ದೈಹಿಕ ಸಂಪರ್ಕ ಬೆಳೆಸುವಾಗ ಡ್ರೈ ರನ್ ಸಮಸ್ಯೆ, ಇದಕ್ಕಿದ್ಯಾ ಪರಿಹಾರ?

By Suvarna News  |  First Published Oct 10, 2022, 2:32 PM IST

ಸೆಕ್ಸ್ ವೇಳೆ ಕೆಲವೊಬ್ಬರು ಡ್ರೈ ರನ್ ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆಯಿಂದ ಬದುಕಿಗೆ ಬಹುದೊಡ್ಡ ಹೊಡೆತ ಸಿಗಬಹುದು. ಅಷ್ಟಕ್ಕೂ ಸೆಕ್ಸ್ನಲ್ಲಿ ಖುಷಿ, ಆನಂದ ಕೊಟ್ಟರೂ ಈ ಡ್ರೈ ರನ್ ಸಮಸ್ಯೆ ಯಾಕೆ ಬರುತ್ತೆ? ಅದರಿಂದ ಆಗುವ ಅಪಾಯ ಏನು? ಆ ಡೀಟೇಲ್ಸ್ ಇಲ್ಲಿದೆ.


ಲೈಂಗಿಕತೆಯಲ್ಲಿ ಕೆಲವು ಸೂಕ್ಷ್ಮ ಸಮಸ್ಯೆಗಳು ಗೊತ್ತಾಗೋದೇ ಇಲ್ಲ. ಕೆಲವೊಮ್ಮೆ ಗೊತ್ತಾದರೂ ನೆಗ್ಲೆಕ್ಸ್ ಮಾಡಿ ಬಿಡ್ತೀವಿ. ಸೆಕ್ಸ್ ವೇಳೆಗಿನ ಡ್ರೈ ರನ್ ಸಮಸ್ಯೆಯ ವಿಚಾರದಲ್ಲೂ ಅಷ್ಟೇ. ಎಲ್ಲ ಸರಿಯಾಗಿದೆ ಅಂದುಕೊಂಡರೆ ಊಹೂಂ,, ಸಮ್‌ ಥಿಂಗ್ ಈಸ್ ಗೋಯಿಂಗ್ ರಾಂಗ್. ಅಚ್ಚರಿ ಅಂದರೆ ಈ ಡ್ರೈ ರನ್ ಸಮಸ್ಯೆಯಿಂದ ಸೆಕ್ಸ್ ವೇಳೆಗಿನ ಖುಷಿ, ಆನಂದ ಒಂಚೂರೂ ಕಡಿಮೆ ಆಗೋದಿಲ್ಲ. ಆದರೆ ಇದರಿಂದ ವೈವಾಹಿಕ ಬದುಕಿಗೆ ಮಾತ್ರ ಹೊಡೆತ ಇದೆ. ಹೆಚ್ಚಾಗಿ ಮಧುಮೇಹ ಅಂದರೆ ಡಯಾಬಿಟೀಸ್ ಇರುವವರಲ್ಲಿ ಸೆಕ್ಸ್ ವೇಳೆ ಈ ಡ್ರೈ ರನ್ ಸಮಸ್ಯೆ ಇರುತ್ತೆ. ಇಷ್ಟೋ ದಂಪತಿಗಳಲ್ಲಿ ಈ ಸಮಸ್ಯೆ ತನಗಿದೆ ಅಂತ ಪುರುಷನಿಗಾಗಲೀ ಮಹಿಳೆಯರಿಗಾಗಲೀ ಗೊತ್ತಾಗೋದೇ ಇಲ್ವಂತೆ. ಏಕೆಂದರೆ ಈ ಸಮಸ್ಯೆ ಇದ್ದಾಕ್ಷಣ ಸೆಕ್ಸ್ ನಿಂದ ಸಿಗೋ ಖುಷಿಯಲ್ಲಿ ಏನೂ ವ್ಯತ್ಯಾಸ ಆಗೋದಿಲ್ಲ. ಆದರೆ ಮನೆಗೊಂದು ಪುಟ್ಟ ಪಾಪು ಬರ್ಬೇಕು ಅಂತ ಕನಸು ಕಾಣುತ್ತಿರುವ ದಂಪತಿಗಳಾದರೆ ಪುರುಷನಿಗೆ ಡ್ರೈ ರನ್ ಸಮಸ್ಯೆ ಇದ್ದರೆ ಅವರಿಗೆ ಮಕ್ಕಳಾಗೋದಿಲ್ಲ.

