
ನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ರೂ ನಿರೂಪಣೆ ಮೂಲಕವೇ ಜನರಿಗೆ ಹತ್ತಿರವಾದವರು ಅನುಪಮಾ ಗೌಡ (Anupama Gowda). ಈಗ ಮತ್ತೆ ಅನುಪಮಾ ಗೌಡ, ಸೀರಿಯಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಎಷ್ಟೋ ವರ್ಷಗಳ ನಂತ್ರ ಸೀರಿಯಲ್ (Serial )ನಲ್ಲಿ ಅನುಪಮಾ ಗೌಡ ಅವರನ್ನು ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಅನುಪಮಾ ಗೌಡ ನಟಿಸ್ತಿರುವ ಸೀರಿಯಲ್ ಯಾವ್ದು ಗೊತ್ತಾ?
ಝಾನ್ಸಿ ಹಾಗೂ ರಾಘು ಕಥೆ ಹೇಳುವ ಯಜಮಾನ (Yajamana) ಸೀರಿಯಲ್ ನಲ್ಲಿ ಅನುಪಮಾ ಎಂಟ್ರಿಯಾಗಿದೆ. ಈಗಾಗಲೇ ಇಬ್ಬರು ಹುಡುಗಿಯರ ಮಧ್ಯೆ ನುಲುಗಿ ಹೋಗಿರುವ ರಾಘುಗೆ ಇನ್ನೊಂದು ಹೀರೋಯಿನ್ನ ಅಂತ ಪ್ರಶ್ನೆ ಮಾಡ್ಬೇಡಿ. ರಾಘುಗೆ ತೊಂದ್ರೆ ಕೊಡೋಕೆ ಅನುಪಮಾ ಬಂದಿಲ್ಲ. ರಾಘು ಹಾಗೂ ಝಾನ್ಸಿಯನ್ನು ಒಂದು ಮಾಡಲು ಭೂಮಿಯಾಗಿ ಅನುಪಮಾ ಗೌಡ ಬಂದಿದ್ದಾರೆ.
ಯಜಮಾನ ಸೀರಿಯಲ್ ಈಗ ಸೂಪರ್ ಟ್ವಿಸ್ಟ್ ಪಡೆದಿದೆ. ಝಾನ್ಸಿ ಹಾಗೂ ರಾಘು ಮದುವೆ ಅಗ್ರಿಮೆಂಟ್ ಮುಗಿದಿದೆ. ಹಣ ಪಡೆದು ಒಂದು ತಿಂಗಳು ಝಾನ್ಸಿ ಪತಿಯಾಗಿದ್ದ ರಾಘು, ತನ್ನ ಕೆಲಸ ಮುಗಿಸಿ ಮನೆಗೆ ಹೋಗಿದ್ದಾನೆ. ಕುಟುಂಬಸ್ಥರ ಖುಷಿಯೇ ರಾಘು ಖುಷಿ. ಝಾನ್ಸಿ ಮರೆತು ಅನಿತಾ ಮದುವೆ ಆಗೋದು ರಾಘು ಮುಂದಿರುವ ಗುರಿ. ತಾತ, ಝಾನ್ಸಿಗೆ ಸಿಇಒ ಪಟ್ಟ ನೀಡ್ತಿದ್ದಂತೆ ಎಲ್ಲವನ್ನೂ ಮರೆತು ಅಹಂಕಾರದಿಂದ ಮೆರೆಯುತ್ತಿದ್ದ ಝಾನ್ಸಿ ಒಳಗೊಳಗೆ ನೊಂದಂತಿದೆ. ರಾಘುವನ್ನು ಆಕೆ ಮಿಸ್ ಮಾಡಿಕೊಳ್ತಿರುವಂತೆ ಕಾಣ್ತಿದೆ. ಎಲ್ಲವನ್ನೂ ಸರಿ ಮಾಡಲು ಈಗ ಭೂಮಿಕಾ ಹಾಗೂ ಅರ್ಜುನ್ ಎಂಟ್ರಿಯಾಗಿದೆ. ರಾಘು ಇರುವಾಗ ಕತ್ತಿನಲ್ಲಿದ್ದ ಮಾಂಗಲ್ಯ ಸರ ತೆಗೆಯಲು ಮುಂದಾಗಿದ್ದ ಝಾನ್ಸಿ, ರಾಘು ಹೋದ್ಮೇಲೂ ಮಾಂಗಲ್ಯ ಸರ ತೆಗೆದಿಲ್ಲ. ಆಕೆ ವರ್ತನೆ ನೋಡಿ ಅರ್ಜುನ್ ಗೆ ಅನುಮಾನ ಬಂದಿದೆ. ಝಾನ್ಸಿ ಮನಸ್ಸಿನಲ್ಲಿ ರಾಘು ಇದ್ದಾನೆ ಎಂಬ ಅನುಮಾನವನ್ನು ಅರ್ಜುನ್ ವ್ಯಕ್ತಪಡಿಸಿದ್ದಾನೆ. ಕೊನೆಗೂ ಅರ್ಜುನ್ ಅನುಮಾನ ಸತ್ಯವಾಗಿದೆ. ಝಾನ್ಸಿ ಕುಡಿದ ಮತ್ತಿನಲ್ಲಿ ರಾಘುವನ್ನು ನೆನೆದಿದ್ದಾಳೆ. ಅವನನ್ನು ಮರೆಯಲು ಸಾಧ್ಯವಾಗ್ತಿಲ್ಲ ಎಂದಿದ್ದಾಳೆ. ಐ ಲವ್ ಯೂ ರಾಘು ಎಂದಿದ್ದಾಳೆ.
