
ಅಹಮ್ಮದಾಬಾದ್(ಮೇ.05) ಯುವ ಗಾಯಕ ಪವನ್‌ದೀಪ್ ರಾಜನ್ ಇಂಪಾದ ಧ್ವನಿಯನ್ನು ಭಾರತೀಯರು ಮೆಚ್ಚಿಕೊಂಡಿದ್ದಾರೆ. ಇಂಡಿಯನ್ ಐಡಲ್ ಮೂಲಕ ಭಾರತೀಯರಿಗೆ ಚಿರಪರಿಚಿತರಾಗಿರುವ ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್ ಸೀಸನ್ 12ರಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದೀಗ ಗಾಯಕ ಪವನ್‌ದೀಪ್ ರಾಜನ್ ಸಂಚರಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಗುಜರಾತ್‌ನ ಅಹಮ್ಮದಾಬಾದ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಕ ಪವನ್‌ದೀಪ್ ರಾಜನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಕ ಪವನ್‌ದೀಪ್ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗ್ಗೆ 3.40ರ ವೇಳೆ ಸಂಭವಿಸಿದ ಅಪಘಾತ
ಪವನ್‌ದೀಪ್ ರಾಜನ್ ಕಾರ್ಯಕ್ರಮ ನಿಮಿತ್ತ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೆಳಗಿನ ಜಾವ 3.40ಕ್ಕೆಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಪವನ್‌ದೀಪ್ ರಾಜನ್‌ಗೆ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆ ವೈದ್ಯರ ಪ್ರಕಾರ ಪವನ್‌ದೀಪ್ ರಾಜನ್ ಬಲಗಾಲು ಹಾಗೂ ಕೈಗೆ ಗಂಭೀರವಾಗಿ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಿದ ವೇಳೆ ನೀಡಿದ ಪ್ರಥಮ ಚಿಕಿತ್ಸೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿದೆ.
ಇಂಡಿಯನ್ ಐಡಲ್ ಸೀಸನ್ 12ರ ಕಿರೀಟ ಗೆದ್ದ ಪವನ್ ದೀಪ್ ರಾಜನ್; ಜೇಬಲ್ಲಿ 25 ಲಕ್ಷ!
ಆಸ್ಪತ್ರೆ ವೈದ್ಯರ ಪ್ರಕಾರ, ಗಾಯಕ ಪವನ್‌ದೀಪ್ ರಾಜನ್‌ಗೆ ಗಂಭೀರ ಗಾಯಗಳಿವೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಪವನ್‌ದೀಪ್ ರಾಜನ್ ಆರೋಗ್ಯ ಸ್ಥಿರವಾಗಿದೆ. ಚೇತರಿಕೆಗೆ ಸುದೀರ್ಘ ದಿನಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಪವನ್‌ದೀಪ್ ರಾಜನ್ ಚಿಕಿತ್ಸೆ ಮುಂದುವರಿದಿದೆ.
ಅಘಾತ ವ್ಯಕ್ತಪಡಿಸಿದ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಆಗ್ರಹ
ಪವನ್‌ದೀಪ್ ರಾಜನ್ ಅಪಘಾತ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಆಘಾತಗೊಂಡಿದ್ದಾರೆ. ಶೀಘ್ರದಲ್ಲೇ ಪವನ್‌ದೀಪ್ ರಾಜನ್ ಚೇತರಿಸಿಕೊಳ್ಳಲು ಆಶಿಸಿದ್ದಾರೆ. ಇದೀಗ ಅಭಿಮಾನಿಗಳು ವೈದ್ಯರ ಹೆಲ್ತ್ ಬುಲೆಟಿನ್‌ಗಾಗಿ ಹಲವರು ಕಾಯುತ್ತಿದ್ದಾರೆ.
ಆಸ್ಪತ್ರೆಗೆ ದೌಡಾಯಿಸಿದ ಕುಟುಂಬಸ್ಥರು
ಪವನ್‌ದೀಪ್ ರಾಜನ್ ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಆಪ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸದ್ಯ ಹಲವು ಅಭಿಮಾನಿಗಳು ಅಹಮ್ಮಾದಾಬಾದ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಇಂಡಿಯನ್ ಐಡನ್ ವಿನ್ನರ್
ಪವನ್‌ದೀಪ್ ರಾಜನ್ ಸುಮುಧರ ಕಂಠಕ್ಕೆ ಭಾರತ ಮರಳಾಗಿದೆ. 2021ರಲ್ಲಿ ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್ 12ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ 25 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆದಿದ್ದರು. ಪವನ್‌ದೀಪ್ ರಾಜನ್‌ಗೆ ದೇಶಾದ್ಯಂತ ಸಂಗೀತ ಆಸಕ್ತರು ವೋಟ್ ಮಾಡಿದ್ದರು. ಇದಕ್ಕೂ ಮೊದಲು 2015ರಲ್ಲಿ ದಿ ವಾಯ್ಸ್ ಇಂಡಿಯಾ ರಿಯಾಲಿಟಿ ಶೋ ಗೆದ್ದಿದ್ದಾರೆ.
ಮದ್ಯದ ಅಮಲಿನಲ್ಲಿ ಕಾರು ಗುದ್ದಿ ಬಾಲಕಿ ಸಾವು; ನಟಿ ಜಾನ್ವಿ ಕಪೂರ್ ಆಕ್ರೋಶ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.