ಸರಳಾಗೆ 35 ವರ್ಷ. ಈಕೆಯ ಗಂಡನಿಗೆ 39 ವರ್ಷ. ಸರಳಾ ತನ್ನ ಸಂಗಾತಿಯೊಂದಿಗೆ ಲೈಂಗಿಕತೆಯಲ್ಲಿ ತೊಡಗಿದ್ದಾಗ ಇಬ್ಬರೂ ಎಷ್ಟೇ ಆನಂದವನ್ನು ಅನುಭವಿಸಿದರೂ, ಪರಾಕಾಷ್ಠೆಯನ್ನು ತಲುಪಿದರೂ ವೀರ್ಯ ಹೊರಬರೋದಿಲ್ಲ. ಆಕೆಯ ಪತಿಗೆ ಕಳೆದ 10 ವರ್ಷಗಳಿಂದ ಮಧುಮೇಹವಿದೆ. ಹಾಗಂತ ಮಧುಮೇಹ ಸೆಕ್ಸ್ ಡ್ರೈವ್ ಅನ್ನು ಕಿತ್ತುಕೊಂಡಿಲ್ಲ. ಅವರ ಲೈಂಗಿಕತೆ, ಸಂಬಂಧ ಉತ್ತಮವಾಗಿದೆ, ಆದರೆ ಸಮಸ್ಯೆ ಒಂದೇ ವೀರ್ಯ (Sperm) ಹೊರಬರುವುದಿಲ್ಲ. ಇದಕ್ಕೆ ಕಾರಣ ಏನಿರಬಹುದು ಅಂತ ಆಕೆಗೆ ತಿಳಿಯೋದಿಲ್ಲ. ಸಣ್ಣ ಗಾಬರಿ ಇರುತ್ತೆ. ಇದು ಬೇರೆ ಯಾವುದಾದರೂ ಕಾಯಿಲೆಯ ಲಕ್ಷಣವೇ ಅಂತ ಸರಳಾ ಈ ಬಗ್ಗೆ ತುಂಬಾ ಚಿಂತಿತಳಾಗುತ್ತಾಳೆ. ಇದನ್ನು ವೈದ್ಯರು ಅಥವಾ ಲೈಂಗಿಕಶಾಸ್ತ್ರಜ್ಞರಿಂದ ಪರೀಕ್ಷಿಸಬೇಕೇ ಅನ್ನೋ ಬಗ್ಗೆ ಆಕೆಗೆ ಸಂದೇಹ.

Tap to resize

Latest Videos

ಈ ರಾಶಿಯವರಿಗೆ ಕಡಿಮೆ ವಯಸ್ಸಿನ ಗಂಡಸರೆಡೆಗೆ ಅಟ್ರಾಕ್ಷನ್ ಜಾಸ್ತಿ!

ಈ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾಗ ಅವರು ಕೊಟ್ಟ ಉತ್ತರ ಇದು ಡ್ರೈ ರನ್ ಸಮಸ್ಯೆ ಅಂತ. ಅಷ್ಟಕ್ಕೂ ಈ ಡ್ರೈ ರನ್ ಸಮಸ್ಯೆ ಏನು ಅನ್ನೋದಕ್ಕೆ ಉತ್ತರವನ್ನೂ ತಜ್ಷರು ಕೊಡುತ್ತಾರೆ. ಅನೇಕ ಬಾರಿ ಮಧುಮೇಹದಿಂದ  (Diabetic) ಪುರುಷರಲ್ಲಿ ನರಗಳ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರಲ್ಲಿ ಸೆಕ್ಸ್ ಡ್ರೈವ್(Sex drive) ಇರುತ್ತದೆ, ಖಾಸಗಿ ಭಾಗದಲ್ಲೂ ಉದ್ವೇಗವೂ ಇರುತ್ತದೆ. ಕ್ಲೈಮ್ಯಾಕ್ಸ್ ಹಂತವನ್ನು ಕೂಡ ತಲುಪುತ್ತಾರೆ, ಆನಂದವನ್ನೂ ಅನುಭವಿಸುತ್ತಾರೆ, ಆದರೆ ವೀರ್ಯ ಹೊರಬರುವುದಿಲ್ಲ. ಆಂಟಿಗ್ರೇಡ್ ಎಜಾಕ್ಯುಲೇಷನ್ ಆಗುತ್ತದೆ. ಈ ಸ್ಥಿತಿಯಲ್ಲಿ ವೀರ್ಯ ಮೂತ್ರನಾಳಕ್ಕೆ ಹೋಗುತ್ತದೆ. ಈ ಸ್ಥಿತಿಯನ್ನು ರೆಟ್ರೋಗ್ರೇಡ್ ಸ್ಖಲನ ಎಂದು ಕರೆಯಲಾಗುತ್ತದೆ. ಇಂಗ್ಲಿಷಿನಲ್ಲಿ ಡ್ರೈ ರನ್ (Dry run) ಎನ್ನುತ್ತಾರೆ. ವೀರ್ಯವು ಮೂತ್ರಕೋಶವನ್ನು ಪ್ರವೇಶಿಸಿದರೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಅಂತಹ ದೈಹಿಕ ಸಂಬಂಧ (Physical relation)ದಲ್ಲಿ ಮಹಿಳೆ ಗರ್ಭಧರಿಸಲು ಸಾಧ್ಯವಾಗುವುದಿಲ್ಲ.