ಕಲರ್ಸ್ ಕನ್ನಡ (Colors Kannada) ಇಂದಿನ ಪ್ರೋಮೋದಲ್ಲಿ ಝಾನ್ಸಿ ಮನೆಯಲ್ಲಿ ಭೂಮಿಕಾ ಹಾಗೂ ಅರ್ಜುನ್ ಕಾಣಿಸಿಕೊಂಡಿದ್ದಾರೆ. ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದು ನಿಜವಾ ಎಂದು ಪ್ರಶ್ನೆ ಮಾಡಿದ್ದಾರೆ., ಝಾನ್ಸಿ ಹಾಗೂ ರಾಘುಗಿಂತ ಭೂಮಿಕಾ – ಅರ್ಜುನ್ ಜೋಡಿ ಚೆನ್ನಾಗಿದೆ ಎಂದಿದ್ದಾರೆ. ಸದಾ ನ್ಯಾಚ್ಯುಲರ್ ಆಗಿ ಆಕ್ಟಿಂಗ್ ಮಾಡುವ ಅನುಪಮಾ, ಈಗ್ಲೂ ತಮ್ಮ ನಟನೆ ಮೂಲಕ ಫ್ಯಾನ್ಸ್ ಮನಸ್ಸು ಕದ್ದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಕ್ಕ ಸೀರಿಯಲ್ ಅನುಪಮಾ ಗೌಡ ಅವರಿಗೆ ಹೆಸರು ತಂದುಕೊಟ್ಟಿತ್ತು. ಅದಕ್ಕಿಂತ ಮೊದಲು ಅನೇಕ ಸೀರಿಯಲ್ ನಲ್ಲಿ ನಟಿಸಿದ್ದರೂ ಅನುಪಮಾ ಅವರನ್ನು ಅಕ್ಕ (Akka) ಎಂದೇ ಜನ ಈಗ್ಲೂ ಕರೆಯುತ್ತಾರೆ. ಸೀರಿಯಲ್ ನಂತ್ರ ಸಿನಿಮಾಕ್ಕೆ ಬಣ್ಣ ಹಚ್ಚಿದ್ದ ಅನುಪಮಾ ಗೌಡ ನಂತ್ರ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಕ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಅನುಪಮಾ ಮಿಂಚಿದ್ದರು. ಒಂದು ಭೂಮಿಕಾ ಇನ್ನೊಂದು ದೇವಿಕಾ. ಅಕ್ಕ ಸೀರಿಯಲ್ ಗೆ 12 ವರ್ಷ ತುಂಬಿದೆ. ಈ ಸೀರಿಯಲ್ ನಲ್ಲಿ ಭೂಮಿಕಾ ಆಕಾಶ್ ಜೋಡಿ ಪ್ರಸಿದ್ಧಿ ಪಡೆದಿತ್ತು. ಆದ್ರೆ ಯಜಮಾನ ಸೀರಿಯಲ್ ನಲ್ಲಿ ಭೂಮಿಕಾ ಜೊತೆ ಆಕಾಶ್ ಬದಲು ಅರ್ಜುನ್ ಬಂದಿದ್ದು ಏಕೆ? ಈ ಅನುಮಾನ ಕೂಡ ಫ್ಯಾನ್ಸ್ ತಲೆಯಲ್ಲಿ ಹೊಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.