ರೀಲ್ಸ್ ಕ್ವೀನ್ ಕಿಪಿ ಕೀರ್ತಿ ಜೀವನದಲ್ಲಿ ಎದುರಿಸುತ್ತಿರುವ ನೋವು ಒಂದೆರಡಲ್ಲ. ಕುಟುಂಬಸ್ಥರಿಂದ ಪಡೆದ ಹುಚ್ಚಿ ಪಟ್ಟ ನೋವು ಕೊಟ್ಟಿದೆ ಅಂತೆ....
ಇನ್‌ಸ್ಟಾಗ್ರಾಂ ಓಪನ್ ಮಾಡಿದ ತಕ್ಷಣ ಹಾಯ್ ಜನರೆ...ಹೇಳಿ ಜನರೇ ಎಂದು ಬರುವ ವಿಡಿಯೋ ನೋಡಿ ಅಯ್ಯೋ ಯಾರಿದು ಪುಟ್ಟ ಹುಡುಗಿ ಅಂದುಕೊಂಡವರಿಗಿಂತ ಹೆಚ್ಚಾಗಿ ಯಾರಿದು ಎಂದು ಬೈದು ನೆಗೆಟಿವ್ ಕಾಮೆಂಟ್ ಮಾಡಿದವರೇ ಹೆಚ್ಚು. ತಮ್ಮ ಸುಖ ದುಃಖವನ್ನು ಫಾಲೋವರ್ಸ್ ಜೊತೆ ಹಂಚಿಕೊಂಡು ಮನೋರಂಜನೆ ನೀಡುವ ಹುಡುಗಿನೇ ಕಿಪಿ ಕೀರ್ತಿ. ಟೀನೇಜ್ ಹುಡುಗಿ ಆಗಿದ್ದರೂ ನೋಡಲು ಮಿಡಲ್ ಸ್ಕೂಲ್ ಹುಡುಗಿ ರೀತಿ ಕಾಣಿಸುತ್ತಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂದು ಸಾಭೀತು ಮಾಡಿದ್ದಾರೆ.
'ಒಂದು ಚೂರು ಜ್ವರ ಬಂದ್ರೆ ನಾನು ಸಣ್ಣಗಾಗುತ್ತೀನಿ. ಈಗಾಗಲೆ ನಾನು 23 ಕೆಜಿ ಇದ್ದೀನಿ. ನಾನು ಟೆನ್ಶನ್ ಜಾಸ್ತಿ ಮಾಡಿಕೊಳ್ಳುತ್ತೀನಿ ತುಂಬಾ ಎಮೋಷನಲ್ ಹುಡುಗಿ ನಾನು. ಚಿಕ್ಕ ವಯಸ್ಸಿನಿಂದ ನಾನು ಮಾತು ಜಾಸ್ತಿನೇ, ತುಂಬಾ ಜಾಯ್‌ಫುಲ್ ಹುಡುಗಿ ಆಗಿ ಬೆಳೆದಿರುವುದು. ಅಜ್ಜಿ ಮತ್ತು ಚಿಕ್ಕಪ ನನ್ನ ತಾಯಿಗೆ ತುಂಬಾ ಕಷ್ಟ ಕೊಟ್ಟಿದ್ದಾರೆ. ನನ್ನ ಫ್ಯಾಮಿಲಿ ಇದುವರೆಗೂ ನನಗೆ ಏನೂ ಮಾಡಿಲ್ಲ ನನ್ನ ತಾಯಿ ಅಣ್ಣ ಅವರು ಮಾತ್ರ ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುವುದು. ತಂದೆ ತೀರಿಕೊಂಡ ಸಮಯದಲ್ಲಿ ಸಹಾಯ ಮಾಡಿದ್ದು ಈಗ ನನ್ನ ತಾಯಿ ದುಡಿದು ನನ್ನನ್ನು ಸಾಕುತ್ತಿರುವುದು. ನಾನು ಹೆಣ್ಣು ಮಗುವಾಗಿ ಸರಿಯಾಗಿ ಪ್ರೀತಿ ಕೊಟ್ಟಿಲ್ಲ. ಫ್ಯಾಮಿಲಿಯಿಂದ ಬರುವ ಆಸ್ತಿಯನ್ನು ಕಡಿಮೆ ಕೊಟ್ಟಿದ್ದಾರೆ ಉಳಿದು ಆಸ್ತಿಯನ್ನು ಚಿಕ್ಕಪ್ಪ ತೆಗೆದುಕೊಂಡಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಕಿಪಿ ಕೀರ್ತಿ ಮಾತನಾಡಿದ್ದಾರೆ.
