೇಳಿ ಬರುತ್ತಿದೆ. ಈ ವಯಸ್ಸಲ್ಲೂ ಅಜ್ಜ-ಅಜ್ಜಿ ಡ್ಯಾನ್ಸ್ ಮಾಡಲು ತೋರಿಸಿದಂತಹ ಹುರುಪು ಹಾಗೂ ಅವರಿಗೆ ಡ್ಯಾನ್ಸ್ ಕಲಿಸಿದಂತಹ ಕೊರಿಯೋಗ್ರಾಫರ್ ಹಾಗೂ ಅವರಿಗೆ ಡ್ಯಾನ್ಸ್ ಮಾಡಲು ಒಪ್ಪಿಗೆ ನೀಡಿದಂತಹ ಅವರ ಮಕ್ಕಳಿಗೆ ಜನರು ಶುಭ ಹಾರೈಸುತ್ತಿದ್ದಾರೆ.
ಪುಷ್ಪರಾಜ್‌ಗೆ ರಿಲೀಫ್ ನೀಡಿದ ಕೋರ್ಟ್, ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್‌ಗೆ ಜಾಮೀನು
ವಿಡೀಯೋ ನೋಡಿರುವ ಜನರು ವಿಡಿಯೋ ತುಂಬಾನೆ ಕ್ಯೂಟ್ ಆಗಿದೆ. ನಾವು ಇಂಟರ್ನೆಟ್ ಗೆ ಹಣ ಕಟ್ಟೋದಕ್ಕೂ ಸಾರ್ಥಕ ಆಯ್ತು, ಇವರಿಬ್ಬರಿಗೂ ಯಾರ ದೃಷ್ಟಿಯೂ ತಾಗದಿರಲಿ, ಇಂಥದ್ದೇ ಒಬ್ಬರು ಸಂಗಾತಿ ನಮಗೂ ಸಿಗಲಿ, ನಿಜವಾದ ಸಂತೋಷ ಪ್ರೀತಿ ಅಂದ್ರೆ ಏನು ಅನ್ನೋದನ್ನು ಈ ಜೋಡಿ ತೋರಿಸುತ್ತಿದೆ, ಇನ್ಸ್ಟಾಗ್ರಾಂನಲ್ಲಿ ಕಂಡ ಬೆಸ್ಟ್ ವಿಡಿಯೋ (best video on instagram) ಇದು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.