ಮಾಜಿ ಗರ್ಲ್‌ಫ್ರೆಂಡ್ ಜೊತೆಗಿನ ಇಂಟಿಮೇಟ್‌ ಪೋಟೋ ಗಂಡ ಇನ್ನೂ ಇಟ್ಕೊಂಡಿದ್ದಾನೆ, ಏನ್ಮಾಡ್ಮಿ ?

ಅಷ್ಟಕ್ಕೂ ಇದು ಡ್ರೈ ರನ್ ಸಮಸ್ಯೆ ಹೌದಾ ಅಲ್ವಾ ಅನ್ನೋದನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸಲೇಬೇಕು. ಸಂಭೋಗದ ಸಮಯದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ತೃಪ್ತಿ. ಅದು ಪಾಲುದಾರರಿಬ್ಬರಿಗೂ ಲಭ್ಯವಿರಬೇಕು. ಇಲ್ಲಿ ಸರಳಾ ಪತಿಗೆ ಮಧುಮೇಹವಿದೆ ಎಂದುಕೊಂಡರೆ ಅದಕ್ಕೆ ಡ್ರೈ ರನ್ ಸಮಸ್ಯೆಯೇ ಕಾರಣ ಇರಬಹುದು ಎನ್ನಲೂ ಆಗೋದಿಲ್ಲ. ಇದು ಮಧುಮೇಹಿಗಳು ಸಾಮಾನ್ಯವಾಗಿ ಬಳಸುವ ಔಷಧಿಯಾದ ಟ್ಯಾಮ್ಸುಲೋಸಿನ್‌ನ ಪರಿಣಾಮಗಳಿಂದಲೂ ಆಗಿರಬಹುದು. ಇದು ಡ್ರೈ ರನ್ ಹೌದೋ ಅಲ್ಲವೋ ಅಂತ ಖಚಿತಪಡಿಸಿಕೊಳ್ಳಲು ಸೆಕ್ಸ್‌ನಲ್ಲಿ ಕ್ಲೈಮ್ಯಾಕ್ಸ್ ಹಂತ ತಲುಪಿದ ನಂತರ ಮೂತ್ರದ ಮಾದರಿಯನ್ನು ಪರೀಕ್ಷಿಸಬಹುದು. ಇದು ಡ್ರೈ ರನ್ ಸಮಸ್ಯೆಯೇ ಆಗಿದ್ದರೆ ಸಂಭೋಗದ ನಂತರ ಮೂತ್ರದಲ್ಲಿ ಸಾಕಷ್ಟು ವೀರ್ಯವು ಕಂಡುಬರುತ್ತದೆ. ಇದರಿಂದ ಬೇರೆ ಸಮಸ್ಯೆ(Problem) ಇಲ್ಲದಿದ್ದರೂ ಮಕ್ಕಳಾಗಬೇಕು ಅಂದುಕೊಂಡವರಿಗೆ ನಿರಾಸೆ ಆಗುತ್ತದೆ. ಹೀಗಾಗಿ ಈ ಬಗ್ಗೆ ತಜ್ಞ ವೈದ್ಯ(Doctor)ರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.

click me!