ಕಾಂಚಿವರಂ ಸೀರೆಯಲ್ಲಿ ಮಿಂಚಿದ 'ಕಾಂತಾರ' ರಿಷಬ್ ಶೆಟ್ಟಿ ಪತ್ನಿ ಪ್ರಗತಿ; ಕುಂದಾಪುರದ ಮಲ್ಲಿಗೆ ಎಂದ ನೆಟ್ಟಿಗರು
'ಫ್ಯಾಮಿಲಿ ಕೊಟ್ಟ ಕಾಟ ತಾಯಿ ಎದುರಿಸಿದ ನೋವುಗಳನ್ನು ನೋಡಿ ಈಗ ನಾನು ದುಡಿದು ಸಾಧನೆ ಮಾಡಬೇಕು ಅನ್ನೋ ಆಸೆ ಶುರುವಾಗಿದೆ. ಚಿಕ್ಕ ವಯಸ್ಸಿನಲ್ಲಿ ತಿಳುವಳಿಕೆ ಇಲ್ಲದ ಕಾರಣ ಬೆಕ್ಕುಗಳ ಜೊತೆ ಹೆಚ್ಚಿಗೆ ಮಾತನಾಡುತ್ತಿದ್ದೆ ಆಗ ಸಂಬಂಧಿಕರು ವಿಡಿಯೋ ಮಾಡಿಕೊಂಡು ಅಣ್ಣ ಮತ್ತು ಸ್ನೇಹಿತರಿಗೆ ತೋರಿಸಿ ಹುಚ್ಚಿ ಪಟ್ಟ ಕೊಟ್ಟರು. ಅಲ್ಲಿ ಹೋಗಬೇಕು ಅವರ ಜೊತೆ ಮಾತನಾಡಬೇಡ ಎಂದು ತುಂಬಾ ಹಿಂಸೆ ಬಂದಿದ್ದು. ಸೆಕೆಂಡ್ ಪಿಯುಸಿ ಆದ್ಮೇಲೆ ನನಗೆ ತಿಳುವಳಿಕೆ ಬಂದಿದ್ದು' ಎಂದಿದ್ದಾಳೆ ಕೀರ್ತಿ. ಅಪ್ಪಟ ಅಪ್ಪು ಸರ್ ಅಭಿಮಾನಿ ಆಗಿರುವ ಕೀರ್ತಿ ಸುಮಾರು 1 ಲಕ್ಷ 64 ಸಾವಿರ ಫಾಲೋವರ್ಸ್‌ನ ಪಡೆದಿದ್ದಾರೆ. ದಿನಕ್ಕೊಂದು ರೀಲ್ಸ್, ವಾರಕ್ಕೊಂದು ಲೈವ್ ಅಂತ ಜನರನ್ನು ಮನೋರಂಜಿಸುತ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ಬರುವ ಪ್ರಮೋಷನ್‌ಗಳಿಂದ ದುಡಿಮೆ ಮಾಡಲು ಶುರು ಮಾಡಿದ್ದಾರೆ.
ಕಿಪಿ ಕೀರ್ತಿ ಬಂದ್ರೆನೇ ಬಿಗ್ ಬಾಸ್ ನೋಡೋದು; ವೈಲ್ಡ್ ಕಾರ್ಡ್ ಎಂಟ್ರಿ ಫಿಕ್ಸ್?